ಬೆಂಗಳೂರು: ಉತ್ತರ ಕನ್ನಡ, ಉಡುಪಿ, ಮಂಗಳೂರು (Mangaluru) ಸೇರಿದಂತೆ ಮಲೆನಾಡಿನ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು (Rain) ಹಲವೆಡೆ ಜನ ಜೀವನ ಅಸ್ತವ್ಯಸ್ಥವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ನದಿ ನೀರು ಹೆಚ್ಚಳವಾಗಿ ಅಂಕೋಲ ತಾಲೂಕಿನ ಬಿಳೆಹೊಂಗಿ, ಹೊನ್ನೆಬೈಲು, ಮಂಜುಗುಣಿಯಲ್ಲಿ ರಸ್ತೆ ಮತ್ತು ಮನೆಗಳು ಜಲಾವೃತವಾಗಿವೆ. ಹೊನ್ನೆಬೈಲಿನಲ್ಲಿ 20 ಮನೆ ಜಲಾವೃತವಾಗಿದ್ದು, ಬಿಳೆಹೊಂಗಿ, ಹೊನ್ನೆಬೈಲು, ಶಿಂಗನಮಕ್ಕಿ ಮಂಜುಗುಣಿ ಶಾಲೆಗಳಲ್ಲಿ ಕಾಳಜಿ ಕೇಂದ್ರವನ್ನು ಜಿಲ್ಲಾಡಳಿತ ತೆರೆದಿದೆ.
ಉಡುಪಿ (Udupi) ಜಿಲ್ಲೆಯ ಬೈಂದೂರು ತಾಲೂಕಿನ ಬಡಾಕೆರೆ ಸಾಲ್ಬುಡ ವ್ಯಾಪ್ತಿಯಲ್ಲಿ ನೆರೆ ಉಂಟಾಗಿದ್ದು, ಜನ ಮನೆಯಿಂದ ಹೊರಬರಲು ಸಿದ್ಧವಿಲ್ಲ. ಅಗ್ನಿಶಾಮಕ ದಳ ಸಿಬ್ಬಂದಿ ಗ್ರಾಮಕ್ಕೆ ಭೇಟಿ ಕೊಟ್ಟು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದ್ದಾರೆ. ಈ ವೇಳೆ ಜನರು ಜಾನುವಾರು, ದಿನಸಿ, ಮನೆಯ ವಸ್ತುಗಳನ್ನು ಬಿಟ್ಟು ನಾವು ಬರುವುದಿಲ್ಲ ಎಂದಿದ್ದಾರೆ. ನೀರಿನ ಮಟ್ಟ ಜಾಸ್ತಿಯಾದರೆ ಅಪಾಯದ ಮಟ್ಟ ಮೀರಿದರೆ ಜನರನ್ನ ಸ್ಥಳಾಂತರಿಸುತ್ತೇವೆ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಂದಾಯ ಇಲಾಖೆಯಲ್ಲಿ ಕೌನ್ಸೆಲಿಂಗ್ ಮೂಲಕ ಸಬ್ ರಿಜಿಸ್ಟ್ರಾರ್‌ಗಳ ವರ್ಗಾವಣೆ – ಸಚಿವ ಸಂಪುಟ ಒಪ್ಪಿಗೆ
Advertisement
Advertisement
ಈ ಭಾಗದಲ್ಲಿ ಜಿಲ್ಲಾಡಳಿತ ಶಾಲೆಗಳಿಗೆ ಮಾತ್ರ ರಜೆ ನೀಡಿದ್ದು, ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಡಳಿತ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೀವ ಕೈಯಲ್ಲಿ ಹಿಡಿದುಕೊಂಡು ದೋಣಿಯಲ್ಲಿ ಹೋಗಬೇಕಾಗುತ್ತದೆ. ನೆರೆ ಇದ್ದರೂ ರಜೆ ನೀಡಿಲ್ಲ ಓಡಾಟಕ್ಕೆ ದೋಣಿ ಇಲ್ಲ. ಸೂಕ್ತ ಮೂಲಭೂತ ಸೌಕರ್ಯ ಒದಗಿಸಿ ಎಂದು ಒತ್ತಾಯಿಸಿದ್ದಾರೆ.
Advertisement
ಮಂಗಳೂರಿನಲ್ಲಿ ಸಮುದ್ರದ ಅಲೆಯ ಹೊಡೆತಕ್ಕೆ ನಿರ್ಮಾಣ ಹಂತದಲ್ಲಿದ್ದ ನಾಡದೋಣಿ ಮೀನಿಗಾರಿಕಾ ಜೆಟ್ಟಿ ಸಮುದ್ರ ಪಾಲಾಗಿದೆ. ಹೊರವಲಯದ ಕುಳಾಯಿ ಸಮುದ್ರ ತೀರದಲ್ಲಿ 184 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಜೆಟ್ಟಿಯ ಒಂದು ಭಾಗ ಸಮುದ್ರ ಪಾಲಾಗಿದೆ.
Advertisement
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಾರೀ ಮಳೆಯಾಗುತ್ತಿದ್ದು, ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಜೋರಾಗಿ ಮಳೆ ಸುರಿಯುತ್ತಿದೆ. ಪ್ರಮುಖವಾಗಿ ಬೆಳ್ತಂಗಡಿ ಹಾಗೂ ಬಂಟ್ವಾಳದಲ್ಲಿ ಜೋರಾದ ಮಳೆಯ ಹಿನ್ನೆಲೆ ಅಂಗನವಾಡಿ, ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ. ಅಲ್ಲದೇ ನದಿ ಹಾಗೂ ಸಮುದ್ರ ತೀರದ ನಿವಾಸಿಗಳು ಎಚ್ಚರಿಕೆ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ ಈ ಹಿನ್ನೆಲೆ ಕಾವೇರಿ ನದಿ ಹಾಗೂ ಹಾರಂಗಿ ಜಲಾಶಯಕ್ಕೆ ಜೀವಕಳೆ ಬಂದಿದೆ. ಮಡಿಕೇರಿ (Madikeri) ತಾಲೂಕಿನ ಹಮ್ಮಿಹಾಲ, ಮುಟ್ಲು, ಕಾಲೂರು, ಭಾಗದಲ್ಲಿ ಹೆಚ್ಚಾಗಿ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ ಹೆಚ್ಚಾಗಿ ನೀರು ಹರಿದು ಬರುತ್ತಿದೆ. ಪ್ರಸ್ತುತ ಹಾರಂಗಿ ಜಲಾಶಯದಲ್ಲಿ 2,842 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಇದನ್ನೂ ಓದಿ: ನಿಮ್ಮ ಕಾಲಿಗೆ ಬೀಳಬೇಕೆ? – ನಿಗದಿತ ಅವಧಿಯೊಳಗೆ ಭೂಮಾಪನ ಮುಗಿಸುವಂತೆ ಅಧಿಕಾರಿಗಳಿಗೆ ಬಿಹಾರ ಸಿಎಂ ಮನವಿ