– ನಿರ್ವಾಹಕನ ಸಮಯಪ್ರಜ್ಞೆಯಿಂದಾಗಿ ತಪ್ಪಿದ ಭಾರಿ ಅನಾಹುತ
ಬೆಂಗಳೂರು: ಬಿಎಂಟಿಸಿ (BMTC) ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಯಶವಂತಪುರ (Yeshwanthapur)ಬಳಿ ನಡೆದಿದೆ.
ಮೃತ ಚಾಲಕನನ್ನು ಕಿರಣ್ (29) ಎಂದು ಗುರತಿಸಲಾಗಿದ್ದು, ಬಿಎಂಟಿಸಿ ಡಿಪೋ 40ರಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಇದನ್ನೂ ಓದಿ: Tungabhadra Dam | ಡ್ಯಾಂಗೆ ಬೋರ್ಡ್ ಅಧಿಕಾರಿಗಳ ಭೇಟಿ, 33 ಗೇಟ್ ಬದಲಾವಣೆಗೆ ಚಿಂತನೆ
ನೆಲಮಂಗಲದಿಂದ ಯಶವಂತಪುರ ಕಡೆಗೆ ಬರುತ್ತಿದ್ದ ಬಸ್‌ನ್ನು ಕಿರಣ್ ಚಲಾಯಿಸುತ್ತಿದ್ದರು. ಚಲಿಸುತ್ತಿರುವಾಗಲೇ ಎದೆ ನೋವು ಕಾಣಿಸಿಕೊಂಡಿತ್ತು. ಈ ವೇಳೆ ಬಸ್ ಅಡ್ಡಾದಿಡ್ಡಿ ನುಗುತ್ತಾ ಎದುರಾಗಿದ್ದ ಇನ್ನೊಂದು ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದು ಹಾಗೆಯೇ ಮುಂದೆ ಸಾಗಿದೆ. ಕಂಡಕ್ಟರ್ ಸಮಯಪ್ರಜ್ಞೆಯಿಂದಾಗಿ ಭಾರಿ ಅನಾಹುತ ತಪ್ಪಿದೆ.
ಎದೆ ನೋವಿನಿಂದಾಗಿ ಚಾಲಕ ಕುಸಿದು ಬೀಳುತ್ತಿದ್ದಂತೆ, ಕಂಡಕ್ಟರ್ ತಕ್ಷಣ ಬ್ರೇಕ್ ಹಾಕಿ ಬಸ್ ನಿಲ್ಲಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಬಸ್‌ನಲ್ಲಿದ್ದು, ಕಂಡಕ್ಟರ್ ಸಮಯಪ್ರಜ್ಞೆಯಿಂದಾಗಿ ಯಾವುದೇ ಅವಘಡ ಸಂಭವಿಸಿಲ್ಲ. ಚಾಲಕ ಕುಸಿದು ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇದನ್ನೂ ಓದಿ: ಎರಡನೇ ಬಾರಿ ಅಧ್ಯಕ್ಷರಾಗಿ ಟ್ರಂಪ್ ಕಮಾಲ್ – ಭಾರತಕ್ಕೆ ಏನು ಲಾಭ?