ಬೆಂಗಳೂರು: ಹವಾಮಾನ ಇಲಾಖೆಯ ವೆಬ್‍ಸೈಟ್‍ನಲ್ಲಿ ಹಾರ್ಟ್ ಬ್ರೇಕಿಂಗ್ ಮಾಹಿತಿ ನೋಡಿ ಜನ ಬೆಸ್ತು ಬಿದ್ದಿದ್ದಾರೆ.
ಸೋಮವಾರ ಉರಿಬಿಸಿಲು ಶತಕ ಬಾರಿಸುತ್ತದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ವೆಬ್‍ಸೈಟ್‍ನಲ್ಲಿ ಬಿಸಿಲಿನ ಪ್ರಮಾಣ ದಾಖಲಾಗಿದೆ. ಅದರಲ್ಲಿ ಸೋಮವಾರ ಗರಿಷ್ಠ ಬಿಸಿಲಿನ ತಾಪಮಾನ 99.9 ಡಿಗ್ರಿ ಸೆಲ್ಸಿಯಸ್‍ಗೆ ಏರಿಕೆಯಾಗುತ್ತೆ ಎಂದು ದಾಖಲಾಗಿದೆ.
ಹವಾಮಾನ ಇಲಾಖೆಯವರ ಭವಿಷ್ಯ ನಿಜವಾದ್ರೆ ಬೆಂಗಳೂರಿನಲ್ಲಿ ಯಾರೂ ಬದುಕಲ್ಲ. ಆದರೆ ಹೀಗೆ ಆಗಲು ಸಾಧ್ಯವೇ ಇಲ್ಲ. ಏಕೆಂದರೆ ಸೋಮವಾರ ಏಪ್ರಿಲ್ 1 ಮೂರ್ಖರ ದಿನ. ಹೀಗಾಗಿ ಹವಾಮಾನ ಇಲಾಖೆಯರು ಜನರನ್ನು ಫೂಲ್ ಮಾಡಲು ಈ ಮಾಹಿತಿ ಹಾಕಿದ್ರಾ ಅಥವಾ ಕಣ್ತಪ್ಪಿನಿಂದ ಮಾಹಿತಿ ಹಾಕಿದ್ರಾ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.
ಸದ್ಯ ಈ ವೆಬ್‍ಸೈಟ್ ಮಾಹಿತಿ ನೋಡಿ ಜನ ಒಂದು ಕ್ಷಣ ದಂಗಾಗಿದ್ದಾರೆ.