ಬೆಂಗಳೂರು: ಏಪ್ರಿಲ್ ತಿಂಗಳ ಅಂತ್ಯಕ್ಕೆ ರಾಜ್ಯಕ್ಕೆ ಚಂಡಮಾರುತದ ಎಫೆಕ್ಟ್ ಭಾರೀ ಮಳೆಯ ಎಚ್ಚರಿಕೆಯನ್ನು ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ನೀಡಿದೆ.
ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿಗೆ ಮಹಾ ಮಳೆಗೆ ಮಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 30 ರಿಂದ ಮೂರು ದಿನಗಳ ಕಾಲ ಸತತ ಮಳೆ ಆಗಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಮಲೆನಾಡು ಭಾಗದಲ್ಲಿ ಸೈಕ್ಲೋನ್ ಎಫೆಕ್ಟ್ ನಿಂದ ಭಾರೀ ಮಳೆ ಬರುವ ಸಾಧ್ಯತೆ ಇದೆ. ಇನ್ನು ಚೆನ್ನೈ ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ ಸೃಷ್ಟಿಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
Advertisement
Advertisement
ಈ ಬಗ್ಗೆ ಮಾತನಾಡಿದ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಅಧ್ಯಕ್ಷ, ಶ್ರೀನಿವಾಸ್ ಅವರು, ಬಂಗಾಳಕೊಲ್ಲಿಯ ಎಂಡ್‍ನಲ್ಲಿ ಅಂದರೆ ಶ್ರೀಲಂಕಾ ಮೇಲೆ ಟ್ರಫ್ (ಮೋಡಗಳ ಸಾಲು) ನಿರ್ಮಾಣವಾಗಿದೆ. ಈ ಟ್ರಫ್ ಮುಂದಿನ ಎರಡು ದಿನದಲ್ಲಿ ಸೈಕ್ಲೋನ್ ಆಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಇದೆ. ಅರಬ್ಬಿ ಸಮುದ್ರದಲ್ಲಿ ಒಂದು ಟ್ರಫ್ ಇದೆ. ಈ ಟ್ರಫ್ ಮಹಾರಾಷ್ಟ್ರದವರೆಗೂ ಇದೆ. ಇಲ್ಲಿ ಸೈಕ್ಲೋನ್ ಶುರುವಾದಾಗ ಟ್ರಫ್ ಕೂಡ ಆಕ್ಟೀವ್ ಆಗುತ್ತದೆ. ಆಗ ಮಲೆನಾಡಿನಲ್ಲಿ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ. ಈ ಟ್ರಫ್ ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡ ಭಾಗದಲ್ಲಿ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದೆ. ಏ. 30 ಹಾಗೂ ಮೇ 1ರಂದು ಬೆಂಗಳೂರಿನಲ್ಲಿ ಮಳೆ ಆಗುವ ಸಾಧ್ಯತೆ ಇದೆ.