ಬಳ್ಳಾರಿ/ಕೋಲಾರ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿತ್ತು. ಪರಿಣಾಮ ಸಾಕಷ್ಟು ಅನಾಹುತ ಸೃಷ್ಠಿಯಾಗಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ನೂರಾರು ಟನ್ ಮಾವು ಹಾಗೂ ಟೊಮೆಟೋ ಬೆಳೆ ನೆಲ ಕಚ್ಚಿದೆ. ಸುಮಾರು 440 ಹೆಕ್ಟೇರ್ ಪ್ರದೇಶದ ತೋಟದ ಬೆಳೆಗಳಿಗೆ ಹಾನಿಯಾಗಿದೆ. ಅಂದಾಜು 3.82 ಕೋಟಿಯಷ್ಟು ಬೆಳೆ ಹಾನಿಯಾಗಿದೆ. ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದರ ಲೆಕ್ಕಾ ವರದಿ ಮಾಡಲು ಮುಂದಾಗಿದ್ದಾರೆ.
Advertisement
ಬಳ್ಳಾರಿಯಲ್ಲಿ ಗುರುವಾರ ಸಂಜೆ ಸುರಿದ ಧಾರಕಾರ ಮಳೆಗೆ ಸಾಕಷ್ಟು ಅನಾಹುತ ಸೃಷ್ಠಿಯಾಗಿದೆ. ಗುಡುಗು ಸಿಡಿಲು ಸಹಿತ ಸುರಿದ ಮಳೆಗೆ ಮೂವರು ಮೃತಪಟ್ಟರೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿದೆ.
Advertisement
ಕಂಪ್ಲಿ ತಾಲೂಕಿನ ಬುಕ್ಕಸಾಗರ ಗ್ರಾಮದ ವಾಜೀದ ರೈತರಿಗೆ ಸೇರಿದ ಮೂರು ಎಕರೆ ಪ್ರದೇಶದಲ್ಲಿನ ಬಾಳೆ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದೆ. ಇತ್ತ ಹಗರಿಬೊಮ್ಮನಹಳ್ಳಿ ತಾಲೂಕಿನ ಕೇಶವರಾಯನ ಬಂಡಿಯ ಬಸವರಾಜ ರೇಷ್ಮೆಗೂಡು ಮಳೆ ಗಾಳಿಗೆ ಸಂಪೂರ್ಣ ಹಾರಿ ಹೋಗಿ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.
Advertisement
ಕೂಡ್ಲಗಿ ತಾಲೂಕಿನ ಖಾನಾಹೊಸಹಳ್ಳಿ ಗ್ರಾಮದ ಅರವಿಂದ ಸಜ್ಜನ ನೆರಳೆ ಹಣ್ಣಿನ ಗಿಡಗಳೆಲ್ಲಾ ಗಾಳಿ ಮಳೆಗೆ ಉರುಳಿ ಬಿದ್ದು ಸಾಕಷ್ಟು ನಷ್ಟ ಸಂಭವಿಸಿದೆ. ಅಲ್ಲದೇ ಜಿಲ್ಲೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾರಿ ಹೋದ ಘಟನೆ ಸಂಭವಿಸಿದೆ.
Advertisement