– ವ್ಯಾಕ್ಸಿನ್ ಕೂಡ ಕಾರಣವಲ್ಲ ಎಂದು ಸ್ಪಷ್ಟನೆ
ಬೆಂಗಳೂರು: ಕೋವಿಡ್‌ನಿಂದ (Covid) ತೀವ್ರ ಅನಾರೋಗ್ಯಕ್ಕೆ ಒಳಗಾದವರು ಕನಿಷ್ಠ ಎರಡರಿಂದ ಮೂರು ವರ್ಷ ಹೆಚ್ಚು ಕೆಲಸ ಮಾಡದಿದ್ದರೆ ಹೃದಯಾಘಾತದಿಂದ (Heart Attack) ಪಾರಾಗಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ (Mansukh Mandaviya) ನೀಡಿದ್ದ ಹೇಳಿಕೆ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಆರೋಗ್ಯ ಮಂತ್ರಿಗಳ ಹೇಳಿಕೆಯನ್ನು ಖುದ್ದು ಹೃದಯ ತಜ್ಞರೇ ತಳ್ಳಿ ಹಾಕಿದ್ದಾರೆ.
Advertisement
ಕೋವಿಡ್ ಲಸಿಕೆಯಿಂದ ಹೃದಯಾಘಾತ ಹೆಚ್ಚಿಲ್ಲ. ಕೋವಿಡ್ ಬಂದವರು ಜಾಸ್ತಿ ಕೆಲಸ ಮಾಡಬಾರದು ಎಂಬುದಕ್ಕೆ ವೈಜ್ಞಾನಿಕ ಅಧ್ಯಯನ ಇಲ್ಲ. ಕೋವಿಡ್‌ನಿಂದಲೇ ಹಾರ್ಟ್ ಅಟ್ಯಾಕ್ ಹೆಚ್ಚಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ ಎಂಬುದಾಗಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ (Dr Manjunath) ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಹೀರೋ ಬಾದಾಮಿಯ ಶಿವ ರೆಡ್ಡಿ ವಾಸನ್‌ಗೆ ರಾಜ್ಯೋತ್ಸವ ಪ್ರಶಸ್ತಿ
Advertisement
Advertisement
ಡಾ. ಮಂಜುನಾಥ್ ಹೇಳಿದ್ದೇನು?
ಕಳೆದ 10-15 ವರ್ಷಗಳಿಂದ ಹೃದಯಾಘಾತಗಳು ಹೆಚ್ಚಾಗುತ್ತಿದ್ದು ಕೋವಿಡ್‌ನಿಂದಲೇ ಹೃದಯಾಘಾತ, ಹೃದಯ ಸ್ತಂಬನ (Cardiac Arrest) ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಕೋವಿಡ್ ಲಸಿಕೆಯಿಂದ ಹೃದಯಾಘಾತ ಕೇಸ್‌ಗಳು ಹೆಚ್ಚಾಗಿಲ್ಲ.
Advertisement
ಕೋವಿಡ್‌ನಿಂದ ಬಳಲಿದವರು ಹೆಚ್ಚು ಕೆಲಸ ಮಾಡಬಾರದು ಎಂಬ ವಾದಕ್ಕೆ ಪುರಾವೆಗಳಿಲ್ಲ. ಶೇ.25ರಷ್ಟು ರೋಗಿಗಳ ಹೃದಯಾಘಾತಕ್ಕೆ ಕಾರಣಗಳೇ ಇಲ್ಲ. ಶೇ.15ರಷ್ಟು ಹೃದ್ರೋಗಿಗಳಿಗೆ ಅನುವಂಶೀಯತೆ ಹಿನ್ನೆಲೆ ಇದೆ. ನವರಾತ್ರಿ ವೇಳೆ ನೃತ್ಯದ ವೇಳೆ ಹೃದಯಾಘಾತದದಿಂದ ಮೃತಪಟ್ಟದ್ದಕ್ಕೆ ಕಾರಣ ಗೊತ್ತಿಲ್ಲ. ಜಿಮ್, ವ್ಯಾಯಾಮ ಎಲ್ಲವೂ ಮಿತಿಯಲ್ಲಿರಬೇಕು. ಅವರವರ ದೇಹಕ್ಕೆ ತಕ್ಕಂತೆ ವ್ಯಾಯಾಮ ಮಾಡಬೇಕು. ಇಲ್ಲದೇ ಇದ್ದರೆ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
Web Stories