ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಮಳೆ ನಿಲ್ಲುವ ಲಕ್ಷಣಗಳು ಕಾಣ್ತಿಲ್ಲ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನಲೆ ಹಾಗೂ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ, ಟ್ರಫ್ ಉಂಟಾದ ಪರಿಣಾಮ ಮಳೆಯಾಗುತ್ತಿದೆ. ಆದ್ದರಿಂದ ಬೆಂಗಳೂರಲ್ಲಿ ವರುಣ ಅಬ್ಬರಿಸಿ ಬೊಬ್ಬರಿದ್ದಾನೆ. ನಿನ್ನೆ ಸಂಜೆಯಿಂದ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಮಂದಿ ನಡುಗಿದ್ದಾರೆ.
Advertisement
ಭಾರೀ ಮಳೆಯಿಂದ ಬಿಬಿಎಂಪಿಗೆ ಸುಮಾರು 30 ಕ್ಕೂ ಹೆಚ್ಚು ದೂರುಗಳು ಬಂದಿವೆ. ಪುಟ್ಟೇನಹಳ್ಳಿ ಬಳಿಯ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಕೊಡಿಗೆಹಳ್ಳಿ ಬಳಿ ರಸ್ತೆಯಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ಕಾಡುಗೋಡಿ, ಗೊಟ್ಟಿಗೆರೆ, ಹೊಸಕೆರೆಹಳ್ಳಿಯಲ್ಲಿ ರಸ್ತೆಗಳು ಕೂಡ ಜಲಾವೃತಗೊಂಡಿತ್ತು. ಇನ್ನು ಸುದಾಮನಗರದಲ್ಲಿ ಮನೆಗೆ ನೀರು ನುಗ್ಗಿದ್ದ ಬಗ್ಗೆ ದೂರು ದಾಖಲಾಗಿದೆ. ಇದನ್ನೂ ಓದಿ: ಪುನೀತ ನಮನ ಕಾರ್ಯಕ್ರಮ – ಯಾರೆಲ್ಲ ಗಣ್ಯರು ಬರುತ್ತಿದ್ದಾರೆ?
Advertisement
Advertisement
ಇತ್ತ ಬಾಣಸವಾಡಿ, ಕುವೆಂಪು ನಗರದಲ್ಲಿ ಮನೆಗೆ ನೀರು ನುಗ್ಗಿದೆ. ಬೇಗೂರಿನಲ್ಲಿ ಭಾರೀ ಮಳೆಗೆ ಮನೆಗಳಿಗೆ ನೀರು ನುಗ್ಗಿದೆ. ಜಕ್ಕೂರು, ಹೊರಮಾವು ರೋಡ್, ಜಯನಗರ ಬಳಿ ಮನೆಗೆ ನೀರು ನುಗ್ಗಿದ ಬಗ್ಗೆ ಬಿಬಿಎಂಪಿಗೆ ದೂರು ನಿಡಲಾಗಿದೆ. ಎಚ್ ಬಿ ಆರ್ ಲೇ,ಕೆ ಆರ್ ಮಾರ್ಕೆಟ್, ವಸಂತನಗರ, ಸುಬೇದಾರ್ ಪಾಳ್ಯ, ಹೆಬ್ಬಾಳ, ಎಚ್ ಎಸ್ ಆರ್ ಲೇ ಔಟ್, ಟಿ ದಾಸರಹಳ್ಳಿ, ಚೊಕ್ಕಸಂದ್ರ, ಸಿಂಗಸಂದ್ರದಲ್ಲಿ ರಸ್ತೆ ಜಲಾವೃತವಾದ ಬಗ್ಗೆಯೂ ದೂರು ನೀಡಲಾಗಿದೆ.
Advertisement
ರಾತ್ರಿಯ ವೇಳೆ ಮಳೆ ನೀರು ಕ್ಲಿಯರ್ ಆಗಿದೆ. ಬೆಂಗಳೂರಿನಲ್ಲಿ ಒಟ್ಟು 6 ಕಡೆ ಮರಗಳು ಧರೆಗುರುಳಿದಿವೆ. ಜೆಪಿ ನಗರ, ಬಸವನಗುಡಿ, ಗಣೇಶ್ ಮಂದಿರ ಬಳಿ, ಅಟ್ಟೂರ್ ವಾರ್ಡ್, ಬಗುಳುಗುಂಟೆ, ದೀಪಾಂಜಲಿನಗರದಲ್ಲಿ ಮರಗಳು ಉರುಳಿಬಿದ್ದಿವೆ.
ರಾಜ್ಯದ ಕರಾವಳಿ ಜಿಲ್ಲೆಗಳಿಗೆ ಮುಂದಿನ 5 ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಜೊತೆಗೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರಕ್ಕೆ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನೂ ಎರಡು ದಿನ ಬೆಂಗಳೂರಲ್ಲಿ ಮಳೆಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.