KSRTC ಬಸ್‌ನಲ್ಲಿ ಹೃದಯಾಘಾತ – ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ವ್ಯಕ್ತಿ ಸಾವು

Public TV
1 Min Read
Nelamangala Solur Heart Attack copy

ನೆಲಮಂಗಲ: ರಾಜ್ಯದಲ್ಲಿ ಹೃದಯಾಘಾತ (Heart Attack) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಈ ನಡುವೆ ಬೆಂಗಳೂರು (Bengaluru) ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಲೂರು (Solur) ಸರ್ಕಾರಿ ಆಸ್ಪತ್ರೆಯಲ್ಲಿ ವ್ಯೆದ್ಯರಿಲ್ಲದೇ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ವಾಸವಿದ್ದ ಮಗಳನ್ನು ನೋಡಲು ಹಾಸನದಿಂದ ಬೆಂಗಳೂರು ಕಡೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ವ್ಯಕ್ತಿಗೆ ಹೃದಯಾಘಾತವಾಗಿದೆ. ಕೂಡಲೇ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹಾಗೂ ಸ್ಥಳೀಯರು ಸೋಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ನರ್ಸ್ ಪ್ರಥಮ ಚಿಕಿತ್ಸೆ ಮಾಡಿ ನೆಲಮಂಗಲ ತಾಲೂಕು ಆಸ್ಪತ್ರೆಗೆ ರವಾನೆ ಮಾಡಿದ್ದು, ದಾರಿ ಮಧ್ಯೆ ಹೃದಯಾಘಾತಕ್ಕೆ ವ್ಯಕ್ತಿ ಬಲಿಯಾಗಿದ್ದಾರೆ. ಇದನ್ನೂ ಓದಿ: Shivamogga | ದೆವ್ವ ಬಿಡಿಸುತ್ತೇನೆಂದು ಚಿತ್ರಹಿಂಸೆ – ಮಹಿಳೆ ಸಾವು

ಹಾಸನ ಜಿಲ್ಲೆಯ ದೊಡ್ಡಮಣ್ಣಿಗನಹಳ್ಳಿ ಗ್ರಾಮದ ವೆಂಕಟೇಶ್ (55) ಮೃತ ವ್ಯಕ್ತಿ. ಮಗಳ ಮನೆಗೆ ಹಾಸನದಿಂದ ಬೆಂಗಳೂರಿಗೆ ಬರುತ್ತಿದ್ದೆವು. ಗಂಡ, ಹೆಂಡತಿ ಇಬ್ಬರೂ ಗಾರೆ ಕೆಲಸ ಮಾಡುತ್ತಿದ್ದು, ಸೋಲೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ಇದ್ದಿದ್ದರೆ ನನ್ನ ಗಂಡ ಬದುಕುತ್ತಿದ್ದರು ಎಂದು ಹೆಂಡತಿ ಮಂಜುಳಾ ಅಳಲು ತೋಡಿಕೊಂಡಿದ್ದಾರೆ.  ಇದನ್ನೂ ಓದಿ: ನಮಗೆ ಕುಡಿಯೋಕೆ ನೀರು ಕೊಡಿ: ಸಿಎಂಗೆ ವಿದ್ಯಾರ್ಥಿನಿ ಪತ್ರ

Share This Article