ಅಕ್ಕಿ ತೊಳೆದ ನೀರಿನಿಂದ ನಿಮ್ಮ ಸೌಂದರ್ಯ ಹೆಚ್ಚಿಸಬಹುದು

Public TV
1 Min Read
rice washing Water 1

ರಿಯಾದ ಕಾಳಜಿ ಮಾಡದೇ ಮುಖದ ಕಾಂತಿ ಹಾಳಾಗಲು ಸಾಧ್ಯತೆ ಇಂದಿನ ದಿನಗಳಲ್ಲಿ ಹೆಚ್ಚಾಗಿರುತ್ತದೆ. ಹೀಗಾಗಿ ಕೆಮಿಕಲ್ ಇರುವ ಕ್ರೀಮ್‌ಗಳನ್ನು ಬಳಸುವ ಬದಲು, ಮನೆಯಲ್ಲಿಯೇ ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳಿಂದ ಮುಖದ ಬಣ್ಣ ಬದಲಾಯಿಸ ಬಹುದಾಗಿದೆ. ಪ್ರತಿನಿತ್ಯ ನಾವು ಅನ್ನಕೆಂದು ಬೆಳೆಸುವ ಅಕ್ಕಿ ತೊಳೆದ ನೀರಿನಲ್ಲಿ ನಿಮ್ಮ ಸೌಂದರ್ಯವನ್ನು ದುಪ್ಪಟ್ಟು ಮಾಡುವ ಅಂಶವಿದೆ.

* ಅಕ್ಕಿ ತೊಳೆದ ನೀರಿಗೆ ಕಿತ್ತಲೆ ಸಿಪ್ಪೆ, ಲಿಂಬೆಯ ಸಿಪ್ಪೆ, ಗ್ರೀನ್ ಟೀ, ತುಳಸಿ ದಳಗಳು, ಬೇವಿನ ಎಲೆ, ಇವುಗಳಲ್ಲಿ ಯಾವುದಾದ್ರೂ ಒಂದನ್ನು ಮಿಕ್ಸ್ ಮಾಡಿಕೊಂಡು ಬಳಸಿದ್ರೂ ಕೂಡ ನಿಮ್ಮ ಚರ್ಮದ ಆರೋಗ್ಯ ವೃದ್ಧಿಯಾಗಲಿದೆ.

rice washing Water

* ನೀವು ಅಕ್ಕಿ ನೀರನ್ನು ರೆಫ್ರಿಜರೇಟ್‍ನಲ್ಲಿ ಇಟ್ಟು ನಂತರ ಅದನ್ನು ಫೇಶಿಯಲ್ ಟಿಶ್ಯೂ ಅಥವಾ ಹತ್ತಿ ಅಥವಾ ಕಾಟನ್ ಬಟ್ಟೆ ಬಳಸಿ ಮುಖಕ್ಕೆ ಹಚ್ಚಿ. ಸುಮಾರು 10 ನಿಮಿಷಗಳ ಕಾಲ ಬಿಡಿ. ನಂತರ ಸ್ವಚ್ಛವಾದ ನೀರಿನಿಂದ ತೊಳೆಯಿರಿ. ಇದನ್ನೂ ಓದಿ:  ಚಳಿಗಾಲದಲ್ಲಿ ನೀವು ಸೇವಿಸುವ ಆಹಾರದಲ್ಲಿ ಈ ಅಂಶಗಳು ಇರಲಿ

* ಅಕ್ಕಿ ನೀರಿನಲ್ಲಿ ಇರುವ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಸುಕ್ಕುಗಳು, ನಸುಕಂದು ಮುಂತಾದ ವಯಸ್ಸಾದ ಸುಕ್ಕು ತೆಗೆದುಹಾಕಲು ಸಹಾಯ ಮಾಡುತ್ತದೆ.

rice washing Water

* ಅಕ್ಕಿ ನೀರನ್ನು ನಿಮ್ಮ ಕೂದಲಿನ ಆರೈಕೆಗೆ ಬಳಸಬಹುದು. ಇದರಲ್ಲಿ ಅಮೈನೋ ಆಮ್ಲಗಳು ಸಮೃದ್ಧವಾಗಿದ್ದು, ಕೂದಲನ್ನು ಬಲಗೊಳಿಸುತ್ತದೆ. ಇದನ್ನೂ ಓದಿ: ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಗೊತ್ತಾ?

hair brush

* ಒಂದು ರಾತ್ರಿಯಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸದೇ ಇದ್ದರೂ ನಿಧಾನಕ್ಕೆ ಮೊಡವೆಗಳನ್ನು ಅದರ ಕಲೆಗಳನ್ನು ಮಾಯವಾಗಿಸುತ್ತದೆ.

default beauty parlours 1

* ಚರ್ಮದ ಉರಿಯೂತವನ್ನು ಗುಣಪಡಿಸಲು ಅಕ್ಕಿನೀರು ಸಹಾಯ ಮಾಡುತ್ತದೆ. ಹತ್ತಿ ಚೆಂಡನ್ನು ಬಳಸಿ ಸಮಸ್ಯೆಯಿರುವ ಜಾಗದಲ್ಲಿ ಹಚ್ಚಿ ಒಣಗಲು ಬಿಡಿ. ನಂತರ ಅದನ್ನು ನೀರಿನಿಂದ ತೊಳೆಯಿರಿ.

Share This Article