ಚೆನ್ನೈ: ಕಳೆದ ವರ್ಷ ಮೆಡಿಕಲ್ ವಿದ್ಯಾರ್ಥಿಗಳು ನಾಯಿಯನ್ನು ಮಹಡಿಯಿಂದ ತಳ್ಳಿದ್ದ ಪ್ರಕರಣದ ಬಗ್ಗೆ ಸಾಕಷ್ಟು ಸುದ್ದಿಯಾಗಿತ್ತು. ಅಂತಹದ್ದೇ ಒಂದು ಘಟನೆ ಈಗ ವೆಲ್ಲೂರಿನಲ್ಲಿ ವರದಿಯಾಗಿದೆ. ವಿದ್ಯಾರ್ಥಿಯೊಬ್ಬ 1 ತಿಂಗಳ ಪುಟ್ಟ ನಾಯಿಮರಿಯನ್ನು ಮಹಡಿಯಿಂದ ತಳ್ಳಿದ್ದು, ಮರಿ ಸಾವನ್ನಪ್ಪಿದೆ. ವಿದ್ಯಾರ್ಥಿ ನಾಯಿಯನ್ನು ಕೊಂದಿದ್ದಲ್ಲದೆ ವಾಟ್ಸಪ್ ಗ್ರೂಪ್‍ನಲ್ಲಿ ಈ ಬಗ್ಗೆ ಹೇಳಿಕೊಂಡು ಗೆಳೆಯರ ಮುಂದೆ ಬಿಲ್ಡಪ್ ಕೊಟ್ಟಿದ್ದಾನೆ. ಇದರ ಸ್ಕ್ರೀನ್‍ಶಾಟ್ ಇದೀಗ ವೈರಲ್ ಆಗಿದೆ.
ವೆಲ್ಲೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರೋ 21 ವರ್ಷದ ವಿಶೇಷ್ ನಾಯಿಮರಿಯನ್ನು ಕೊಂದ ವಿದ್ಯಾರ್ಥಿ. ಅಕ್ಟೋಬರ್ 24ರಂದು ವಿಶೇಷ್ ಈ ಹೇಯ ಕೃತ್ಯವೆಸಗಿದ್ದಾನೆ. ನಾಯಿಯನ್ನು ಕೊಂದಿದ್ದೇನೆ ಎಂದು ಈತ ವಾಟ್ಸಪ್ ಗ್ರೂಪ್‍ನಲ್ಲಿ ಗೆಳೆಯರಿಗೆ ಹೇಳಿದ್ದಾನೆ.
Advertisement
Advertisement
ನಾಯಿಯನ್ನ ಆರೈಕೆ ಮಾಡುತ್ತಿದ್ದ ಕಾಲೇಜಿನ ಇತರೆ ವಿದ್ಯಾರ್ಥಿಗಳು ಈ ಬಗ್ಗೆ ಪ್ರಾಣಿ ದಯಾ ಸಂಸ್ಥೆಯ ಶ್ರಾವಣ್ ಎಂಬವರಿಗೆ ವಿಷಯ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಕಳಿಸಿದ ಸಂದೇಶವನ್ನು ಶ್ರಾವಣ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement
ಈ ಹಿಂದೆ ಬೀದಿನಾಯಿಗಳು ಪುಟ್ಟ ನಾಯಿಮರಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದವು. ನಾವು ಆ ಒಂದು ತಿಂಗಳ ನಾಯಿಮರಿಯನ್ನು ತೆಗೆದುಕೊಂಡು ಚಿಕಿತ್ಸೆ ಕೊಡಿಸಿ, ಪ್ರತಿದಿನ ಆಹಾರ ನೀಡುತ್ತಿದ್ದೆವು. ಎಲ್ಲರಿಗೂ ಈ ನಾಯಿಯೆಂದರೆ ತುಂಬಾ ಪ್ರೀತಿ. ಕೆಲವೇ ದಿನಗಳಲ್ಲಿ ಎಲ್ಲರೊಂದಿಗೆ ಹೊಂದಿಕೊಂಡಿತ್ತು. ಆದ್ರೆ ಒಂದು ದಿನ ನಾಯಿಮರಿ ಹೊರಗಡೆ ಹೋಗಿದ್ದು, ವಿಶೇಶ್ ಮನೆ ತಲುಪಿತ್ತು. ಈ ವ್ಯಕ್ತಿ ವಿಶೇಶ್ ಈ ಹಿಂದೆಯೂ ಹಲವು ಬಾರಿ ಬೀದಿನಾಯಿಗಳನ್ನ ಮಹಡಿಯ ಮೇಲೆ ನಿಲ್ಲಿಸಿ, ಅವು ಬೀಳುವುದನ್ನ ನೋಡುತ್ತಿದ್ದ. ಒಂದು ತಿಂಗಳ ಮರಿಯನ್ನೂ ಕೂಡ ವಿಶೇಷ್ ಮಹಡಿಯಿಂದ ತಳ್ಳಿದ್ದು, ನಾಯಿಮರಿ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಸಂದೇಶದಲ್ಲಿ ಹೇಳಲಾಗಿದೆ.
Advertisement
ಇದೇ ರೀತಿ ವಿಶೇಷ್ ಮತ್ತೊಂದು ನಾಯಿಮರಿಯನ್ನೂ ಕೊಂದಿದ್ದಾನೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿಶೇಷ್‍ನ ಕೆಲವು ಸ್ನೇಹಿತರು ಆತ ಗ್ರೂಪ್‍ನಲ್ಲಿ ಕಳಿಸಿದ ಮೆಸೇಜ್‍ಗಳ ಸ್ಕ್ರೀನ್‍ಶಾಟ್ ಒದಗಿಸಿದ್ದಾರೆ. ಇದರಲ್ಲಿ ವಿಶೇಷ್, ಒಂದು ಮುಗೀತು, ಮತ್ತೊಂದು ಬಾಕಿ ಇದೆ. ಡಾಗಿ ಟೇಲ್ಸ್ ಎಂದು ಹೇಳಿದ್ದಾನೆ. ಮತ್ತೊಂದು ಮೆಸೇಜ್‍ನಲ್ಲಿ ಬ್ಲ್ಯಾಕ್ ಡೌನ್ ಡೌನ್ ಎಂದಿದ್ದಾನೆ.
ಈಗಾಗಲೇ ವಿಶೇಷ್ ಕಪ್ಪು ನಾಯಿಯನ್ನು ಕೊಂದಿದ್ದು, ಮತ್ತೊಂದು ನಾಯಿಯನ್ನು ಕೊಲ್ಲಲು ಸಿದ್ಧನಾಗಿದ್ದ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಶ್ರಾವಣ್‍ಗೆ ಈ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದ ಬಳಿಕ ಅವರು ಕಟಪಾಡಿ ಪೊಲೀಸ್ ಠಾಣೆಯಲ್ಲಿ ಬುಧವಾರದಂದು ಎಫ್‍ಐಆರ್ ದಾಖಲಿಸಿದ್ದಾರೆ.
ನಾಯಿಮರಿ ಕೆಳಗೆ ಬಿದ್ದ ನಂತರ ಕೆಲವರು ಅದರ ಬಳಿ ಹೋಗಿ ನೋಡಿ ನಂತರ ಅದನ್ನು ಗುಂಡಿ ತೋಡಿ ಮುಚ್ಚುವ ವಿಡಿಯೋವನ್ನು ಕೂಡ ಶ್ರಾವಣ್ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ನಾಯಿಮರಿಗಳನ್ನು ಕೊಂದಿದ್ದು ಯಾಕೆ ಎಂದು ಕೇಳಿದ್ದಕ್ಕೆ, ಅದು ನನ್ನ ಬಟ್ಟೆಗಳ ಮೇಲೆ ಮೂತ್ರ ಮಾಡಿತು ಎಂದು ವಿಶೇಷ್ ಉತ್ತರ ಕೊಟ್ಟಿದ್ದಾನೆಂದು ಫೇಸ್‍ಬುಕ್ ಪೋಸ್ಟ್‍ನಲ್ಲಿ ಹೇಳಲಾಗಿದೆ.
ಐಪಿಸಿ ಸೆಕ್ಷನ್ 429ರ ಅಡಿ ಹಾಗೂ ಪ್ರಾಣಿ ಹಿಂಸೆ ನಿಯಂತ್ರಣ ಕಾಯ್ದೆಯ ಸೆಕ್ಷನ್ 11(1)ಅ ಅಡಿ ವಿಶೇಷ್ ವಿರುದ್ಧ ಪ್ರಕರಣ ದಾಖಲಾಗಿದೆ.
https://www.facebook.com/shravan.krishnan.10/videos/pcb.10154783569037038/10154783567377038/?type=3&theater
https://www.facebook.com/shravan.krishnan.10/posts/10154783569037038