Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಸಿದ್ದರಾಮಯ್ಯರ ಆಡಳಿತಾವಧಿಯಲ್ಲಿ 35 ಸಾವಿರ ಕೋಟಿ ರೂ. ಅವ್ಯವಹಾರ: ಸುಧಾಕರ್

Public TV
Last updated: January 23, 2023 6:33 pm
Public TV
Share
6 Min Read
sudhakar 1 1
SHARE

– ಕಾಂಗ್ರೆಸ್‌ನಿಂದಲೇ ಭ್ರಷ್ಟಾಚಾರದ ಹುಟ್ಟು
– ಹಗರಣ, ಭ್ರಷ್ಟಾಚಾರಗಳೇ ಕಾಂಗ್ರೆಸ್‌ ಆಡಳಿತದ ಸಾಧನೆ
– ಶವಪೆಟ್ಟಿಗೆ, ಬಡವರ ಯೋಜನೆಗಳಲ್ಲೇ ಹಣ ಹೊಡೆದ ಪಕ್ಷ ಕಾಂಗ್ರೆಸ್‌

ಬೆಂಗಳೂರು: ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್‌ ಸಾಧನೆ ಅಂದರೆ ಅದು ಭ್ರಷ್ಟಾಚಾರ ಮಾತ್ರ. ಭ್ರಷ್ಟಾಚಾರ ಅನ್ನುವ ಪದದ ಹುಟ್ಟಿಗೆ ಕಾರಣವಾಗಿರುವುದೇ ಕಾಂಗ್ರೆಸ್‌ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ (Sudhakar) ಕಿಡಿಕಾರಿದರು.

Contents
  • – ಕಾಂಗ್ರೆಸ್‌ನಿಂದಲೇ ಭ್ರಷ್ಟಾಚಾರದ ಹುಟ್ಟು – ಹಗರಣ, ಭ್ರಷ್ಟಾಚಾರಗಳೇ ಕಾಂಗ್ರೆಸ್‌ ಆಡಳಿತದ ಸಾಧನೆ – ಶವಪೆಟ್ಟಿಗೆ, ಬಡವರ ಯೋಜನೆಗಳಲ್ಲೇ ಹಣ ಹೊಡೆದ ಪಕ್ಷ ಕಾಂಗ್ರೆಸ್‌
  • Live Tv

ಬೆಂಗಳೂರಿನಲ್ಲಿ (Bengaluru) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 60 ವರ್ಷ ದೇಶವಾಳಿದ ಕಾಂಗ್ರೆಸ್‌ ಯಾವುದೇ ಯೋಜನೆ ಮಾಡಿದರೂ ಅದರಲ್ಲಿ ಭ್ರಷ್ಟಾಚಾರ ಇರುತ್ತದೆ. ಅವರಿಗೆ ಅದು ರಕ್ತಗತವಾಗಿ ಬಂದಿದೆ. ಉಳಿದವರು ಕೂಡ ಹಾಗೆಯೇ ಎಂದು ಅಂದುಕೊಂಡು ಅತ್ಯುತ್ತಮ ಆಡಳಿತ ನೀಡುತ್ತಿರುವ ಬಿಜೆಪಿ (BJP) ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.

CONGRESS

ಲೋಕಾಯುಕ್ತ ಮುಚ್ಚಿ, ಎಸಿಬಿ ರಚನೆ: 2013-2018ರ ತನಕ ರಾಜ್ಯದಲ್ಲಿ ಕಾಂಗ್ರೆಸ್‌ (Congress) ಸರ್ಕಾರ ಇತ್ತು. ಈ ಸರ್ಕಾರ 5 ವರ್ಷ ಮಾಡಿದ್ದು ಭ್ರಷ್ಟಾಚಾರ ಮಾತ್ರ. ಆದರೆ, ಇವರು ಇವಾಗ ನಮ್ಮ ಮೇಲೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. 2013ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರದ ನಿರ್ಮೂಲನೆ ಬಗ್ಗೆ ನಾವು ಹೇಳಿದ್ದೆವು. ಅದೇ ರೀತಿ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ ಎಂದು ಕಾಂಗ್ರೆಸ್‌ ಕೂಡ ಹೇಳಿತ್ತು. ಅವರ ಸರ್ಕಾರ ರಾತ್ರೋರಾತ್ರಿ ಲೋಕಾಯುಕ್ತ ಮುಚ್ಚಿ, ಎಸಿಬಿ ರಚನೆ ಮಾಡಿತು. ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿದಕ್ಕೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಲೋಕಾಯುಕ್ತದಂತಹ ಸಂಸ್ಥೆಗಳು ರಾಜ್ಯದಲ್ಲಿ ಇರಬೇಕು ಎಂದು ತಿಳಿಸಿತ್ತು. ಸಿಎಂ ಮೇಲೆ 50-60 ಕಂಪ್ಲೇಟ್‌ ಬಂದ ಮೇಲೆ ತನಿಖೆ ಆಗುತ್ತೆ ಅನ್ನುವ ಭಯಭೀತಿಯಿಂದ ರಾತ್ರೋರಾತ್ರಿ ಲೋಕಾಯುಕ್ತ ಮುಚ್ಚಿ ಎಸಿಬಿ ಸ್ಥಾಪಿಸಿ ಭ್ರಷ್ಟಾಚಾರ ಮುಚ್ಚಿಕ ಹಾಕುವ ಪ್ರಯತ್ನ ಅದಾಗಿತ್ತು ಎಂದು ಹೇಳಿದರು.

ಬಿಜೆಪಿ ಭ್ರಷ್ಟಾಚಾರ ಮಾಡಿರುವುದೇ ಆಗಿದ್ದರೆ, ನಾವು ಲೋಕಾಯುಕ್ತ ಸಂಸ್ಥೆ ಪುನರ್ ಸ್ಥಾಪಿಸಲು ಸ್ಟೇ ತರುತ್ತಿದ್ದೆವು. ಆದರೆ, ನಾವು ಬಂದು ಲೋಕಯುಕ್ತವನ್ನು ಪುನರ್ ಸ್ಥಾಪನೆ ಮಾಡಿದ್ದೇವೆ. ಭ್ರಷ್ಟಾಚಾರ ಮಾಡುತ್ತಿದ್ದೇವೆ ಎಂಬುದು ನಿಜವಾಗಿದ್ದರೆ ಇವತ್ತು ನಾವು ಲೋಕಾಯುಕ್ತವನ್ನು ಪುನರ್ ಸ್ಥಾಪನೆ ಮಾಡುತ್ತಿರಲಿಲ್ಲ. ಆದರೆ ನಾವು ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು ಎಂದು ಪ್ರಧಾನಿಗಳು ಯಾವ ರೀತಿ ಹೇಳಿದ್ದರೋ, ಹಾಗೆಯೇ ನಾವು ಅದಕ್ಕೆ ಕಾಯಕಲ್ಪ ಕೊಟ್ಟಿದ್ದೇವೆ ಎಂದರು.

Siddaramaiah 1 2

35 ಸಾವಿರ ಕೋಟಿ ರೂ. ಭ್ರಷ್ಟಾಚಾರ: 2018ರಲ್ಲಿ ಫೈನಾನ್ಸಿಯಲ್ ಅಡಿ ಸಿಎಜಿ ವರದಿ ಪ್ರಕಾರ 2013- 2018ರಲ್ಲಿ 35 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ಡಿ ನೊಟಿಫಿಕೇಷನ್‌ ಅನ್ನುವುದಕ್ಕೆ ರೀಡೂ ಅನ್ನುವ ಹೊಸ ಪದವನ್ನೇ ಸೃಷ್ಟಿ ಮಾಡಿದ್ದಾರೆ. 10 ಸಾವಿರ ಬೆಂಗಳೂರು ನಿವಾಸಿಗಳಿಗೆ ಅನ್ಯಾಯ ಮಾಡಿದ್ದಾರೆ. 900 ಎಕರೆಗೂ ಹೆಚ್ಚು ಜಾಗವನ್ನು ರೀಡೂ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಇದಲ್ಲವನ್ನು ಮುಚ್ಚಿಹಾಕಲು ಲೋಕಾಯುಕ್ತ ಮುಚ್ಚಿ, ಎಸಿಬಿ ತೆರೆದಿದ್ದರು ಎಂದು ಆರೋಪಿಸಿದರು.

ಭ್ರಷ್ಟಾಚಾರಗಳಿಗೆ ಕಾಂಗ್ರೆಸ್‌ನ ನೆರವು: ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ ಜಾರ್ಜ್‌ ಕಾಂಗ್ರೆಸ್‌ನ ಭ್ರಷ್ಟಾಚಾರಗಳಿಗೆ ನೆರವಾಗಿದ್ದರು. 292 ಕೋಟಿ ವೈಟ್ ಟಾಪಿಂಗ್ ಅಂದಾಜು ಇತ್ತು. ಅದನ್ನು 374 ಕೋಟಿಗೆ ಹೆಚ್ಚಿಸಿದರು. ಯಾಕೆ ಶೇ.25% ಹೆಚ್ಚಳಕ್ಕೆ ಅನುಮತಿ ನೀಡಿದ್ದರು? ಯಾವ ಉದ್ದೇಶಕ್ಕೆ ಹೆಚ್ಚಿಗೆ ಕೊಟ್ಟಿರಿ? 9.47 ಕಿ.ಮೀ ಟೆಂಡರ್‌ಶ್ಯೂರ್‌ ರಸ್ತೆ ನಿರ್ಮಿಸಲು ಖಾಸಗಿ ಸಂಸ್ಥೆಯೊಂದು 75 ಕೋಟಿ ರೂ. ಎಷ್ಟಿಮೇಟ್‌ ಕೊಟ್ಟಿತ್ತು. ಆದರೆ 115 ಕೋಟಿ ರೂ. ಕೊಟ್ಟಿದ್ದಾರೆ. ಎಷ್ಟಿಮೇಟ್‌ಗಿಂತ 53% ಹೆಚ್ಚು ಕೊಟ್ಟಿದ್ದಾರೆ. ನಮ್ಮ ಸರ್ಕಾರ ಟೆಂಡರ್‌ ಪ್ರೀಮಿಯಂ ಮೇಲೆ 5% ಹೆಚ್ಚು ಮಾಡಬಾರದು ಎಂದು ಆದೇಶ ಮಾಡಿದ್ದಾರೆ. 50% ಟೆಂಡರ್‌ ಪ್ರೀಮಿಯಂ ತೆಗೆದುಕೊಂಡ ಕಾಂಗ್ರೆಸ್‌ ನಮ್ಮ ಸರ್ಕಾರದ ಮೇಲೆ 40% ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್ 60 ವರ್ಷ ಅಕ್ರಮ ಮಾಡಿದ್ರೆ ಬಿಜೆಪಿ ತನಿಖೆ ಮಾಡಿಸಲಿ: ಸಿದ್ದರಾಮಯ್ಯ ಸವಾಲು

bjp flag

ಊಟದ ನೆಪದಲ್ಲಿ ಕಮಿಷನ್‌: ಇಂದಿರಾ ಕ್ಯಾಂಟೀನ್ ಆರಂಭಿಸಿ ಬಡವರಿಗೆ ಕೊಡುವ ಊಟದಲ್ಲೂ ಕಮೀಷನ್ ಹೊಡೆದ ಖ್ಯಾತಿ ನಿಮ್ಮದು. ಅಲ್ಪಸಂಖ್ಯಾತರಿಗೆ, ದಲಿತರಿಗೆ, ವಿದ್ಯಾರ್ಥಿಗಳಿಗೆ ನ್ಯಾಯ ಕೊಡಲಿಲ್ಲ. ಅಲ್ಪಸಂಖ್ಯಾತರಿಗೆ ನೀವೇ ಉದ್ಧಾರಕರು ಅಂತ ಹೇಳಿಕೊಂಡು ತಿರುಗುವ ನೀವು 2,900 ಎಕರೆ ಜಾಗವನ್ನು ಕಬಳಿಕೆ ಮಾಡಿದವರು ನೀವು. ಜನರ ಮೈಂಡ್‌ ಅನ್ನು ತಮ್ಮ ಕಡೆ ತಿರುಗಿಸಲು ಇಂತಹ ಆರೋಪವನ್ನು ಬಿಜೆಪಿ ವಿರುದ್ಧ ಮಾಡಲಾಗುತ್ತಿದೆ. ಸಿದ್ದರಾಮಯ್ಯನವರ ಆಪ್ತನ ಮನೆ ಮೇಲೆ 2017ರಲ್ಲಿ ರೇಡ್ ಆದಾಗ ಸಿಕ್ಕ ಡೈರಿಯಲ್ಲಿ 1,000 ಕೋಟಿ ರೂ. ಹೈಕಮಾಂಡ್‌ಗೆ ಹೋದ ಬಗ್ಗೆ ಉಲ್ಲೇಖವಿದೆ. ಆದರೆ ಇದು ಯಾರ ಹಣ? ಬಜೆಟ್ ಮೂಲಕವೇ ಸ್ಪೆಷಲ್ ಅನೌನ್ಸ್‌ಮೆಂಟ್‌ ಆಗಿತ್ತಾ ಎಂದು ಪ್ರಶ್ನಿಸಿದರು.

ಪಿಎಸ್ಐ ಹಗರಣ: ಪಿಎಸ್ಐ ಸ್ಕ್ಯಾಮ್ ಆಗಿದೆ ಅಂತ ಹೇಳ್ತೀರಿ. ಇದು ನಿಮ್ಮ ಕಾಲದಲ್ಲೇ ಆಗಿದ್ದು. ಮಾಜಿ ಪೊಲೀಸ್‌ ಅಧಿಕಾರಿ ನಿಮ್ಮ ಗೃಹ ಇಲಾಖೆಯ ಸಲಹೆಗಾರರು ಕೆಂಪಯ್ಯ ಹೆಸರಿನಲ್ಲೇ ಕೇಸ್‌ಗಳು ದಾಖಲಾಗಿದೆ. ಕಸ ವಿಲೇವಾರಿ ಮಾಡೋದ್ರಲ್ಲೂ 1,066 ಕೋಟಿ ರೂ. ಹಗರಣ ಮಾಡಿದ್ದಾರೆ. ಕಸ ವಿಲೇವಾರಿ ಮಾಡುವುದರಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. 2015-16ರಲ್ಲಿ 385 ಕೋಟಿ ಖರ್ಚಾಗಿದೆ‌. ಕೇವಲ ಒಂದೇ ವರ್ಷದಲ್ಲಿ 681 ಕೋಟಿ ಹೆಚ್ಚಾಗಿದೆ. ಇದು ಯಾವ ಸ್ಕೀಮ್, ಎಷ್ಟು ಪರ್ಸೆಂಟ್ ಆಗಿದೆ ಹೇಳಿ? ಬೆಂಗಳೂರಿಗೆ ಹೊರ ಹೋಗುವ ಕಸ ಮಾಯ ಆಗಿ ಹೋಯ್ತಾ? ನಾನು ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ ಅಧ್ಯಕ್ಷನಾಗಿದ್ದಾಗ ನೋಡಿದ್ದೇನೆ. ಆ ಪ್ರದೇಶದ ಜನ ರೋಗಗ್ರಸ್ತರಾಗಿದ್ರು ಎಂದು ಟೀಕಿಸಿದರು.

ಪಿಎಂ ಆವಾಸ್‌ ಯೋಜನೆಯಲ್ಲಿ 250 ಕೋಟಿ ಭ್ರಷ್ಟಾಚಾರ ನಡೆದಿದೆ. 50,000 ಮನೆ ಕಟ್ಟಿಕೊಡಬೇಕು. 10 ಕಂಟ್ರಾಕ್ಟರ್‌ಗಳನ್ನು ಸೆಲೆಕ್ಟ್‌ ಮಾಡಿ, ಅರ್ಹತೆ ಇಲ್ಲದವರಿಗೆ ಟೆಂಡರ್‌ ಕೊಟ್ಟು, ಕೆಟಿಟಿಪಿ ಆಕ್ಟ್‌ ವಿರುದ್ಧ ಟೆಂಡರ್‌ ಕೊಟ್ಟು ಅದರಲ್ಲಿ ಭ್ರಷ್ಟಾಚಾರದ ಮಾಡಿದಿದ್ದೀರಿ. ಕೇಂದ್ರ ಕೊಟ್ಟಿದ್ದ ಎರಡೂವರೆ ಸಾವಿರ ಕೋಟಿ ರೂ.ಗಳಲ್ಲಿ 250 ಕೋಟಿ ರೂ. ಗುಳುಂ ಮಾಡಿ ಬಡವರ ಹೊಟ್ಟೆಗೆ ಹೊಡೆದ ಖ್ಯಾತಿ ನಿಮ್ಮದು ಎಂದು ಹೇಳಿದರು.

ಸೈನಿಕರ ಶವ ಪೆಟ್ಟಿಗೆಯಲ್ಲೇ ದುಡ್ಡು ತಿಂದ ಕಾಂಗ್ರೆಸ್‌, ಕಾಮನ್‌ವೆಲ್ತ್‌ ಗೇಮ್ಸ್‌ ಸೇರಿದಂತೆ ಎಲ್ಲದಲ್ಲೂ ದುಡ್ಡು ತಿಂದಿದೆ. ಪಕ್ಷ ಹಾಗೂ ನಾಯಕರ ಮೇಲೆ ಇರುವುದೇ ಭ್ರಷ್ಟಾಚಾರದ ಹಗರಣ. ಬೆಂಗಳೂರು ಅಭಿವೃದ್ಧಿ ಬಗ್ಗೆ ಮಾತನಾಡುವ ಕಾಂಗ್ರೆಸ್‌ ತನ್ನ ಆಡಳಿತದ 5 ವರ್ಷದಲ್ಲಿ 13,840 ಕೋಟಿ ಕೇಂದ್ರ ಸರ್ಕಾರದ ನೆರವಿನಿಂದ ಕೇವಲ 43. ಕಿ.ಮೀ ಮಾರ್ಗ ಮಾಡಿತ್ತು. ಆದರೆ ನಾವು 75 ಕಿ.ಮೀ., 61 ಸ್ಟೇಷನ್‌ ನಿರ್ಮಿಸಿದ್ದೇನೆ. 30,695 ಕೋಟಿ ಖರ್ಚು ಮಾಡಿ ಬಿಜೆಪಿ ಸರ್ಕಾರ ಬದ್ಧತೆ ಮತ್ತು ಅಭಿವೃದ್ಧಿಯ ಅಜೆಂಡಾವನ್ನು ತೋರಿಸಿದ್ದೇವೆ ಎಂದರು.

sudhakar

ಮಹಿಳಾ ಮತ್ತು ಮಕ್ಕಳ ಇಲಾಖೆ, ಪಡಿತರ ಇಲಾಖೆ, ನೀರಾವರಿ, ಉನ್ನತ ಶಿಕ್ಷಣ, ಆರೋಗ್ಯ ಇಲಾಖೆ, ಗಣಿ ಇಲಾಖೆ ಎಲ್ಲಿ ನೋಡಿದರೂ ಕಾಂಗ್ರೆಸ್‌ನದ್ದು ಭ್ರಷ್ಟಾಚಾರದ ಇತಿಹಾಸ ಕಾಣುತ್ತದೆ. ಪರಿಶಿಷ್ಟ ಜಾತಿ, ಪಂಗಡ ಜನರ ಪ್ರತಿನಿಧಿ ಅಂತ ಹೇಳಿಕೊಳ್ಳುವ ನೀವು ಮೀಸಲಾತಿ ಹೆಚ್ಚಳ ನೀಡಲಿಲ್ಲ. ನಿಮಗೆ ಬೇಕಾಗಿದ್ದು ಮತ ಮಾತ್ರ. ಅವರ ಅಭಿವೃದ್ಧಿ ಬೇಕಾಗಿರಲಿಲ್ಲ. ನಮ್ಮ ಸರ್ಕಾರ ಅವರಿಗೆ ಬದ್ಧತೆಯಿಂದ ಮೀಸಲಾತಿ ನೀಡಿದೆ. ಪುಕ್ಕಟೆ ಪ್ರಚಾರ ತೆಗೆದುಕೊಳ್ಳುವ ನಿಮ್ಮಿಂದ ಏನಾದರೂ ಉಪಯೋಗವಾಗಿದೆಯೇ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿ ಬಿ ಟೀಂ ಯಾರು ಅಂತ ಬಹಿರಂಗ ಚರ್ಚೆಗೆ ಸಿದ್ಧ- ಸುರ್ಜೇವಾಲಾಗೆ HDK ಸವಾಲ್

ಬಿಜೆಪಿಯಿಂದ ಲಸಿಕೆ ನೀಡಿ ಜನರ ರಕ್ಷಣೆ: ಸೋಲಾರ್ ಹಗರಣದ ರೂವಾರಿ ಯಾರು? ಸಣ್ಣ ನೀರಾವರಿ ಇಲಾಖೆಯಲ್ಲಿ ಕಾಮಗಾರಿ ಮಾಡದೆ ಗುಳುಂ ಮಾಡಿದ್ದು ಯಾರು? ಹಾಸಿಗೆ, ದಿಂಬಿನಲ್ಲೂ ಲಂಚ ಹೊಡೆದಿದ್ದು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ನೇರ ಉತ್ತರ ಕಾಂಗ್ರೆಸ್‌. ಮೋದಿ ಸರ್ಕಾರ ಎರಡೂವರೆ ವರ್ಷದಿಂದ ಕೋವಿಡ್‌ ಬಂದಾಗಿನಿಂದ ಗರೀಬ್‌ ಕಲ್ಯಾಣ ಯೋಜನೆ ಮೂಲಕ ದೇಶದ 80 ಕೋಟಿ ಜನರಿಗೆ ಅಕ್ಕಿ ಕೊಡುತ್ತಿದೆ. ಹೊರ ದೇಶಗಳಲ್ಲಿ ನಮ್ಮ ದೇಶದ ಜನರನ್ನು ಮಾತ್ರವಲ್ಲ, ಬೇರೆ ದೇಶದ ಜನರನ್ನು ಕೂಡ ಲಸಿಕೆ ಕೊಟ್ಟು ರಕ್ಷಣೆ ಮಾಡಿದ್ದೇವೆ. ವಸುದೈವ ಕುಟುಂಬಕಂ ತತ್ವದಲ್ಲಿ ನಡೆಯುತ್ತಿದೆ ಬಿಜೆಪಿ ಮುನ್ನಡೆಯುತ್ತಿದೆ ಎಂದರು.

ನಮ್ಮ ಸರ್ಕಾರ ಪ್ರಕೃತಿ ವಿಕೋಪದ ನಡುವೆ, ಶತಮಾನದ ಸಮಸ್ಯೆ ಕೋವಿಡ್‌ ಎದುರಿಸಿ ಗೆದ್ದಿದೆ. ಜೀವ ಉಳಿಸಿ, ಜೀವನ ಮುಂದುವರೆಸುವ ಕಠಿಣ ಸವಾಲು ಗೆದ್ದು ಅತ್ಯುತ್ತಮ ಕೆಲಸ ಮಾಡಿದೆ. ಹೀಗಾಗಿ ಹೂಡಿಕೆ ಹೆಚ್ಚಾಗಿ ಬಂದಿದೆ. ರಾಜ್ಯದ ಆಡಳಿತದ ಬಗ್ಗೆ ನಂಬಿಕೆಯಿಂದ ಇವೆಲ್ಲಾ ನಡೆದಿದೆ. ಆರೋಗ್ಯ ಇಲಾಖೆಯಲ್ಲಿ ಭಾರೀ ಬದಲಾವಣೆ ಆಗಿದೆ. ನೇಮಕಾತಿಯಿಂದ ಹಿಡಿದು, ಮೆಡಿಕಲ್‌ ಕಾಲೇಜು ಸ್ಥಾಪನೆ ತನಕ ಎಲ್ಲವೂ ದಾಖಲೆಯೇ. ನಾವು ಹೇಳಿಕೊಳ್ಳುವ ಕೆಲಸ ಮಾಡಿದ್ದೇವೆ. ಆದರೆ ಕಾಂಗ್ರೆಸ್‌ ಏನು ಮಾಡಿದೆ. ಕೇವಲ ಆರೋಪ ಮಾಡುವುದೊಂದೇ ಅವರ ಕೆಲಸ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಜನರು ಅಭಿವೃದ್ಧಿ ಅಜೆಂಡಾದ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಮುಂದಿನ ಬಾರಿ 125-150 ಸೀಟುಗಳನ್ನು ಗೆಲ್ಲಿಸಿ ಮತ್ತೊಮ್ಮೆ ಅಧಿಕಾರ ಮಾಡಲು ಆಶೀರ್ವಾದ ಮಾಡುತ್ತಾರೆ ಎಂದು ಹೇಳಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:bjpcongressSudhakarಕಾಂಗ್ರೆಸ್ಬಿಜೆಪಿಸುಧಾಕರ್
Share This Article
Facebook Whatsapp Whatsapp Telegram
Leave a Comment

Leave a Reply

Your email address will not be published. Required fields are marked *

Cinema News

Mahesh Babu Namrata Shirodkar
ಪತ್ನಿ ಜೊತೆ ಸ್ಟೈಲ್‌ ಆಗಿ ಕಾಣಿಸಿಕೊಂಡ ಮಹೇಶ್ ಬಾಬು
Cinema Latest South cinema Top Stories
Yo yo singh
ಒಂದೇ ತಿಂಗಳಲ್ಲಿ ಬರೋಬ್ಬರಿ 18 ಕೆಜಿ ತೂಕ ಇಳಿಸಿಕೊಂಡ ಹನಿ ಸಿಂಗ್
Cinema Latest Sandalwood Top Stories
vijayalakshmi
ಪರಪ್ಪನ ಅಗ್ರಹಾರ ಜೈಲಲ್ಲಿ ಗಂಟೆಗಟ್ಟಲೆ ಕಾದು ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ
Cinema Latest Sandalwood Top Stories
Vishnuvardhan 3
ದಾದಾ ಫ್ಯಾನ್ಸ್‌ಗೆ ಶುಭ ಸುದ್ದಿ – ಬರುತ್ತಿದೆ ಹೊಸ ಸ್ಮಾರಕ
Cinema Latest Top Stories
Willson Garden Blast
ವಿಲ್ಸನ್ ಗಾರ್ಡನ್ ನಿಗೂಢ ಬ್ಲಾಸ್ಟ್ – ಗಾಯಗೊಂಡಿದ್ದ ತಾಯಿ, ಮಗಳು ಸಾವು
Cinema Latest Sandalwood Top Stories

You Might Also Like

Jaishankar Wang Yi
Latest

3 ವರ್ಷಗಳ ನಂತರ ಮೊದಲ ಬಾರಿಗೆ ಭಾರತಕ್ಕೆ ಚೀನಾ ವಿದೇಶಾಂಗ ಸಚಿವ ಭೇಟಿ

Public TV
By Public TV
1 hour ago
Bengaluru Nagarathpete fire
Big Bulletin

Video | ನಗರ್ತಪೇಟೆಯಲ್ಲಿ ಮತ್ತೊಂದು ಅಗ್ನಿ ಅವಘಡ – 4 ಅಂತಸ್ತಿನ ಕಟ್ಟಡಕ್ಕೆ ಬೆಂಕಿ

Public TV
By Public TV
1 hour ago
himachal pradesh cloudburst
Latest

ಹಿಮಾಚಲ ಪ್ರದೇಶದಲ್ಲಿ ಮಳೆ ಅವಾಂತರ – ಈವರೆಗೂ 260ಕ್ಕೂ ಅಧಿಕ ಮಂದಿ ಸಾವು

Public TV
By Public TV
2 hours ago
nitish kumar
Latest

ಉಪರಾಷ್ಟ್ರಪತಿ ಚುನಾವಣೆ- ಸಿ.ಪಿ.ರಾಧಾಕೃಷ್ಣನ್‌ಗೆ ಜೆಡಿಯು ಬೆಂಬಲ

Public TV
By Public TV
2 hours ago
Tumakuru Woman Suicide
Crime

Tumakuru | ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

Public TV
By Public TV
2 hours ago
Mobile Laptop
Latest

ಜಿಎಸ್‌ಟಿ ಸ್ಲ್ಯಾಬ್‌ನಲ್ಲಿ ಬದಲಾವಣೆ; ಕಾರು, ಮೊಬೈಲ್, ಕಂಪ್ಯೂಟರ್ – ಯಾವ್ಯಾವುದರ ಬೆಲೆ ಇಳಿಕೆ?

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?