ಬೆಂಗಳೂರು: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ (Rain) ಮತ್ತೆ ಆರಂಭಗೊಂಡಿದೆ. ಕೆಲವೆಡೆ ಮಳೆಯಿಂದ ಅವಾಂತರಗಳಾಗಿದ್ದು ವರದಿಯಾಗಿದೆ. ಯಾದಗಿರಿಯಲ್ಲಿ (Yadgir) ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದು, ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರ ಜನಸಂಪರ್ಕದ ಕಚೇರಿ ಆವರಣದಲ್ಲಿ ಹಲವು ಮರಗಳು ಧರೆಗುರುಳಿವೆ. ಸತತ ಒಂದು ಗಂಟೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಬೀಸುತ್ತಿರುವ ಗಾಳಿಗೆ ಕೆಲವು ಮನೆಗಳ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿವೆ.
ಮಾತಾಮಣಿಕೇಶ್ವರಿ ನಗರದಲ್ಲಿ 6 ಜನ ವಾಸವಿದ್ದ ಟಿನ್ ಶೆಡ್ ಒಂದು ಗಾಳಿಗೆ ಕುಸಿದು ಬಿದ್ದಿದೆ. ಗಾಳಿ ಮಳೆಗೆ ಜೋರಾದ ಪರಿಣಾಮ ಶೆಡ್ ಅಲ್ಲಾಡುತ್ತಿದ್ದಂತೆ ಜನ ಶೆಡ್‍ನಿಂದ ಹೊರಗೆ ಬಂದಿದ್ದಾರೆ. ಇದರಿಂದ 6 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ದಿನಸಿ ಸಾಮಾನುಗಳು ಹಾಗೂ ಇತರೆ ವಸ್ತುಗಳು ಶೆಡ್ ಕುಸಿತದಿಂದ ಹಾನಿಗೊಳಗಾಗಿವೆ. ಇದನ್ನೂ ಓದಿ: 16ನೇ ವಯಸ್ಸಿಗೆ ವಿಶ್ವದ ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರಿ ಭಾರತದ ಬಾಲಕಿ ಸಾಧನೆ
Advertisement
ಬೆಳಗಾವಿ (Belagavi) ಜಿಲ್ಲೆಯ ಕಾಗವಾಡದ ಜುಗುಳ ಗ್ರಾಮದ ಅತ್ತರ ಗಲ್ಲಿಯಲ್ಲಿ ಭಾರಿ ಬಿರುಗಾಳಿ ಮಳೆಗೆ ಸರ್ಕಾರಿ ಉರ್ದು ಶಾಲೆಯ ಮೇಲ್ಛಾವಣಿ ಹಾರಿ ಹೋಗಿದೆ. ಬಿರುಗಾಳಿಯ ತೀವ್ರತೆಗೆ ಮೇಲ್ಛಾವಣಿ 200 ಅಡಿ ದೂರ ಹಾರಿ ಹೋಗಿ ಜನವಸತಿ ಪ್ರದೇಶದಲ್ಲಿ ಬಿದ್ದಿದೆ. ಸಮೀಪದಲ್ಲಿ ಜನರು ಯಾರು ಇರದ ಕಾರಣ ಅದೃಷ್ಟಾವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
Advertisement
Advertisement
ಚಿಕ್ಕಮಗಳೂರಿನ (Chikkamagaluru) ಕೊಪ್ಪ ತಾಲೂಕಿನ ಬಸರೀಕಟ್ಟೆ, ತರೀಕೆರೆ ಹಾಗೂ ಎನ್.ಆರ್.ಪುರ, ಬಾಳೆಹೊನ್ನೂರು ಭಾಗಗಳಲ್ಲಿ ಭಾರೀ ಗಾಳಿ ಮಳೆಯಾಗಿದೆ. ತರೀಕೆರೆ ಪಟ್ಟಣದಲ್ಲಿ ಮಳೆಯಿಂದ ರಸ್ತೆಯಲ್ಲಿ ನೀರು ಹರಿದಿದ್ದು ವಾಹನ ಸವಾರರು ಪರದಾಡಿದ್ದಾರೆ.
Advertisement
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯ ಪರಿಣಾಮ ಮರವೇಮನೆ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕುಸಿದು ಬಿದ್ದಿದೆ. ಪರಿಣಾಮ ಕಟ್ಟಡದ ಪಕ್ಕದಲ್ಲಿ ಕಟ್ಟಿದ್ದ ನಾರಾಯಣಪ್ಪ ಎಂಬುವರಿಗೆ ಸೇರಿದ 80 ಸಾವಿರ ರೂ. ಮೌಲ್ಯದ ಸೀಮೆ ಹಸು ಸಾವಿಗೀಡಾಗಿದೆ. ರಾತ್ರಿ ವೇಳೆ ಕಟ್ಟಡ ಕುಸಿದು ಬಿದ್ದ ಪರಿಣಾಮ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಇದನ್ನೂ ಓದಿ: ಪೆನ್‌ಡ್ರೈವ್ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ: ಈಶ್ವರ್ ಖಂಡ್ರೆ