ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಮಳೆ ಮುಂದುವರಿದಿದೆ. ಬೆಂಗಳೂರಲ್ಲಿ ಸಂಜೆಯಿಂದ ವರುಣ ಬಿಟ್ಟು ಬಿಡದೇ ಅಬ್ಬರಿಸುತ್ತಿದ್ದಾನೆ. ಜನಜೀವನ ಅಸ್ತವ್ಯಸ್ತವಾಗಿದೆ. ಸುಲ್ತಾನ್ ಪೇಟೆ ಎಂದಿನಂತೆ ಸಂಪೂರ್ಣ ಜಲಾವೃತವಾಗಿದೆ.
Advertisement
ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತು ಹತ್ತಾರು ವಾಹನಗಳು ನೀರಲ್ಲಿ ಮುಳುಗಿವೆ. ವಾಹನ ಸವಾರರು ಪರದಾಡಿದ್ದಾರೆ. ವ್ಯಾಪಾರ ವಹಿವಾಟು ನಿಂತಿದೆ. ವಿಜಯನಗರ, ಮೋದಿ ಆಸ್ಪತ್ರೆ, ಅಗ್ರಹಾರ ದಾಸರಹಳ್ಳಿಯ ಹಲವೆಡೆ ಮರಗಳು ಉರುಳಿದೆ. ಎರಡು ಕಾರು, ಒಂದು ಟ್ರಕ್, ಎರಡು ಬೈಕ್, ಒಂದು ಆಟೋ ಜಖಂ ಆಗಿದೆ. ಎಂದಿನಂತೆ ಶಿವಾನಂದ ಅಂಡರ್ ಪಾಸ್ ನೀರಲ್ಲಿ ಮುಳುಗಿದೆ. ಇತರೆ ಜಿಲ್ಲೆಗಳಲ್ಲಿ ಮಳೆ ಬರ್ತಿದೆ.
Advertisement
Advertisement
ವಿಜಯನಗರದ ಸರಸ್ವತಿ ಪುರಂನ ನಾಲ್ಕನೇ ಕ್ರಾಸ್ ನಲ್ಲಿ ಮಳೆಗೆ ಪಾರ್ಕ್ ಒಳಗೆ ಇರೋ ಬೃಹತ್ ಮರ ಧರೆಗೆ ಉರುಳಿದ ಪರಿಣಾಮ ಎರಡು ವಿದ್ಯುತ್ ಕಂಬಗಳು ಸಹ ವಾಲಿಕೊಂಡಿದ್ದು ಕರಂಟ್ ಕೂಡ ಕಟ್ ಆಗಿದೆ. ಒಂದು ವೇಳೆ ರಸ್ತೆಗೆ ಬಿದ್ದ ಮರದ ಕೊಂಬೆ ಪಾರ್ಕ್ ಒಳಗೆ ಬಿದಿದ್ರೇ ದೊಡ್ಡ ಅನಾಹುತವೇ ಆಗಿಬಿಡ್ತಿತ್ತು. ಪಾರ್ಕ್ ನಲ್ಲಿ ವಾಕ್ ಮಾಡುತ್ತಿದ್ದವರೆಲ್ಲ ಮಳೆಯಿಂದ ರಕ್ಷಣೆ ಪಡೆಯಲು ಕುಟೀರದ ಒಳಗೆ ಹೋಗಿ ನಿಂತಿದ್ದರು. ಮರದ ಕೊಂಬೆ ಆ ಕಡೆಗೆ ಬಿದ್ದಿದ್ರೇ ದೊಡ್ಡ ಅನಾಹುತವೇ ಆಗಿ ಬಿಡುತ್ತಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.
Advertisement
ಮಲ್ಲೇಶ್ವರಂ, ಶಿವಾನಂದ ಸರ್ಕಲ್,ರೋಸ್ ಕೋರ್ಸ್ ಸುತ್ತಮುತ್ತ ಭಾರೀ ಮಳೆಯಾಗಿದ್ದು, ವಾಹನ ಸವಾರರು ಪರದಾಟ ಅನುಭವಿಸಿದರು. ಮಳೆ ಹಿನ್ನೆಲೆಯಲ್ಲಿ ಅಗ್ರಹಾರ ದಾಸರಹಳ್ಳಿಯಲ್ಲಿ ಮರ ಧರೆಗೆ ಉರುಳಿದೆ. ಬಿರುಗಾಳಿ ಮಳೆಗೆ ಸಾಲು ಸಾಲು ಮರಗಳು ನೆಲಸಮವಾಗಿವೆ. ಗೋವಿಂದರಾಜ್ ನಗರ ಮೋದಿ ಆಸ್ಪತ್ರೆಯ ಬಳಿ ಮರಗಳು ಧರೆಗೆ ಉರುಳಿವೆ. ಒಟ್ಟು ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ಮರಗಳು ಬಿದ್ದಿವೆ. ಮೋದಿ ಆಸ್ಪತ್ರೆಯ ಬಳಿ ಬೃಹತ್ ಮರ ಬಿದ್ದಿದ್ದು ಆರು ವಾನಗಳು ಜಖಂ ಆಗಿವೆ. ಎರಡು ಕಾರು, ಒಂದು ಟ್ರಕ್, ಎರಡು ಬೈಕ್, ಒಂದು ಆಟೋ ಜಖಂ ಆಗಿದೆ.
ಒಟ್ಟಿನಲ್ಲಿ ಭಾರೀ ಮಳೆಗೆ ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ರಾಜಾಜಿನಗರ, ಕೆಂಗೇರಿ, ಚಾಮರಾಜಪೇಟೆ, ಸರಸ್ವತಿಪುರಂ ಸೇರಿದಂತೆ ಹಲವೆಡೆ ಮರಗಳು ಉರುಳಿ ಬಿದ್ದಿದ್ದು, ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ. ಇದನ್ನೂ ಓದಿ: ಮಸೀದಿಯಿರುವ 100 ಮೀ. ಒಳಗೆ ಹನುಮಾನ್ ಚಾಲೀಸಾ ಪಠಿಸುವಂತಿಲ್ಲ: ಮಹಾರಾಷ್ಟ್ರ ಸರ್ಕಾರ