ರಾಯಚೂರು: ಶುಕ್ರವಾರ ರಾತ್ರಿ ರಾಯಚೂರು ತಾಲೂಕಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ.
ತಾಲೂಕಿನ ಸಿಂಗನೋಡಿ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಕಟಾವಿಗೆ ಬಂದಿದ್ದ ನೂರಾರು ಎಕರೆ ಭತ್ತ ಹಾಳಾಗಿದೆ. ಭತ್ತದ ಕಾಳುಗಳು ನೆಲಕ್ಕುರಳಿದ್ದು, ಲಕ್ಷಾಂತರ ರೂಪಾಯಿ ಹಾನಿಗೊಳಗಾಗಿದೆ. ಸಿಂಗನೋಡಿಯ ಗೋಕರಪ್ಪ ಮನೆಯ ಟಿನ್ ಗಾಳಿಗೆ ಹಾರಿಹೋಗಿದ್ದು, ಮನೆಯಲ್ಲಿದ್ದವರಿಗೆ ಸಣ್ಣ ಪುಟ್ಟಗಾಯಗಳಾಗಿವೆ.
ಮನೆಯಲ್ಲಿದ್ದ ದವಸ ಧಾನ್ಯ ಹಾಳಾಗಿದೆ. ಗ್ರಾಮದಲ್ಲಿ ಎರಡು ಮರಗಳು ಗಾಳಿ ಮಳೆಗೆ ನೆಲಕ್ಕುರಳಿವೆ. ಒಂದೆರಡು ದಿನದಲ್ಲಿ ಭತ್ತವನ್ನ ಕಟಾವು ಮಾಡಿ ಮಾರಾಟ ಮಾಡಬೇಕಿದ್ದ ರೈತರು, ಇದೀಗ ಇಡೀ ಬೆಳೆಯನ್ನೇ ಕಳೆದುಕೊಂಡು ಕಂಗಾಲಾಗಿದ್ದಾರೆ. ಇಷ್ಟೆಲ್ಲಾ ಹಾನಿಯಾದ್ರೂ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.