DistrictsKarnatakaLatestMain PostUdupi

ಉಡುಪಿಯ ನಾವುಂದ ಗ್ರಾಮದಲ್ಲಿ ನೆರೆ – ಮನೆ ತೊರೆಯಲು ಜನರ ನಕಾರ, ಕಾಳಜಿ ಕೇಂದ್ರ ಖಾಲಿ

Advertisements

ಉಡುಪಿ: ದಕ್ಷಿಣ ಕನ್ನಡದಂತೆ ಉಡುಪಿ ಜಿಲ್ಲೆಯಲ್ಲಿಯೂ ಧಾರಾಕಾರ ಮಳೆ ಹಿನ್ನೆಲೆ ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಗ್ರಾಮದಲ್ಲಿ ನೆರೆ ಉಂಟಾಗಿದೆ. ಹೀಗಾಗಿ ನೆರೆಪೀಡಿತರಿಗೆ ಲೈಫ್ ಜಾಕೆಟ್ ಮತ್ತು ಫ್ಲೋಟಿಂಗ್ ಟ್ಯೂಬ್ ಹಂಚಿಕೆ ಮಾಡಲಾಗಿದೆ.

ಕುಂದಾಪುರ ಎಸಿ ರಾಜು ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ, ದೋಣಿ ನಡೆಸುವ ಯುವಕರಿಗೆ ಲೈಫ್ ಜಾಕೆಟ್ ವಿತರಣೆ ಮಾಡಿದ್ದಾರೆ. ನೆರೆ ಕಾರಣಕ್ಕೆ ಈವರೆಗೆ ಯಾರನ್ನೂ ಕೂಡ ಶಿಫ್ಟ್ ಮಾಡಿಲ್ಲ. ಹಿಗಾಗಿ ಜನರು ಕಾಳಜಿ ಕೇಂದ್ರಕ್ಕೂ ಬರ್ತಿಲ್ಲ. ನಾವುಂದ, ಬಡಾಕೆರೆ-ನಾಡ ಗ್ರಾಮದವರಿಗೆ ಮಾಡಿದ ಕಾಳಜಿ ಕೇಂದ್ರ ಬಿಕೋ ಅನ್ನುತ್ತಿದೆ. ಕೊಠಡಿಗಳ ಬೀಗ ಓಪನ್ ಆಗಿಲ್ಲ. ಇದನ್ನೂ ಓದಿ: 2 ವಾರಗಳ ಮಳೆಗೆ ದಕ್ಷಿಣ ಕನ್ನಡ ತತ್ತರ – ಫಲ್ಗುಣಿ ಅಬ್ಬರಕ್ಕೆ ಇಡೀ ಗ್ರಾಮವೇ ಆಪೋಷನ

ಇತ್ತ ಸೌಪರ್ಣಿಕಾ ನದಿ ಹರಿಯುತ್ತಿರುವ ಪರಿಣಾಮ ನಟಿ ದೀಪಿಕಾ ಪಡುಕೋಣೆಯ ಹುಟ್ಟೂರು ಪಡುಕೋಣೆ, ಮರವಂತೆ, ನಾಡ ಹಡವು ಗ್ರಾಮಗಳು ದ್ವೀಪದಂತಾಗಿ ಬಿಟ್ಟಿದೆ. ಕೊಲ್ಲೂರು ಮಾರಣಕಟ್ಟೆ ರಸ್ತೆ ಜಲಾವೃತವಾಗಿ ಸಂಪರ್ಕ ಕಳೆದುಕೊಂಡಿದೆ. ಪಡುಕೊಣೆಗೆ ಶಾಸಕ ಸುಕುಮಾರ ಶೆಟ್ಟಿ, ನಾವುಂದಕ್ಕೆ ಎಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ರಹ್ಮಗಿರಿ ಬಳಿ ಕಾರು, ಬೈಕ್ ಮೇಲೆ ಮರ ಉರುಳಿದ್ದು, ಬೈಕ್ ಸವಾರ ಗಾಯಗೊಂಡಿದ್ದಾನೆ. ಇನ್ನೂ ಮೂರು ದಿನ ಈ ಮೂರು ಜಿಲ್ಲೆಗಳಲ್ಲಿ ಭಾರೀ ಮಳೆ ಆಗಲಿದ್ದು, ರೆಡ್‍ಅಲರ್ಟ್ ಪ್ರಕಟಿಸಲಾಗಿದೆ.

Live Tv

Leave a Reply

Your email address will not be published.

Back to top button