– ಮೋದಿಜೀಗೆ 51 ಸಾವಿರ ಕೋಟಿ ದೇಣಿಗೆ ಕೊಟ್ಟಿದ್ದ ಕಂಪನಿ ತಯಾರಿಸಿದ ಲಸಿಕೆ ಇದು
– ಲೈಂಗಿಕ ದೌರ್ಜನ್ಯ ಆರೋಪಿಯೊಂದಿಗೆ ಮೋದಿ ವೇದಿಕೆ ಹಂಚಿಕೊಂಡಿದ್ದಾರೆ ಎಂದು ವಾಗ್ದಾಳಿ
ದಾವಣಗೆರೆ: ಕೋವಿಡ್ ಲಸಿಕೆ (Covid Vaccine) ಪಡೆದ ಅನೇಕ ಯುವಜನರಿಂದು ಯಾವುದೇ ಅನಾರೋಗ್ಯವಿಲ್ಲದೇ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಕಿಡಿ ಕಾರಿದ್ದಾರೆ.
ದಾವಣಗೆರೆಯಲ್ಲಿ (Davanagere) ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಲಸಿಕೆ ಪಡೆದ ಯುವಜನರು ಯಾವುದೇ ಅನಾರೋಗ್ಯವಿಲ್ಲದಿದ್ದರೂ ಹೃದಯಾಘಾತದಿಂದ ಸಾಯುತ್ತಿದ್ದಾರೆ. ಏಕೆಂದರೆ ಇದು ಮೋದಿಜೀಗೆ (PM Modi) 51 ಸಾವಿರ ಕೋಟಿ ದೇಣಿಗೆ ನೀಡಿದ ಬಾಂಡ್ (Electoral Bonds) ಖರೀದಿಸಿದ ಕಂಪನಿ ತಯಾರಿಸಿದ್ದ ಲಸಿಕೆ. ಲಸಿಕೆ ಪ್ರಮಾಣ ಪತ್ರದಲ್ಲಿ ಯಾರ ಫೋಟೋ ಇತ್ತು ನೆನಪಿದೆಯಾ? ಮೋದಿ ಫೋಟೋ ಇತ್ತು ಅಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಅಧಿಕಾರಕ್ಕೆ ಬಂದು 10 ವರ್ಷಗಳಾದರೂ ರೈತರ ಸಾಲ ಮನ್ನಾ ಮಾಡಲಿಲ್ಲ. ಇದರಿಂದ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇದು ಒಂದು ಕಡೆಯಾದರೆ, ಚುನಾವಣಾ ಬಾಂಡ್‌ಗಳ ಮೂಲಕ ಹಣ ಪಡೆಯುತ್ತಿದ್ದದ್ದು ಮತ್ತೊಂದು ಕಡೆಯಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಇಂದು ಪ್ರಜ್ವಲ್ ರೇವಣ್ಣ ಶರಣಾಗ್ತಾರಾ?
ಇದೇ ವೇಳೆ ಗುಜರಾತ್‌ನಲ್ಲಿ ತೂಗು ಸೇತುವೆ ಕುಸಿದು (Morbi bridge collapse) ನೂರಾರು ಜನ ಸಾವನ್ನಪ್ಪಿದ್ದ ಪ್ರಕರಣ ಉಲ್ಲೇಖಿಸಿದ ಪ್ರಿಯಾಂಕಾ, ಗುಜರಾತ್‌ನಲ್ಲಿ ಬೀಳುವಂತಹ ತೂಗು ಸೇತುವೆ ಕಟ್ಟಿದವನಿಂದ, ಕೋವಿಡ್ ಲಸಿಕೆ ತಯಾರಿಸಿದವರಿಂದಲೂ ಚುನಾವಣಾ ಬಾಂಡ್ ಮೂಲಕ ಹಣ ಪೀಕಿದೆ. ಇದೆಲ್ಲವೂ ಹೊರಗೆ ಬರಬಾರದು ಅಂತಾ ಮೋದಿ ಸ್ನೇಹಿತರು ಮಾಧ್ಯಮಗಳ ಬಾಯಿಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಯಾರು ಇವರ ವಿರುದ್ಧ ಮಾತನಾಡುತ್ತಾರೋ ಅವರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡ್ತಿದ್ದಾರೆ ಎಂದು ದೂರಿದ್ದಾರೆ.
ನೂರಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದವನ ಜೊತೆ ಮೋದಿ ವೇದಿಕೆ ಹಂಚಿಕೊಂಡಿದ್ದಾರೆ. ಅವರ ಕೈಹಿಡಿದು ಮತಯಾಚನೆ ಮಾಡಿದ್ದಾರೆ. ಗೊತ್ತಿದ್ದರೂ ಗೊತ್ತಿಲ್ಲದ ಹಾಗೇ ಗೃಹ ಸಚಿವರು ಇದ್ದಾರೆ. ದೇಶಬಿಟ್ಟು ಪರಾರಿಯಾದರೂ ಮಾಹಿತಿ ಇಲ್ಲ ಎಂದು ನಾಟಕ ಆಡುತ್ತಿದ್ದಾರೆ ಎಂದು ಹೆಸರು ಹೇಳದೇ ಪ್ರಜ್ವಲ್ ರೇವಣ್ಣ ಪ್ರಕರಣ ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: SC-ST ಸಮುದಾಯಗಳಿಗೆ ಸೇರಬೇಕಿದ್ದ 11,000 ಕೋಟಿ ಹಣವನ್ನ ಕಾಂಗ್ರೆಸ್ ನುಂಗಿ ನೀರು ಕುಡಿದಿದೆ: ಮೋದಿ ಕೆಂಡ
ಬಿಜೆಪಿಯವರು ಬಿಜೆಪಿಯವರು ಚುನಾವಣೆ ಬಂದ ತಕ್ಷಣ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಚುನಾವಣೆ ಎಲ್ಲಿ ನಡೆಯುತ್ತಿದೆ ಅಲ್ಲಿಯ ಬಗ್ಗೆ ಮಾತನಾಡಬೇಕು. ಈಗ ಸಂದರ್ಭ ಬಂದಿದೆ ಹೊಸ ಪ್ರಧಾನಿ ಆಯ್ಕೆ ಮಾಡಿ, ಕೇಂದ್ರದಲ್ಲಿ ಬದಲಾವಣೆ ತೆಗೆದುಕೊಂಡು ಬನ್ನಿ. ಈ ದೇಶ ಯಾವ ಧಿಕ್ಕಿನಲ್ಲಿ ನಡೆಯಬೇಕು ಎಂದು ನೀವು ನಿರ್ಣಯ ಮಾಡಬೇಕು ಎಂದು ಜನತೆಗೆ ಕರೆ ನೀಡಿದ್ದಾರೆ.