ಶ್ರೀನಗರ: ದರೋಡೆಕೋರರಿಂದ ಲೂಟಿಗೊಳಗಾದ ವೃದ್ಧರೊಬ್ಬರ ರಕ್ಷಣೆಗೆ ಬಂದ ಹಿರಿಯ ಪೊಲೀಸ್ ಅಧಿಕಾರಿ ಜನರ ಹೃದಯಗಳನ್ನು ಗೆಲ್ಲುತ್ತಿದ್ದಾರೆ.
ಶ್ರೀನಗರದ ಬೋಹ್ರಿ ಕಡಲ್ ಪ್ರದೇಶದಲ್ಲಿ ರಸ್ತೆ ಬದಿ ‘ಚನ್ನಾ’ ಮಾರಾಟ ಮಾಡುತ್ತಿದ್ದ 90 ವರ್ಷದ ಅಬ್ದುಲ್ ರೆಹಮಾನ್ ಅವರು ಕೂಡಿಟ್ಟಿದ್ದ 1 ಲಕ್ಷ ರೂ.ಗಳನ್ನು ಶನಿವಾರ ಕಳ್ಳರು ದೋಚಿದ್ದಾರೆ. ಅದು ಅಲ್ಲದೇ ಒಂಟಿಯಾಗಿದ್ದ ರೆಹಮಾನ್ ಅವರನ್ನು ಥಳಿಸಿದ್ದಾರೆ. ಈ ಕುರಿತು ರೆಹಮಾನ್ ಪೊಲೀಸರಿಗೆ ನನ್ನ ಅಂತಿಮ ಸಂಸ್ಕಾರಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಕಳ್ಳರು ದೋಚಿದ್ದಾರೆ ಎಂದು ದೂರು ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿಯೂ ಇವರ ಸುದ್ದಿ ವೈರಲ್ ಆಗಿತ್ತು. ಇದನ್ನೂ ಓದಿ: ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಿದ ಪೊಲೀಸ್ – ವೀಡಿಯೋ ವೈರಲ್
Advertisement
Thank You Sir Ji@Proud of You????????????
Indeed Good gesture,Rs. one lakh provided to Abdul Rehman,Channa seller from
Bohri Kadal Srinagar by SSP Srinagar Mr. Sandeep Chaudhary Sir,IPS.
Pertinently poor old man was looted by burglars. pic.twitter.com/yQPxXhJdbZ
— SAJAD BUTT (@SAJADBUTT19) November 14, 2021
Advertisement
ರೆಹಮಾನ್ ಅವರ ಸಂಕಟದಿಂದ ಮನನೊಂದ ಹಿರಿಯ ಪೊಲೀಸ್ ಅಧೀಕ್ಷಕ ಸಂದೀಪ್ ಚೌಧರಿ, ವೃದ್ಧನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಅವರು ತಮ್ಮ ಜೇಬಿನಿಂದ 1 ಲಕ್ಷ ರೂ. ನೀಡಿ ರೆಹಮಾನ್ ಮುಖದಲ್ಲಿ ನಗು ತಂದರು. ಇದನ್ನು ನೋಡಿದ ಸೋಶಿಯಲ್ ಮೀಡಿಯಾ ವೀಕ್ಷಕರು ಫುಲ್ ಖುಷ್ ಆಗಿದ್ದು, ಪ್ರಶಂಸೆಯನ್ನು ಮಾಡುತ್ತಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯಿಸಿದ ಎಸ್‍ಎಸ್‍ಪಿ ಸಂದೀಪ್, ಕೆಲವೊಮ್ಮೆ ಅಪರಾಧಿಗಳನ್ನು ಹಿಡಿಯಲು ಸಮಯ ಹಿಡಿಯುತ್ತದೆ. ನಾನು ವೀಡಿಯೋದಲ್ಲಿ ಅವರ ಮುಖವನ್ನು ನೋಡಿದೆ. ಅವರಿಗೆ ಸಹಾಯ ಮಾಡಲು ನಿರ್ಧರಿಸಿದೆ. ಹಣವು ದೊಡ್ಡ ಸಮಸ್ಯೆಯಲ್ಲ, ಐಫೋನ್‍ನ ಬೆಲೆ ಒಂದು ಲಕ್ಷಕ್ಕಿಂತ ಹೆಚ್ಚು. ಆದರೆ ಅವರಿಗೆ, ಅದು ಅವರ ಜೀವನದ ಉಳಿತಾಯ ಎಂದು ಹೇಳಿದರು. ಈ ಹೇಳಿಕೆ ಜನರ ಗಮನ ಸೆಳೆದಿದ್ದು, ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
Advertisement
Good of @SrinagarPolice and @Sandeep_IPS_JKP to give Rs one lakh to Abdul Rehman, 90 till the time money is retrieved from burglars who looted Rs 1 lakh from Channa seller’s home. Rehman sells snacks at Bohrikadal and lives alone. He had kept hard earned money for his last rites. pic.twitter.com/CW8nAlyZMb
— Mufti Islah (@islahmufti) November 14, 2021
ರೆಹಮಾನ್ ಅವರು ತನ್ನ ಹಣ ಎಲ್ಲಿ ಕಳ್ಳತನವಾಗುತ್ತೆ ಎಂಬ ಭಯದಲ್ಲಿ ಹಣವನ್ನು ತನ್ನ ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದರು. ಒಂದು ಲಕ್ಷದ ಅರವತ್ತು ಸಾವಿರ ರೂ. ಉಳಿತಾಯವನ್ನು ಎರಡು ಭಾಗ ಮಾಡಿ ಒಂದು ಲಕ್ಷವನ್ನು ಒಂದು ಜೇಬಿನಲ್ಲಿ ಮತ್ತು 60 ಸಾವಿರವನ್ನು ಇನ್ನೊಂದು ಜೇಬಿನಲ್ಲಿ ಇಟ್ಟುಕೊಂಡಿದ್ದರು. ದರೋಡೆಕೋರರು ಆತನಿಂದ ಒಂದು ಲಕ್ಷ ರೂಪಾಯಿ ದೋಚಿದ್ದಾರೆ. ರಸ್ತೆಬದಿಯಲ್ಲಿ ಅಡಿಕೆ ಮಾರಾಟ ಮಾಡಿ ಇಷ್ಟೊಂದು ಹಣ ಉಳಿತಾಯ ಮಾಡುವುದೇ ದೊಡ್ಡ ಸಂಗತಿ. ಈ ಘಟನೆ ತಿಳಿದ ನಂತರ ನನಗೆ ಬೇಸರವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿಖ್, ಬೌದ್ಧರಂತೆ ಲಿಂಗಾಯತಕ್ಕೂ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು: ಎಸ್.ಎಂ.ಜಾಮದಾರ
Great gesture. Keep up the good work. God bless you @Sandeep_IPS_JKP https://t.co/kWPKTF8rzY
— STUCK HERE (@sarmadfayaz1) November 14, 2021
ವರದಿಗಳ ಪ್ರಕಾರ, ಈ ಪ್ರಕರಣ ಎಫ್‍ಐಆರ್ ಮಾಡಲಾಗಿದ್ದು, ಆರೋಪಿಗಳನ್ನು ಹಿಡಿಯಲು ತನಿಖೆ ನಡೆಯುತ್ತಿದೆ.