ಇದೀಗ ಚಳಿಯ ವಾತಾವರಣ ಹೆಚ್ಚಿರುವ ಕಾಲವಾದ್ದರಿಂದ, ನೆಗಡಿ, ಗಂಟಲುನೋವು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸಂದರ್ಭ ನೀವು ಆರೋಗ್ಯ ಹಾಗೂ ದೇಹವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕೆಂದರೆ ಉತ್ತಮ ಆಹಾರಾಭ್ಯಸವನ್ನು ಮೈಗೂಡಿಸಿಕೊಳ್ಳುವುದೂ ಅಗತ್ಯ. ನಾವಿಂದು ಚಹಾ ಅಥವಾ ಕಾಫಿ ಬದಲಿಗೆ ಸವಿಯಬಹುದಾದ ಆರೋಗ್ಯಕರ ಕಷಾಯ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ನೆಗಡಿ ಮಾತ್ರವಲ್ಲದೇ ಜೀರ್ಣಕ್ರಿಯೆ, ಆಮ್ಲೀಯತೆಗೂ ಈ ರೆಸಿಪಿ ಮದ್ದಾಗುತ್ತದೆ. ನೀವು ಕಷಾಯದ ಪುಡಿಯನ್ನು ಮಾಡಿಟ್ಟುಕೊಂಡರೆ ಬೇಕೆನಿಸಿದಾಗ ಹಾಲಿನೊಂದಿಗೆ ಸವಿಯಬಹುದು.
Advertisement
ಬೇಕಾಗುವ ಪದಾರ್ಥಗಳು:
ಕಷಾಯ ಪುಡಿ ತಯಾರಿಸಲು:
ಕೊತ್ತಂಬರಿ ಬೀಜ – 1 ಕಪ್
ಜೀರಿಗೆ – ಅರ್ಧ ಕಪ್
ಸೋಂಪು – 3 ಟೀಸ್ಪೂನ್
ಮೆಂತ್ಯ – 2 ಟೀಸ್ಪೂನ್
ಕರಿ ಮೆಣಸು – 2 ಟೀಸ್ಪೂನ್
ಲವಂಗ – 10
ಏಲಕ್ಕಿ – 5
ಜಾಯಿಕಾಯಿ – 1
ಅರಿಶಿನ – 2 ಟೀಸ್ಪೂನ್
ಒಣ ಶುಂಠಿ ಪುಡಿ – 2 ಟೀಸ್ಪೂನ್
ಕಷಾಯ ಮಾಡಲು:
ನೀರು – 1 ಕಪ್
ಹಾಲು – 1 ಕಪ್
ಕಷಾಯ ಪುಡಿ – 1-2 ಟೀಸ್ಪೂನ್
ಬೆಲ್ಲ – ಸ್ವಾದಕ್ಕನುಸಾರ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಪ್ಯಾನ್ ಅನ್ನು ಬಿಸಿ ಮಾಡಿ, ಅದರಲ್ಲಿ ಕೊತ್ತಂಬರಿ ಬೀಜ, ಜೀರಿಗೆ ಹಾಗೂ ಸೋಂಪು ಹಾಕಿ ಕಡಿಮೆ ಉರಿಯಲ್ಲಿ ರೋಸ್ಟ್ ಮಾಡಿಕೊಳ್ಳಿ.
* ಮಸಾಲೆ ಪದಾರ್ಥಗಳು ಪರಿಮಳ ಹಾಗೂ ಗರಿಗರಿಯಾಗುವವರೆಗೆ ಹುರಿದುಕೊಂಡು ಬಳಿಕ ಅದನ್ನು ಇನ್ನೊಂದು ಪಾತ್ರೆಗೆ ಹಾಕಿ ತಣ್ಣಗಾಗಲು ಬಿಡಿ.
* ಈಗ ಅದೇ ಪ್ಯಾನ್‌ಗೆ ಮೆಂತ್ಯ, ಕರಿಮೆಣಸು, ಲವಂಗ, ಏಲಕ್ಕಿ ಹಾಗೂ ಜಾಯಿಕಾಯಿ ಹಾಕಿ ಹುರಿದುಕೊಳ್ಳಿ.
* ಈಗ ಹುರಿದ ಎಲ್ಲಾ ಮಸಾಲೆಗಳನ್ನೂ ತಟ್ಟೆಗೆ ವರ್ಗಾಯಿಸಿ, ಅರಶಿನ ಮತ್ತು ಒಣ ಶುಂಠಿ ಪುಡಿ ಸೇರಿಸಿ.
* ಹುರಿದ ಎಲ್ಲಾ ಮಸಾಲೆ ಪದಾರ್ಥಗಳು ತಣ್ಣಗಾಗಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಅವುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ಚೆನ್ನಾಗಿ ಪುಡಿ ಮಾಡಿ (ನೀರು ಹಾಕುವುದು ಬೇಡ).
* ಇದೀಗ ಕಷಾಯ ಪುಡಿ ತಯಾರಾಗಿದ್ದು, ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ. ನೀವು ಬೇಕೆಂದಾಗ ಇದನ್ನು ಬಳಸಬಹುದು.
* ಇದೀಗ ಕಷಾಯ ತಯಾರಿಸಲು ಒಂದು ಸಣ್ಣ ಪಾತ್ರೆ ತೆಗೆದುಕೊಳ್ಳಿ. ಒಂದು ಕಪ್ ನೀರು ಹಾಕಿ, ಬೆಲ್ಲ ಸೇರಿಸಿ ಕುದಿಸಿಕೊಳ್ಳಿ.
* ನೀರು ಕುದಿ ಬರಲು ಪ್ರಾರಂಭವಾದಾಗ ಕಷಾಯ ಪುಡಿಯನ್ನು 1-2 ಟೀಸ್ಪೂನ್‌ನಷ್ಟು ಹಾಕಿ. ಚಮಚದ ಸಹಾಯದಿಂದ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಕಷಾಯವನ್ನು ಚೆನ್ನಾಗಿ ಕುದಿಯಲು ಬಿಡಿ.
* ಬಳಿಕ ಉರಿಯನ್ನು ಆಫ್ ಮಾಡಿ, ಬಿಸಿ ಹಾಲನ್ನು ಕಷಾಯಕ್ಕೆ ಸೇರಿಸಿ. ಹಾಗೂ ಮಿಶ್ರಣ ಮಾಡಿ.
* ಇದೀಗ ಆರೋಗ್ಯಕರ ಕಷಾಯ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ.