ಬಳ್ಳಾರಿ: ಮಂಗಗಳು ಅಂದ್ರೆ ಬರೀ ಕಪಿಚೇಷ್ಟೆ ಮಾಡ್ತವೆ, ಕೈಯಲ್ಲಿನ ವಸ್ತುಗಳನ್ನು ಕಸಿದುಕೊಂಡು ಕಪಿಗಳು ಕಾಟ ಕೊಡ್ತವೆ ಎಂದು ಎಲ್ಲರೂ ಹೇಳ್ತಾರೆ. ದೇವಸ್ಥಾನಕ್ಕೆ ಬರೋ ಭಕ್ತರು, ಪ್ರವಾಸಿಗರ ಕೈಯಲ್ಲಿನ ಹಣ್ಣು ಕಾಯಿಗಳನ್ನು ಕಸಿದುಕೊಳ್ಳೋದನ್ನು ನೀವೂ ನೋಡಿರಬಹುದು. ಆದ್ರೆ ಹಂಪಿಗೆ ಬರುವ ಪ್ರವಾಸಿಗರ ಕೈಯಲ್ಲಿನ ನೀರಿನ ಬಾಟಲಿಗಳನ್ನು ಮಂಗಗಳು ಕಸಿದುಕೊಂಡು ತಮ್ಮ ದಾಹವನ್ನು ನೀಗಿಸಿಕೊಳ್ಳುತ್ತಿವೆ.
ವಿಶ್ವವಿಖ್ಯಾತ ಹಂಪಿಯ ವಿರುಪಾಕ್ಷ ದೇವರ ಸನ್ನಿಧಾನದಲ್ಲಿ ಮಂಗಗಳು ಕುಡಿಯುವ ನೀರಿಗಾಗಿ ಪರದಾಡುತ್ತಿರುವ ದೃಶ್ಯ ಕಾಣಸಿಗುತ್ತದೆ. ವಿರೂಪಾಕ್ಷೇಶ್ವರ ದೇವಾಲಯದ ಸಮೀಪ ಇರೋ ನೂರಾರು ಮಂಗಗಳು ನಿತ್ಯ ಪ್ರವಾಸಿಗರು ಕೈಯ್ಯಲ್ಲಿ ಹಿಡಿದು ಬರೋ ಬಾಟಲ್ ನೀರಿಗಾಗಿ ಕಾದು ಕುಳಿತಿರುತ್ತವೆ. ಬಾಟಲಿ ಕಂಡ ಕೂಡಲೇ ಕಸಿದುಕೊಂಡು ಬಾಯಾರಿಕೆ ತೀರಿಸಿಕೊಳ್ಳುತ್ತವೆ.
ಮಂಗಗಳು ಕುಡಿಯುವ ನೀರಿಗೆ ಪರದಾಡೋದನ್ನು ನೋಡೋ ಪ್ರವಾಸಿಗರು ಸಹ ತಾವು ಕುಡಿಯಲು ತಂದ ನೀರನ್ನು ಮಂಗಗಳಿಗೆ ಕುಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.