– 3 ಸಾವು, 200ಕ್ಕೂ ಹೆಚ್ಚು ಜನರಿಗೆ ಗಾಯ
– 2 ವಾರದಿಂದ 47,000 ಜನ ಬಲಿ
ಅಂಕಾರ: 2 ವಾರಗಳ ಹಿಂದೆ ಟರ್ಕಿ (Turkey) ಹಾಗೂ ಸಿರಿಯಾದಲ್ಲಿ (Syria) ಸಂಭವಿಸಿರುವ ಭೀಕರ ಭೂಕಂಪದಿಂದಾಗಿ (Earthquake) ಎರಡೂ ದೇಶಗಳು ತತ್ತರಿಸಿ ಹೋಗಿದೆ. 2 ವಾರಗಳಿಂದ 47 ಸಾವಿರ ಜನರು ಬಲಿಯಾಗಿದ್ದಾರೆ. ಸಾವು ನೋವುಗಳ ಭೀಕರತೆಯನ್ನು ಅರಗಿಸಿಕೊಳ್ಳುವುದಕ್ಕೂ ಮೊದಲೇ ಟರ್ಕಿ ಹಾಗೂ ಸಿರಿಯಾದಲ್ಲಿ ಮತ್ತೆ ಸೋಮವಾರ ಭಾರೀ ಭೂಕಂಪವಾಗಿದೆ.
Advertisement
ಸೋಮವಾರ ಸಂಭವಿಸಿದ ಭೂಕಂಪ ಟರ್ಕಿಯ ಹಟಾಯ್ ಪ್ರದೇಶದ ಡೆಫ್ನೆ ಪಟ್ಟಣದಲ್ಲಿ ಭೂಮಿಯಿಂದ 10 ಕಿ.ಮೀ ಆಳದಲ್ಲಿ ಅದರ ಕೇಂದ್ರ ಬಿಂದುವನ್ನು ಪತ್ತೆಹಚ್ಚಲಾಗಿದೆ. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪ ದಾಖಲಾಗಿದ್ದು, ಘಟನೆಯಲ್ಲಿ 3 ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಜೋರ್ಡಾನ್, ಸೈಪ್ರಸ್, ಇಸ್ರೇಲ್ ಹಾಗೂ ಈಜಿಪ್ಟ್ನಲ್ಲೂ ಕಂಪನದ ಅನುಭವವಾಗಿರುವುದಾಗಿ ವರದಿಗಳು ತಿಳಿಸಿವೆ.
Advertisement
Advertisement
ಇದೀಗ ಜನಜೀವನವೇ ಛಿದ್ರಗೊಂಡಿರುವ ಟರ್ಕಿ ಹಾಗೂ ಸಿರಿಯಾದ ನಿವಾಸಿಗಳು ಭೂಮಿಯೇ 2 ಭಾಗವಾಗುತ್ತದೆ ಎಂದು ಭೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ನನ್ನ ಕಾಲುಗಳ ಕೆಳಗಡೆ ಭೂಮಿ ಭಾಗವಾಗುತ್ತದೆ ಎಂದು ನನಗೆ ಭೀತಿಯುಂಟಾಗಿದೆ ಎಂದು ಟರ್ಕಿಯ ಅಂಟಾಕ್ಯಾ ನಗರದ ನಿವಾಸಿಯೊಬ್ಬರು ತಮ್ಮ ಭಯಾನಕ ಅನುಭವವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾಸಕನ ಪುತ್ರನಿಂದ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ : ದೂರು ದಾಖಲು
Advertisement
2 ವಾರಗಳಿಂದ ಟರ್ಕಿ ಹಾಗೂ ಸಿರಿಯಾದಲ್ಲಿ ಉಂಟಾಗುತ್ತಿರುವ ಭೂಕಂಪಗಳಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 47 ಸಾವಿರಕ್ಕೆ ಏರಿಕೆಯಾಗಿದೆ. ಇದೀಗ ಮತ್ತೆ ಮತ್ತೆ ಭೂಕಂಪಗಳು ಸಂಭವಿಸುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ. ಟರ್ಕಿಯ 11 ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸುಮಾರು 3,65,000 ಕಟ್ಟಡಗಳು ನಾಶ ಹಾಗೂ ಗಂಭೀರವಾಗಿ ಹಾನಿಗೊಳಗಾಗಿವೆ. ಇನ್ನೂ ಅನೇಕರು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: 10 ವರ್ಷದ ಫೀಸ್ ಕಟ್ಟೋಕೆ ಶಾಲೆಗಳಿಂದ ಆಫರ್ – ನಯಾ ಪ್ಲ್ಯಾನ್‍ಗೆ ಪೋಷಕರು ಕಂಗಾಲು
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k