ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿರುವ ಶ್ರೀ ರಾಮುಲುಗೆ ಭೂಕಂಟಕವೊಂದು ಎದುರಾಗಿದೆ.
ಬಳ್ಳಾರಿಯಲ್ಲಿ ಸರ್ಕಾರಿ ಭೂಮಿ ಕಬಳಿಸಿದ್ದರ ಸಂಬಂಧ ತನಿಖೆಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿದ್ದಾರೆ.
Advertisement
ಶ್ರೀರಾಮುಲು ವಿರುದ್ಧ ಬಳ್ಳಾರಿಯ ತಿಲಕ್ ನಗರ ನಿವಾಸಿ ಜಿ. ಕೃಷ್ಣಮೂರ್ತಿ ಅನ್ನೋರು ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ 2013ರಲ್ಲೇ ಲೋಕಾಯುಕ್ತ ತನಿಖೆಗೆ ಬಳ್ಳಾರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಆದೇಶಿಸಿದ್ದರು.
Advertisement
Advertisement
ಇತ್ತ ಕಳೆದ ವರ್ಷದ ಸೆಪ್ಟೆಂಬರ್ 26ರಂದು ತನಿಖೆಗೆ ಸ್ಪೀಕರ್ ಅನುಮತಿ ಅಗತ್ಯವಿಲ್ಲವೆಂದು ಹೇಳಿ ಅಂದಿನ ಅಡ್ವೋಕೇಟ್ ಜನರಲ್ ಆಗಿದ್ದ ಉದಯ್ ಹೊಳ್ಳ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆ ಅಭಿಪ್ರಾಯನ್ನ ಒಪ್ಪದ ಲೋಕಾಯುಕ್ತದ ಕಾನೂನು ವಿಭಾಗ, ರಾಮುಲು ಶಾಸಕರಾಗಿರುವ ಕಾರಣ ತನಿಖೆಗೆ ಸಕ್ಷಮ ಪ್ರಾಧಿಕಾರ ಅಂದರೆ ಇಲ್ಲಿ ವಿಧಾನಸಭೆ ಸ್ಪೀಕರ್ ಅನುಮತಿ ಕಡ್ಡಾಯ ಎಂದಿದ್ದಾರೆ.