ಇವತ್ತು ಸಂಡೆ ಬಹುತೇಕ ಮನೆಯಲ್ಲಿ ಎಲ್ಲರು ರಿಲ್ಯಾಕ್ಸ್ ಮೂಡಿನಲ್ಲಿ ಇರುವಾಗ, ಇವಾಗ ತಿಂಡಿಗೆ ಏನಪ್ಪ ಮಾಡೋದು ಅಂತ ಯೋಚನೆ ಮಾಡ್ತಾ ಇದ್ದೀರ? ಸಿಂಪಲ್ ಆಗಿ ಬೇಗನೇ ಆಗೋ ಯಾವ ತಿಂಡಿ ಮಾಡೋದಪ್ಪ ಅಂತ ಪೂಲ್ ಕಂನ್ಫೋಷನ್ ನಲ್ಲಿ ಇದ್ದೀರಾ? ಹಾಗಾದ್ರೆ ಜಾಸ್ತಿ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳಬೇಡಿ. ಸಿಂಪಲ್ಲಾಗಿ, ರುಚಿಕರ ಹಾಗೂ ಹೆಲ್ತಿ ಪಾಲಕ್ ಪೂರಿ ಮಾಡೋ ವಿಧಾನವನ್ನು ನಾವು ನಿಮ್ಗೆ ತಿಳಿಸ್ತಿವಿ, ಮನೆಯಲ್ಲಿ ಇದನ್ನು ಟ್ರೈ ಮಾಡಿ ಸಂಡೇಯನ್ನು ಹೆಲ್ತಿ ಬ್ರೇಕ್‍ಫಾಸ್ಟ್ ಮೂಲಕ ಮೆಲ್‍ಕಮ್ ಮಾಡಿ.
Advertisement
ಸಿಂಪಲ್ ಪಾಲಕ್ ಪೂರಿಗೆ ಬೇಕಾಗುವ ಸಾಮಾಗ್ರಿ
1. 2 ಕೈಮುಷ್ಟಿಯಷ್ಟು ಪಾಲಕ್ ಸೊಪ್ಪು
2. 1ರಿಂದ 1.5 ಕಪ್ ಗೋದಿ ಹಿಟ್ಟು
3. ಅರ್ಧ ಚಮಚ ಓಂ ಕಾಳು(ಅಜವನ ಕಾಳು)
4. 2-4 ಹಸಿಮೆಣಸಿನಕಾಯಿ
5. ರುಚಿಗೆ ತಕ್ಕಷ್ಟು ಉಪ್ಪು
5. 1/2 ಅಥವಾ 1/4 ಕಪ್ಪು ನೀರು
Advertisement
Advertisement
ಮಾಡುವ ವಿಧಾನ
Advertisement
ಮೊದಲು ಪಾಲಕ್ ಸೊಪ್ಪನ್ನು ನೀರಿಯಿಂದ ಚೆನ್ನಾಗಿ ತೊಳೆದುಕೊಳ್ಳಿ, ಬಳಿಕ ಒಂದು ಪ್ಯಾನ್‍ನಲ್ಲಿ 1/4 ಕಪ್ ನೀರು ಹಾಕಿ ಸ್ಟವ್ ಮೇಲೆ ಬಿಸಿ ಮಾಡಲು ಇಡಿ. ನೀರು ಬಿಸಿಯಾದ ಬಳಿಕ ಅದಕ್ಕೆ ತೊಳೆದಿಟ್ಟಿದ್ದ ಪಾಲಕ್ ಸೊಪ್ಪು ಸೇರಿಸಿ ಬೇಯಿಸಿ. ನಂತರ ಪಾಲಕ್ ಬೆಂದ ನಂತರ ಸ್ಟವ್ ಆಫ್ ಮಾಡಿ, ಪಾಲಕ್ ತಣ್ಣಗಾಗಲು ಬಿಡಿ.
ಪಾಲಕ್ ಸೊಪ್ಪನ್ನು ಹಾಗೂ 2-4 ಹಸಿಮೆಣಸನ್ನು ಮಿಕ್ಸಿ ಜಾರ್‍ಗೆ ಹಾಕಿ ರುಬ್ಬಿಕೊಳ್ಳಿ, ಆಮೇಲೆ ಒಂದು ಪಾತ್ರೆಯಲ್ಲಿ 1 ರಿಂದ 1/5 ಕಪ್ ಗೋದಿ ಹಿಟ್ಟು, ಅರ್ಧ ಚಮಚ ಓಂ ಕಾಳು, ರುಚಿಗೆ ತಕ್ಕಷ್ಟು ಉಪ್ಪು, ರುಬ್ಬಿಕೊಂಡ ಪಾಲಕ್ ಮಿಶ್ರಣ ಹಾಕಿ ಚೆನ್ನಾಗಿ ಕಲಿಸುತ್ತ, ನಿಧಾನಕ್ಕೆ ನೀರನ್ನು ಸೇರಿಸಿ ಹದವಾಗಿ ಹಿಟ್ಟನ್ನು ಕಲಸಿಕೊಳ್ಳಿ.
5-10 ನಿಮಿಷ ಕಲಸಿದ ಪೂರಿ ಹಿಟ್ಟನ್ನು ಹಾಗೆಯೇ ಇಡಬೇಕು. ನಂತರ ಈ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಒಂದೊಂದನ್ನೆ ಪೂರಿ ಆಕಾರಕ್ಕೆ ಲಟ್ಟಿಸಿಕೊಳ್ಳಿ. ಹೀಗೆ ಉಳಿದ ಪಾಲಕ್ ಮಿಶ್ರಿತ ಹಿಟ್ಟನ್ನು ಲಟ್ಟಿಸಿಕೊಳ್ಳಿ.
ನಂತರ ಒಂದು ಪಾನ್‍ನಲ್ಲಿ ಎಣ್ಣೆ ಬಿಸಿಗೆ ಇಟ್ಟು, ಅದು ಕಾದ ನಂತರ ಲಟ್ಟಿಸಿಟ್ಟಿದ್ದ ಪೂರಿಗಳನ್ನು ಎಣ್ಣೆಯಲ್ಲಿ ಕರಿಯಿಸಿ. ಬಳಿಕ ಅದನ್ನು ಪ್ಲೇಟ್‍ನಲ್ಲಿ ಹಾಕಿ ಕಾಯಿ ಚಟ್ನಿ ಅಥವಾ ಪುದೀನ ಚಟ್ನಿ ಜೊತೆ ಸವಿದು ಖುಷಿಪಡಿ.