ಕಿನ್ಶಾಸಾ: ಮುದ್ದಾದ ಚಿಂಪಾಂಜಿ ಮರಿಯನ್ನು ಬೇಟೆಗಾರರಿಂದ ರಕ್ಷಿಸಿದ ಬಳಿಕ ಪೈಲಟ್ ಹೆಲಿಕಾಪ್ಟರ್ ನಲ್ಲಿ ಚಿಂಪಾಂಜಿಯ ಜೊತೆ ಹಾರಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಈ ವಿಡಿಯೋವನ್ನ ಸೆರೆಹಿಡಿಯಲಾಗಿದೆ. ಮುಸ್ಸಾ ಎಂಬ ಮುದ್ದಾದ ಚಿಂಪಾಜಿ ಮರಿಯ ಕುಟುಂಬದವರನ್ನ ಬೇಟೆಗಾರರು ಮಾಂಸಕ್ಕಾಗಿ ಕೊಂದಿದ್ದರು. ಚಿಂಪಾಂಜಿ ಮರಿ ಪತ್ತೆಯಾದ ವ್ಯಕ್ತಿಯ ಮನೆಯಲ್ಲಿ ಎರಡು ಮೊಸಳೆಗಳು ಕೂಡ ಸಿಕ್ಕಿದ್ದು, ಬೇಟೆಗಾರರು ಮರಿಯನ್ನು 20 ಡಾಲರ್ ನಿಂದ- 50 ಡಾಲರ್ ಬೆಲೆ(ಅಂದಾಜು 1 ಸಾವಿರ ದಿಂದ 3 ಸಾವಿರ ರೂ. ಗೆ) ಆ ವ್ಯಕ್ತಿಗೆ ಮಾರಾಟ ಮಾಡಿರಬಹುದೆಂದು ಊಹಿಸಲಾಗಿದೆ.
Advertisement
Advertisement
ಆ ವ್ಯಕ್ತಿ ಚಿಂಪಾಂಜಿಯನ್ನು ಸಾಕಲು ಇಟ್ಟುಕೊಂಡಿದ್ದರಾ ಅಥವಾ ಮಾರಾಟ ಮಾಡಲು ಬಯಸ್ಸಿದ್ದರಾ ಎಂಬುದು ಗೊತ್ತಾಗಿಲ್ಲ. ಈಗ ಪೈಲಟ್ ಆಂಥೋನಿ ಕೆರೀ ಚಿಂಪಾಂಜಿ ಮರಿಯನ್ನ ರಕ್ಷಿಸಿ, ತನ್ನ ಜೊತೆಯಲ್ಲಿ ವಿರುಂಗ ನ್ಯಾಷನಲ್ ಪಾರ್ಕ್ ಗೆ ಕರೆತಂದಿದ್ದಾರೆ.
Advertisement
ವಿಡಿಯೋದಲ್ಲಿ ಮುಸ್ಸಾ, ಪೈಲೆಟ್ ಆಂಥೋನಿಯ ಹಿಂದಿನ ಸೀಟಿನಿಂದ ಮುಂದಿನ ಸೀಟಿಗೆ ಎಗರಿ ಬಂದು ಅವರ ತೊಡೆಯ ಮೇಲೆ ಕುಳಿತುಕೊಳ್ಳುವುದನ್ನ ಕಾಣಬಹುದು. ಇದಾದ ಬಳಿಕ ಹೆಲಿಕಾಪ್ಟರ್‍ನ ನಿಯಂತ್ರಕ ಗುಂಡಿಗಳನ್ನ ಒತ್ತಲು ಪ್ರಯತ್ನಿಸಿದೆ. ನಂತರ ನಿಧಾನವಾಗಿ ಪೈಲಟ್ ನ ತೊಡೆ ಮೇಲೆ ನಿದ್ರೆಗೆ ಜಾರಿದೆ. ಈ ಕ್ಯೂಟ್ ದೃಶ್ಯ ಎಲ್ಲರನ್ನ ಮನಸೂರೆ ಮಾಡಿದೆ.
ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆಂಥೋಣಿ, “ಇದು ಎಷ್ಟು ಮುದ್ದಾಗಿದೆಯೋ ಅಷ್ಟೇ ದುರದೃಷ್ಟಕರದ ಕಥೆಯಾಗಿದೆ. ಮುಸ್ಸಾ ಈಗ ತನ್ನ ಅಮ್ಮನೊಂದಿಗೆ ಇರಬೇಕಿತ್ತು. ತಾಯಿಯನ್ನ ಕಳೆದುಕೊಂಡ ಇವನಿಗೆ ಈಗ ನಾವೇ ಆಶ್ರಯ ಕೊಟ್ಟು ಸುಖವಾಗಿರಲು ಸಹಾಯ ಮಾಡಲಾಗಿದೆ” ಎಂದು ಬರೆದುಕೊಂಡಿದ್ದಾರೆ. ಮುಸ್ಸಾ ಈಗ ಬೇರೆ ಚಿಂಪಾಂಜಿಗಳ ಜೊತೆಯಲ್ಲಿ ಸಂತೋಷದಿಂದ ಇದೆ.
https://www.youtube.com/watch?v=XA9Va14OwUk