ಬೆಂಗಳೂರು: ಜಿನೋಮಿಕ್ ಸೀಕ್ವೆನ್ಸ್ ಫಲಿತಾಂಶಕ್ಕೆ ಕನಿಷ್ಠ 7-8 ದಿನಗಳು ಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ಅವರು ತಿಳಿಸಿದರು.
ಕೋವಿಡ್ ಹೊಸ ತಳಿ ಓಮಿಕ್ರಾನ್ ಕುರಿತು ಮಾತನಾಡಿದ ಅವರು, ಈಗಾಗಲೇ ಜಿನೋಮಿಕ್ ಸೀಕ್ವೆನ್ಸ್ ಗೆ ಕಳಿಸಿದ್ದೇವೆ. ಡಿಸೆಂಬರ್ 1ರ ವೇಳೆಗೆ ನಮಗೆ ಹೊಸ ತಳಿಯ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ನಿನ್ನೆಯೂ ಕೂಡ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಓಮಿಕ್ರಾನ್ ಇರೋ ದೇಶದ ಪ್ರಜೆಗಳ ಪ್ರವೇಶಕ್ಕೆ ನಿರ್ಬಂಧ ಹೇರಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ: ಸಿಎಂ
Advertisement
Advertisement
ಕೋಲಾರ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಮುನಿರತ್ನ ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರು ಸುಧಾಕರ್ ಅವರ ನಿವಾಸಕ್ಕೆ ಇಂದು ಭೇಟಿ ನೀಡಿದರು. ಇವರೊಡನೆ ಚರ್ಚೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್ ಅವರು, ವರ್ತೂರು ಪ್ರಕಾಶ್ ಅವರನ್ನು ಕರೆದುಕೊಂಡು ಸಿಎಂ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ಕಟೀಲ್ ಅವರ ಜೊತೆಗೆ ಮಾತುಕತೆ ನಡೆಸುತ್ತೇವೆ. ಮುಂದಿನ ತೀರ್ಮಾನಗಳ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
Advertisement
ವಿಧಾನಸಭೆಗೆ ಕೋಲಾರ ಭಾಗದಲ್ಲಿ 16 ಕ್ಷೇತ್ರಗಳು ಬರುತ್ತವೆ. ಆದರೆ ಆ ಭಾಗದಲ್ಲಿ ಬಿಜೆಪಿ ಸ್ವಲ್ಪ ವೀಕ್ ಇದೆ. ಈಗ ಒಬ್ಬರೇ ಶಾಸಕರಿದ್ದಾರೆ. ಹೀಗಾಗಿ ಮುಂದಿನ ಚುನಾವಣೆ ಹೊತ್ತಿಗೆ 7-8 ಸ್ಥಾನಗಳನ್ನಾದರೂ ಬಿಜೆಪಿ ಗೆಲ್ಲಬೇಕು. ಹೀಗಾಗಿ ರಾಜ್ಯಾಧ್ಯಕ್ಷರು, ಸಿಎಂ ಹಾಗೂ ಹೈಕಮಾಂಡ್ ಜೊತೆ ಚರ್ಚೆ ಮಾಡ್ತೇವೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಖುಣ ತೀರಿಸಲು ಮುಂದಾದ್ರಾ ಸುಮಲತಾ?
Advertisement
ಇದೇ ವೇಳೆ ಮಾತನಾಡಿದ ವರ್ತೂರು ಪ್ರಕಾಶ್, ಪರಿಷತ್ ಅಭ್ಯರ್ಥಿ ಗೆಲ್ಲಿಸುವ ಕುರಿತು ಮಾತುಕತೆ ಮಾಡಿದ್ದೇವೆ. ನಮ್ಮ ಬೆಂಬಲಿಗರು ಅಭ್ಯರ್ಥಿಗೆ ಬೆಂಬಲ ನೀಡುವ ಬಗ್ಗೆ ಚರ್ಚೆ ಮಾಡಲಾಗಿದೆ. ಮಧ್ಯಾಹ್ನ ಬೊಮ್ಮಾಯಿ ಹಾಗೂ ಕಟೀಲ್ ಅವರನ್ನು ಭೇಟಿ ಮಾಡುತ್ತಿದ್ದೇವೆ. ಬಿಜೆಪಿ ಸೇರುವ ಬಗ್ಗೆ ಕೂಡ ಚರ್ಚೆ ಮಾಡುತ್ತೇನೆ. ಬಿಜೆಪಿ ನಾಯಕರ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇನೆ ಎಂದು ತಿಳಿಸಿದರು.
ಕೋಲಾರದಲ್ಲಿ ಕಾಂಗ್ರೆಸ್ ಭಿನ್ನಮತವನ್ನು ಬಿಜೆಪಿ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ನಿನ್ನೆಯಷ್ಟೇ ಕೋಲಾರದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರ ರೆಡ್ಡಿ ಬಿಜೆಪಿ ಸೇರ್ಪಡೆಗೊಂಡಿದ್ದು, ಈಗ ವರ್ತೂರು ಪ್ರಕಾಶ್ ಅವರ ಜೊತೆಗೂ ಸುಧಾಕರ್ ಹಾಗೂ ಮುನಿರತ್ನ ಮಾತುಕತೆ ನಡೆಸಿದ್ದಾರೆ. ಕೋಲಾರ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಹಾಗೂ ಸಚಿವ ಸುಧಾಕರ್ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.