ಹುರುಳಿ ಕಾಳು ಆರೋಗ್ಯಕರ ಮಾತ್ರವಲ್ಲದೇ ರುಚಿಕರವೂ ಆಗಿರುತ್ತದೆ. ನಾವು ತಯಾರಿಸುವ ಅಡುಗೆಗಳಲ್ಲಿ ಹುರುಳಿಯನ್ನು ಆದಷ್ಟು ಬಳಸಲು ಪ್ರಯತ್ನಿಸಿದರೆ, ಅದನ್ನು ಇನ್ನಷ್ಟು ಆರೋಗ್ಯಕರ ಖಾದ್ಯವನ್ನಾಗಿ ಮಾಡಬಹುದು. ನಾವಿಂದು ಹುರುಳಿಯನ್ನು ಬಳಸಿ ಭಿನ್ನವಾಗಿ ದೋಸೆ (Horse gram Dosa) ಹೇಗೆ ಮಾಡಬಹುದು ಎಂಬುದನ್ನು ಹೇಳಿಕೊಡುತ್ತೇವೆ. ಇದನ್ನು ನೀವೂ ಒಮ್ಮೆ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಹುರುಳಿ – ಅರ್ಧ ಕಪ್
ದೋಸೆ ಅಕ್ಕಿ – 2 ಕಪ್
ಮೆಂತ್ಯ – 1 ಟೀಸ್ಪೂನ್
ಅವಲಕ್ಕಿ – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ದೋಸೆ ತಯಾರಿಸಲು ಬೇಕಾಗುವಷ್ಟು ಇದನ್ನೂ ಓದಿ: ಬೆಳಗ್ಗಿನ ತಿಂಡಿಗೆ ಮಾಡಿ ರುಚಿಕರವಾದ ಬೆಲ್ಲದ ಪರೋಟ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಟ್ಟಲಿನಲ್ಲಿ ದೋಸೆ ಅಕ್ಕಿ, ಹುರುಳಿ ಹಾಗೂ ಮೆಂತ್ಯವನ್ನು ತೆಗೆದುಕೊಂಡು, ತೊಳೆದು, 5-6 ಗಂಟೆಗಳ ಕಾಲ ನೆನೆಸಿಡಿ.
* ನೆನೆಸಿಟ್ಟ ಅಕ್ಕಿಯನ್ನು ರುಬ್ಬುವುದಕ್ಕೂ 30 ನಿಮಿಷ ಮೊದಲು ಅವಲಕ್ಕಿಯನ್ನು ತೊಳೆದು ನೆನೆಸಿ.
* ಈಗ ಮಿಕ್ಸರ್ ಜಾರ್‌ಗೆ ನೆನೆಸಿಟ್ಟ ಎಲ್ಲಾ ಪದಾರ್ಥಗಳನ್ನು ಹಾಕಿ, ದೋಸೆ ಹಿಟ್ಟಿನ ಹದಕ್ಕೆ ಬೇಕಾಗುವಷ್ಟು ನೀರು ಸೇರಿಸಿ ರುಬ್ಬಿಕೊಳ್ಳಿ.
* ಈಗ ಹಿಟ್ಟಿಗೆ ಉಪ್ಪು ಸೇರಿಸಿ ಮಿಶ್ರಣ ಮಾಡಿ, 8-10 ಗಂಟೆ ವಿಶ್ರಾಂತಿ ನೀಡಿ.
* 8-10 ಗಂಟೆಗಳ ಬಳಿಕ ಹಿಟ್ಟು ಹುದುಗಿರುವುದು ಕಂಡುಬರುತ್ತದೆ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.
* ಈಗ ತವಾವನ್ನು ಬಿಸಿ ಮಾಡಿ, 1 ಸೌಟು ಹಿಟ್ಟನ್ನು ತವಾದ ಮೇಲೆ ಸುರಿದು, ತೆಳ್ಳಗೆ ಹರಡಿ.
* ದೋಸೆಯ ಸುತ್ತಲೂ ಕೆಲ ಹನಿ ಎಣ್ಣೆಯನ್ನು ಹಾಕಿ, 1-2 ನಿಮಿಷ ಮಧ್ಯಮ ಉರಿಯಲ್ಲಿ ಮುಚ್ಚಿ ಬೇಯಿಸಿ.
* ದೋಸೆ ಗರಿಗರಿಯಾದ ಬಳಿಕ ತವಾದಿಂದ ತೆಗೆಯಿರಿ.
* ಇದೀಗ ಹುರುಳಿ ಕಾಳಿನ ದೋಸೆ ತಯಾರಾಗಿದ್ದು, ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಗೋವಾ ಶೈಲಿಯ ಸಿಹಿಯಾದ ಸೂರ್ನೊಲಿ ದೋಸೆ ಟ್ರೈ ಮಾಡಿದ್ದೀರಾ?