ಬೆಂಗಳೂರು: ಈ ಬಾರಿ ಕಳೆದ ವರ್ಷಕ್ಕಿಂತಲೂ ಅಧಿಕ ಬಿಸಿಲಿನ ತಾಪಮಾನವಿದೆ. ಅದರಲ್ಲೂ ಸಿಲಿಕಾನ್ ಸಿಟಿಯಲ್ಲಿ ಬಿಸಿಲಿನ ಎಫೆಕ್ಟ್ (Heat Stroke) ಜೋರಾಗಿದ್ದು, ಸೋಮವಾರ ಹಳಿಯಲ್ಲಿರುವ ರಬ್ಬರ್‌ಗೆ ಬೆಂಕಿ ತಗುಲಿ 20 ನಿಮಿಷಗಳ ಕಾಲ ಮೆಟ್ರೋ (Metro) ರೈಲು ಸಂಚಾರವನ್ನು ಬಂದ್ ಮಾಡಿದ ಘಟನೆ ನಡೆದಿದೆ.
ಸೋಮವಾರ ಬೆಳಗ್ಗೆ 11 ಘಂಟೆಗೆ ನೇರಳೆ ಮಾರ್ಗದ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿ ಬರುತ್ತಲೇ ಈ ಘಟನೆ ನಡೆದಿದೆ. ಸೂರ್ಯನ ಶಾಖದಿಂದಾಗಿ ಮೆಟ್ರೋ ಹಳಿಯ ರಬ್ಬರ್‌ಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಚಾಲಕ, ತಕ್ಷಣ ಮುನ್ನೆಚ್ಚರಿಕೆಯ ಕ್ರಮವಾಗಿ ರೈಲು ನಿಲ್ಲಿಸಿದ್ದಾರೆ.
ಅದಾದ ಬಳಿಕ ಚಾಲಕ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ವಿವೇಕಾನಂದ ಮೆಟ್ರೋ ನಿಲ್ದಾಣದ ಬಳಿಯಿದ್ದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ಆರಿಸಿದರು. ರಬ್ಬರ್ ತಣ್ಣಗಾದ ಬಳಿಕ ಸಹಜವಾಗಿಯೇ ಮೆಟ್ರೋ ಪ್ರಯಾಣವನ್ನು ಮರು ಪ್ರಾರಂಭಿಸಲಾಯಿತು.
ಘಟನೆಯಿಂದಾಗಿ ಸುಮಾರು 20 ನಿಮಿಷಗಳ ಕಾಲ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. ಇದರಿಂದಾಗಿ ಆ ಮಾರ್ಗದ ಮೆಟ್ರೋದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು (Passengers) ಪರದಾಡುವಂತಾಯಿತು. ಇದನ್ನೂ ಓದಿ: ಅಪ್ಪ JDS, ಮಗ BJPಗೆ ಬೆಂಬಲ – ಮತದಾರ, ಕಾರ್ಯಕರ್ತರಲ್ಲಿ ಗೊಂದಲ
ಈ ಬಗ್ಗೆ ಪ್ರತಿಕ್ರಿಯಿಸಿದ ಮೆಟ್ರೋ ಅಧಿಕಾರಿಗಳು, ಬಿಸಿಲಿನ ಶಾಖದಿಂದಾಗಿ ಮೆಟ್ರೋ ಹಳಿಯ ರಬ್ಬರ್‌ಗೆ ಬೆಂಕಿ ಕಿಡಿ ಹೊತ್ತುಕೊಂಡಿತ್ತು. ಚಾಲಕನ ಗಮನಕ್ಕೆ ಬಂದ ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಬಿಸಿಲಿನ ಝಳದಿಂದ ರಬ್ಬರ್‌ಗೆ ಕಿಡಿ ತಾಕಿರಬಹುದು. ವಿದ್ಯುತ್ ಅಥವಾ ರಬ್ಬರ್‌ನಲ್ಲಿನ ಸಮಸ್ಯೆಯಿಂದಲೂ ಆಗಿರಬಹುದು. ಉಳಿದಂತೆ ಇಡೀ ದಿನ ಯಾವುದೇ ಸಮಸ್ಯೆಯಿಲ್ಲದೆ ಈ ಮಾರ್ಗದಲ್ಲಿ ರೈಲು ಸಂಚರಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಕೊರೊನಾ