ಓಸ್ಲೋ: ಬಾಲಕನೊಬ್ಬ ರಸ್ತೆ ದಾಟುವಾಗ ಟ್ರಕ್‍ಗೆ ಅಡ್ಡವಾಗಿ ಓಡಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಾರ್ವೇಯಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯ ಮತ್ತೊಂದು ವಾಹನದ ಡ್ಯಾಶ್‍ಕ್ಯಾಮ್‍ನಲ್ಲಿ ಸೆರೆಯಾಗಿದೆ. ಜೂನ್‍ನಲ್ಲಿ ಈ ಘಟನೆ ನಡೆದಿದ್ದು, ಡ್ಯಾಶ್‍ಕ್ಯಾಮ್ ಹೊಂದಿದ್ದ ವಾಹನದ ಮಾಲೀಕ ಪಾದಚಾರಿಗಳಿಗೆ ಎಚ್ಚರಿಕೆ ನೀಡೋ ಸಲುವಾಗಿ ಈಗ ವಿಡಿಯೋವನ್ನ ಬಿಡುಗಡೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
Advertisement
Advertisement
ಶಾಲಾ ಬಸ್‍ವೊಂದು ರಸ್ತೆಯಲ್ಲಿ ನಿಲುಗಡೆಯಾಗಿ 5 ಮಕ್ಕಳು ಬಸ್‍ನಿಂದ ಕೆಳಗಿಳಿದಿದ್ದಾರೆ. ನಂತರ ಬಾಲಕನೊಬ್ಬ ಟ್ರಕ್ ಬರುತ್ತಿದ್ದುದು ನೋಡದೆ ರಸ್ತೆ ದಾಟಲೆಂದು ಹೋಗಿದ್ದಾನೆ. ಬಾಲಕನ ಹಿಂದೆಯೇ ಮತ್ತೊಬ್ಬ ವಿದ್ಯಾರ್ಥಿಯೂ ಓಡೋದನ್ನ ಕಾಣಬಹುದು. ದೊಡ್ಡ ಟ್ರಕ್ ಬಂದಿದ್ದನ್ನು ನೋಡಿ ಎರಡನೇ ವಿದ್ಯಾರ್ಥಿ ಅಲ್ಲೇ ನಿಂತಿದ್ದು, ಮೊದಲು ಓಡಿದ ಬಾಲಕ ಮಾತ್ರ ಟ್ರಕ್‍ನಿಂದ ಮುಂದೆ ಓಡಿ ಪ್ರಾಣ ಉಳಿಸಿಕೊಂಡಿದ್ದಾನೆ. ಈ ವೇಳೆ ಟ್ರಕ್ ಚಾಲಕನೂ ಬ್ರೇಕ್ ಹಾಕಿದ್ದರಿಂದ ದುರಂತವಾಗೋದು ತಪ್ಪಿದೆ.
Advertisement
Advertisement
ಒಂದು ವೇಳೆ ಬಾಲಕ ಓಡದೇ ಭಯದಿಂದ ಅಲ್ಲೇ ನಿಂತಿದ್ದರೆ ಅನಾಹುತವೇ ಆಗುತ್ತಿತ್ತು. ಹೀಗಾಗಿ ರಸ್ತೆ ದಾಟುವಾಗ ಪಾದಚಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಮನದಟ್ಟು ಮಾಡಲು ವಾಹನ ಮಾಲೀಕ ಈ ವಿಡಿಯೋ ಹಂಚಿಕೊಂಡಿದ್ದಾರೆ.
https://www.youtube.com/watch?v=BGc5El65eWY