ಆರೋಗ್ಯಕರ ಉಪಹಾರದ ರೆಸಿಪಿ ಹುಡುಕುತ್ತಿರುವವರಿಗೆ ಇಲ್ಲಿದೆ ದಿಢೀರ್ ಅಂತ ಮಾಡಬಹುದಾದ ಬೀಟ್ರೂಟ್ ದೋಸಾ. ಬೆಳಗ್ಗಿನ ತಿಂಡಿಗೆ ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡ ಬೀಟ್ರೂಟ್ ದೋಸಾ ಅಷ್ಟೇ ರುಚಿಕರವೂ ಆಗಿದೆ. ಗೃಹಿಣಿಯರಿಗೆ ಅರ್ಜೆಂಟ್ ಆಗಿ ಹಾಗೂ ಸ್ಪೆಷಲ್ ಆಗಿ ಮಾಡಬೇಕಾದ ಉಪಹಾರಗಳ ಪಟ್ಟಿಯಲ್ಲಿ ಇದನ್ನೂ ಸೇರಿಸಬಹುದು.
Advertisement
ಬೇಕಾಗುವ ಪದಾರ್ಥಗಳು:
* ಹೆಚ್ಚಿದ ಬೀಟ್ರೂಟ್ – ಅರ್ಧ ಕಪ್
* ಅಕ್ಕಿ ಹಿಟ್ಟು – 1 ಕಪ್
* ರವೆ – ಅರ್ಧ ಕಪ್
* ಉಪ್ಪು – ರುಚಿಗೆ ತಕ್ಕಷ್ಟು
* ನೀರು – 3 ಕಪ್
* ಸಣ್ಣಗೆ ಹೆಚ್ಚಿದ ಈರುಳ್ಳಿ – ಅರ್ಧ
* ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ – 2
* ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
* ಕತ್ತರಿಸಿದ ಕರಿಬೇವಿನ ಎಳೆಗಳು – ಸ್ವಲ್ಪ
* ಜೀರಿಗೆ – 1 ಟೀಸ್ಪೂನ್
* ನೀರು – ಹಿಟ್ಟಿಗೆ
* ಎಣ್ಣೆ – ಹುರಿಯಲು
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಮಿಕ್ಸರ್ ಜಾರ್‌ನಲ್ಲಿ ಬೀಟ್ರೂಟ್ ಮತ್ತು ಅರ್ಧ ಕಪ್ ನೀರನ್ನು ತೆಗೆದುಕೊಳ್ಳಿ. ನಯವಾಗಿ ರುಬ್ಬಿ.
* ಬೀಟ್ರೂಟ್ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿ, ಅಕ್ಕಿ ಹಿಟ್ಟು, ರವೆ, ಉಪ್ಪು, 3 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಅದಕ್ಕೆ ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕೆಲವು ಕರಿಬೇವಿನ ಎಲೆಗಳು ಮತ್ತು ಜೀರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* 10 ನಿಮಿಷ ವಿಶ್ರಾಂತಿ ನೀಡಿ, ಬಳಿಕ ಅಗತ್ಯವಿದ್ದರೆ ನೀರನ್ನು ಸೇರಿಸಿ, ಹಿಟ್ಟನ್ನು ಸರಿಹೊಂದಿಸಬಹುದು.
* ಪ್ಯಾನ್ ಅನ್ನು ಬಿಸಿಗಿಟ್ಟು, ಕಾದ ಬಳಿಕ ಹಿಟ್ಟನ್ನು ಹರಡಿ, 1 ಟೀಸ್ಪೂನ್ ಎಣ್ಣೆ ಹಾಕಿ, 2 ನಿಮಿಷ ಬಿಡಿ.
* ಗರಿಗರಿಯಾದ ಬೀಟ್ರೂಟ್ ದೋಸೆಯನ್ನು ಪ್ಲೇಟ್‌ಗೆ ಹಾಕಿ, ನಿಮಗಿಷ್ಟದ ಚಟ್ನಿಯೊಂದಿಗೆ ಸವಿಯಿರಿ.