ಮೈಸೂರು: ಒಂಚೂರು ಸುಳಿವು ನೀಡದೇ ಯಮರಾಯ ಎರಗಿ ಬರ್ತಾನೆ. ಸಾವು ಯಾವಾಗ ಹೇಗೆ ಬರುತ್ತೆ ಅಂತ ಗೊತ್ತಾಗಲ್ಲ. ಮೈಸೂರಿನಲ್ಲಿ (Mysuru) ಆಗಿದ್ದು ಅದೇ. ಬೈಕ್ ಓಡಿಸುತ್ತಿರುವಾಗಲೇ ಸವಾರನಿಗೆ ಹೃದಯಾಘಾತವಾಗಿದೆ.
Advertisement
ಹೃದಯಾಘಾತ (Heart Attack) ಆಗ್ತಿದ್ದಂತೆ ಪ್ರಜ್ಞೆ ತಪ್ಪಿ ತಡೆಗೋಡೆಗೆ ಗುದ್ದಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಈ ಘಟನೆ ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ನಂಜೆದೇವನಪುರ ಗ್ರಾಮದ 40 ವರ್ಷದ ರವಿ ಮೃತ ವ್ಯಕ್ತಿ. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸರಣಿ ಸಾವು – ಮೃತ ಬಾಣಂತಿಯರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ
Advertisement
ಇತ್ತ ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಶನಿವಾರ ಡಿ.7) ಸಂಜೆ ಭಯಾನಕ ರಸ್ತೆ ಅಪಘಾತ ನಡೆದಿದೆ. ಪಾರ್ಕಿಂಗ್ ಮಾಡಿದ್ದ ಕಾರಿನ ಮೇಲೆ ಯಮದೂತ ಗೂಡ್ಸ್ ಲಾರಿ ಎರಗಿ ಬಂದಿದೆ. ಘಟನೆಯಲ್ಲಿ ಮೂರು ಕಾರುಗಳು ಜಖಂಗೊಂಡಿವೆ.
Advertisement
Advertisement
ಪ್ರಾಣ ಉಳಿಸಿಕೊಳ್ಳಲು ಜನ ದಿಕ್ಕೆಟ್ಟು ಓಡಿದ್ದಾರೆ. ಎರಡೂ ಘಟನಾವಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನಕಲಿ ಅಡ್ರೆಸ್ ಕೊಟ್ಟು ಮಾದಕ ವಸ್ತು ಕೊರಿಯರ್ – 2 ತಿಂಗಳಾದ್ರೂ ಪತ್ತೆಯಾಗಿಲ್ಲ ವಿಳಾಸ