ಹೈದರಾಬಾದ್: ತಮ್ಮ ವಾಹನದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ವಸ್ತುಗಳನ್ನು ಹಿಂದಿರುಗಿಸಿದ್ದಕ್ಕೆ ಹೈದರಾಬಾದ್ ಇಬ್ಬರು ಚಾಲಕರಿಗೆ ಪೊಲೀಸರು ಸನ್ಮಾನ ಮಾಡಿದ್ದಾರೆ
ಚಾಲಕ ಮಿರ್ಜಾ ಮೊಹಮ್ಮದ್ ಅವರು ತಮ್ಮ ಆಟೋದಲ್ಲಿ ಪ್ರಯಾಣಿಕರೊಬ್ಬರು ಹಿಂದಿನ ಸೀಟಿನಲ್ಲಿ 6.5 ತೊಲೆ ಬಂಗಾರದ ಚಿನ್ನಾಭರಣವನ್ನು ಬಿಟ್ಟು ಹೋಗಿದ್ದನ್ನು ನೋಡಿದ್ದರು. ಚಿನ್ನಾಭಾರಣವನ್ನು ನೋಡಿದ ತಕ್ಷಣ ಅದನ್ನು ಎಸ್‍ಆರ್ ನಗರ ಪೊಲೀಸ್ ಠಾಣೆಗೆ ಹಿಂತಿರುಗಿಸಿದ್ದರು.
Advertisement
Advertisement
ಮೊಹಮ್ಮದ್ ಅವರ ಪ್ರಾಮಾಣಿಕತೆಯನ್ನು ನೋಡಿ ಸರ್ಕಲ್ ಇನ್ಸ್ ಪೆಕ್ಟರ್ ವಹೀದುದ್ದೀನ್ ಹಾಗೂ ಪೊಲೀಸ್ ಸಿಬ್ಬಂದಿ ಶಾಲು ಹೊದಿಸಿ ಸನ್ಮಾನಿಸಿದ್ದಾರೆ.
Advertisement
ಇದೇ ರೀತಿ ಮತ್ತೊಬ್ಬ ಕ್ಯಾಬ್ ಚಾಲಕ 3 ತೊಲೆ ಚಿನ್ನಾಭರಣ ಹಾಗೂ 3 ಲಕ್ಷ ರೂ. ನಗದು ಬ್ಯಾಗನ್ನು ಪೊಲೀಸರಿಗೆ ಹಿಂದಿರುಗಿಸಿದ್ದರು. ಇವರ ಪ್ರಾಮಾಣಿಕತೆಯನ್ನು ನೋಡಿ ಜೀದಿಮಟ್ಲಾ ಪೊಲೀಸರು ಸನ್ಮಾನಿಸಿದ್ದಾರೆ.