ಬಳ್ಳಾರಿ: ಜಿಲ್ಲೆಯಲ್ಲಿ ಶನಿವಾರ ಸಂಜೆ ಸುರಿದ ಧಾರಕಾರ ಮಳೆಗೆ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಹೂವಿನಹಡಗಲಿಯಲ್ಲಿ ವಾರದ ಸಂತೆ ಬಜಾರ ಸಂಪೂರ್ಣ ಜಲಾವೃತವಾಗಿದೆ.
Advertisement
ಸಂತೆ ದಿನವಾದ ಶನಿವಾರ ಮಳೆಯಾದ ಪರಿಣಾಮ ಸಂತೆಯಲ್ಲಿ ಮಾರಾಟಕ್ಕಿಟ್ಟಿದ್ದ ತರಕಾರಿಗಳೆಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿವೆ. ಸಂತೆಯಲ್ಲಿ ತರಕಾರಿ ಮತ್ತು ಕಿರಾಣಿ ಸೇರಿದಂತೆ ಇತರೆ ಗೃಹಪಯೋಗಿ ವಸ್ತುಗಳನ್ನ ಮಾರಾಟ ಮಾಡಲು ಬಂದ ವ್ಯಾಪಾರಸ್ಥರು ತಮ್ಮ ದಾಸ್ತಾನು ನೀರು ಪಾಲಾದ್ದರಿಂದ ಕಣ್ಣೀರಿಡುವಂತೆ ಮಾಡಿದ್ರೆ, ಸಂತೆಯಲ್ಲಿ ವಸ್ತುಗಳನ್ನ ಖರೀದಿಸಲು ಬಂದ ಗ್ರಾಹಕರು ಮಳೆಯಲ್ಲಿ ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು.
Advertisement
Advertisement
ಸಂತೆ ಬಜಾರವನ್ನು ಅಭಿವೃದ್ಧಿ ಪಡಿಸುವಂತೆ ಸ್ಥಳೀತರು ಪುರಸಭೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗುತ್ತಿಲ್ಲ. ಮಳೆ ಬಂದಾಗೆಲ್ಲಾ ಅವಾಂತರ ಇದ್ದಿದ್ದೆ ಎಂದು ಸ್ಥಳೀಯರು ಪುರಸಭೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಲದೇ ಮಾಜಿ ಸಚಿವ ಪರಮೇಶ್ವರ ನಾಯ್ಕ್ ರ ಕ್ಷೇತ್ರದಲ್ಲಿನ ಸಂತೆ ಬಜಾರದ ಅವ್ಯವಸ್ಥೆಯಿಂದಾಗಿ ಶಾಸಕರು ಹೇಗೆ ಅಭಿವೃದ್ಧಿ ಕೆಲಸಗಳನ್ನೂ ಮಾಡಿದ್ದಾರೆ ಅನ್ನೋದನ್ನ ಎತ್ತಿ ತೋರಿಸುಂತೆ ಮಾಡಿದೆ.
Advertisement