ಚಿಕ್ಕಮಗಳೂರು: ಕಳೆದ ಹತ್ತು ವರ್ಷಗಳ ಅವಧಿಯಲ್ಲೇ ಕಾಫಿನಾಡಲ್ಲಿ ಚಳಿಯ ಪ್ರಮಾಣ ಅತ್ಯಂತ ಕನಿಷ್ಟ ಮಟ್ಟಕ್ಕೆ ಕುಸಿದಿದ್ದು, ಜನಸಾಮಾನ್ಯರು ಭಾರೀ ಚಳಿಯಲ್ಲಿ ನಡುಗುತ್ತಿದ್ದಾರೆ.
ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಇರುತ್ತಿದ್ದ ಚಳಿ ಇಂದು 11 ಡಿಗ್ರಿ ಸೆಲ್ಸಿಯಸ್‍ಗೆ ಕುಸಿದಿದೆ. ಎರಡು ದಿನದ ಹಿಂದೆ ಈ ಮಾಗಿಯ ಚಳಿ 9 ಡಿಗ್ರಿ ಸೆಲ್ಸಿಯಸ್‍ಗೆ ಕುಸಿದಿತ್ತು. ಜಿಲ್ಲೆಯ ಜನ ಸೂರ್ಯ ನೆತ್ತಿಯ ಮೇಲೆ ಬರುವತನಕ ಮನೆಯಿಂದ ಹೊರಬರಲು ಹಿಂದೇಟು ಹಾಕ್ತಿದ್ದಾರೆ. ಸೂರ್ಯ ಸುಡುತ್ತಿದ್ದರೂ ಕೂಡ ಜನ ಸ್ವೆಟರ್, ಜರ್ಕಿನ್ ಹಾಗೂ ಟೋಪಿ ಇಲ್ಲದೆ ಹೊರಗೆ ಬರುತ್ತಿಲ್ಲ.
Advertisement
Advertisement
ಸಂಜೆ ನಾಲ್ಕು ಗಂಟೆಗೆ ಚಳಿಯ ಪ್ರಮಾಣ ಮಿತಿ ಮೀರುತ್ತಿದ್ದು, ಜನ ಬೇಗ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಮನೆ ಸೇರಿಕೊಳ್ಳುತ್ತಿದ್ದಾರೆ. ಸ್ವೆಟರ್, ಟೋಪಿ ಹಾಗೂ ಜರ್ಕಿನ್ ಹಾಕಿಕೊಂಡು ಜನ ಬಿಸಿಲು ಕಾಯಿಸುವ ಸ್ಥಿತಿ ನಿರ್ಮಾಣವಾಗಿದೆ.
Advertisement
ಬೆಳ್ಳಂಬೆಳ್ಳಗೆಯೇ ಕೂಲಿ ಕೆಲಸ ಹಾಗೂ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗುವ ಜನಸಾಮಾನ್ಯರು ರಸ್ತೆ ಬದಿಯಲ್ಲಿ ಬೆಂಕಿ ಹಾಕಿಕೊಂಡು ಮೈ ಬಿಸಿ ಮಾಡಿಕೊಳ್ಳುವ ದೃಶ್ಯಗಳು ಮಲೆನಾಡಲ್ಲಿ ಸಾಮಾನ್ಯವಾಗಿದೆ. ಬೆಳಗ್ಗೆ, ಸಂಜೆ ವಾಕ್ ಮಾಡುವ ವೃದ್ಧರು, ಮಧ್ಯ ವಯಸ್ಕರು ಹಾಗೂ ಜಾಗಿಂಗ್ ಮಾಡುವ ಯುವಜನತೆ ಕೂಡ ಸಂಪೂರ್ಣ ಪ್ಯಾಕ್ ಆಗಿ ಕ್ರೀಡಾಂಗಣಕ್ಕೆ ಬರುವುದು ಕೂಡ ಮಾಮೂಲಿಯಾಗಿದೆ. ಈ ಚಳಿಯ ಪ್ರಮಾಣ ಇನ್ನೆರಡು ದಿನದಲ್ಲಿ ಮತ್ತುಷ್ಟು ಹೆಚ್ಚಾಗುವ ಸಂಭವವಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv