ಬೆಂಗಳೂರು: ರಾಜ್ಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಶೃಂಗೇರಿ, ಎನ್.ಆರ್ ಪುರ ಮತ್ತು ಕೊಪ್ಪ ತಾಲೂಕಿನಲ್ಲೂ ಭಾರೀ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಳೆದ ಒಂದು ವಾರದಿಂದ ಬಿಡುವು ನೀಡಿದ್ದು, ಈಗ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿದೆ. ಕೊಟ್ಟಿಗೆಹಾರ, ಚಾರ್ಮಾಡಿ, ಕುದುರೆಮುಖ, ಕೆರೆಕಟ್ಟೆಯಲ್ಲಿ ಭರ್ಜರಿ ಮಳೆಯಾಗಿದೆ. ಭಾರೀ ಮಳೆಗೆ ನದಿಗಳು ಮೈದುಂಬಿ ಹರಿಯುತ್ತಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ಹರಿವಿನ ಮಟ್ಟದಲ್ಲಿ ಏರಿಕೆ ಕಂಡಿದೆ.
Advertisement
#Mumbai: Severe waterlogging in Chembur area following continuous rainfall in the city. Indian Meteorological Department predicts intermittent rain with heavy to very heavy falls at few places in city and suburbs pic.twitter.com/nAAhtDAYaw
— ANI (@ANI) July 27, 2019
Advertisement
ಇತ್ತ ಮುಂಗಾರು ಮಳೆ ಅಬ್ಬರಕ್ಕೆ ಮಹಾನಗರಿ ಮುಂಬೈ ತತ್ತರಿಸಿ ಹೋಗಿದೆ. ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಶುಕ್ರವಾರ ಸುರಿದ ಭಾರೀ ಮಳೆ ಕಳೆದ 15 ವರ್ಷದ ಹಿಂದಿನ ದುಸ್ಥಿತಿ ನೆನಪಿಸಿದೆ.
Advertisement
ನಗರದ ರಸ್ತೆಗಳು ಜಲಾವೃತವಾಗಿದ್ದು, ಬಸ್ ನಿಲ್ದಾಣ, ಏರ್‌ಪೋರ್ಟ್‌ಗಳಿಗೆ ನೀರು ನುಗ್ಗಿದೆ. ಹೀಗಾಗಿ ಮುಂಬೈಗೆ ತೆರಳಬೇಕಿದ್ದ 17 ವಿಮಾನಗಳನ್ನು ಬೇರೆಡೆ ವರ್ಗಾಯಿಸಲಾಗಿದೆ. ಇನ್ನೈದು ದಿನ ಮುಂಬೈನಲ್ಲಿ ಭಾರೀ ಮಳೆಯಾಗುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.