ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಮೈಸೂರು ನಗರ ಪಾಲಿಕೆ ದಿಟ್ಟ ಕ್ರಮ ಕೈಗೊಂಡಿದೆ.
ಪಾಲಿಕೆಯ ನಿಯಮ ಮೀರಿ ಅಕ್ರಮವಾಗಿ ಪ್ಲಾಸ್ಟಿಕ್ ಶೇಖರಿಸಿದ್ದವರಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ್ದಾರೆ. ಅಕ್ರಮವಾಗಿ 250 ಕೆಜಿ ಪ್ಲಾಸ್ಟಿಕ್ ಶೇಖರಿಸಿದ್ದವರಿಗೆ 10 ಸಾವಿರ ದಂಡ ಹಾಕಲಾಗಿದೆ. ಪ್ಲಾಸ್ಟಿಕ್ ಬೆಲೆಗಿಂತ ದುಪ್ಪಟ್ಟು ದಂಡವನ್ನು ಪಾಲಿಕೆ ಅಧಿಕಾರಿಗಳು ವಿಧಿಸಿದ್ದಾರೆ.
Advertisement
ಮೈಸೂರಿನ ವಾರ್ಡ್ 4 9ರ ಬಸವೇಶ್ವರ ರಸ್ತೆಯಲ್ಲಿ ರಘುಪತಿ ಎಂಟರ್‌ಪ್ರೈಸಸ್‌ನಲ್ಲಿ 250 ಕೆಜಿಯ ಪ್ಲಾಸ್ಟಿಕ್ ಮತ್ತು ಮಹಿಳೆಯರ ಬ್ಯಾಗ್ ಸಾಮಾಗ್ರಿಗಳನ್ನು ಜಪ್ತಿ ಮಾಡಲಾಗಿದೆ. ನಗರ ಪಾಲಿಕೆ ಪರಿಸರ ಇಂಜಿನಿಯರ್ ಪೂರ್ಣಿಮಾ ನೇತೃತ್ವದ ತಂಡದಿಂದ ಈ ದಾಳಿ ಮಾಡಲಾಗಿದೆ.