ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಜಿಲ್ಲೆಯಾದ್ಯಂತ ಇಂದೂ ಕೂಡ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ.
ವರುಣನ ಅವಾಂತರದಿಂದ ಮುಕ್ಕೊಡ್ಲಿನಲ್ಲಿ ಸುಮಾರು 40ಕ್ಕೂ ಹೆಚ್ಚು ಮಂದಿ ಸಹಾಯಕ್ಕೆ ಅಂಗಲಾಚುತ್ತಿದ್ದಾರೆ. 100ಕ್ಕೂ ಹೆಚ್ಚು ಮಂದಿ ದೇವಸ್ತೂರಿನಲ್ಲೂ ಪ್ರವಾಹದಲ್ಲಿ ಸಿಲುಕಿದ್ದಾರೆ. ಗ್ರಾಮಗಳು ಜಲಾವೃತವಾಗಿದ್ದು, ಜನರು ತಮ್ಮ ಪ್ರಾಣ ರಕ್ಷಣೆಗಾಗಿ ಗುಡ್ಡ ಏರಿ ನಿಂತಿದ್ದಾರೆ.
Advertisement
Advertisement
ಮಡಿಕೇರಿ ಸಮೀಪದ ಮುಕ್ಕೊಡ್ಲು, ದೇವಸ್ತೂರು ಗ್ರಾಮ ಹೀಗೆ ಜಿಲ್ಲೆಯ ಬಹುತೇಕ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಂಪರ್ಕವಿಲ್ಲದೇ ನೂರಾರು ಜನ ಕಣ್ಮರೆಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಮಡಿಕೇರಿಯಲ್ಲಿ ಮಳೆಗೆ ಮೂರು ಸಾವು- ಇತ್ತ ಜಾರು ಬಂಡಿಯಂತೆ ಜಾರಿ ಹೋಯ್ತು ಕಟ್ಟಡ: ವಿಡಿಯೋ ನೋಡಿ
Advertisement
ಕೊಡಗಿನ ಬಹುತೇಕ ಪ್ರದೇಶಗಳು ನೀರಿನಿಂದ ಮುಳುಗಡೆಯಾಗಿದ್ದು, ಸೋಮವಾರಪೇಟೆ ತಾಲೂಕಿನ ಮೂವತೊಕ್ಲು ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಮುಗಿಯುತ್ತಿಲ್ಲ ಮಳೆ ಹಾನಿ – ಎದುರಾಗಲಿದೆ ಮತ್ತಷ್ಟು ಸಂಕಷ್ಟ!
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=KlrIxD8piuU