ಚಿಕ್ಕಬಳ್ಳಾಪುರ: ಇಡೀ ವಿಶ್ವದಲ್ಲೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ರೆ ಕಾಂಗ್ರೆಸ್‌ನವರು ನಾವೇ ಚೀನಾದ (China) ವುಹಾನ್‌ಗೆ ಹೋಗಿ ಕೊರೊನಾ ವೈರಸ್ (Corona Virus) ಬಿಟ್ಟಂತೆ ಮಾತನಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ (K Sudhakar) ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ವಿಶ್ವದಲ್ಲೇ ಕೋವಿಡ್‌ನಿಂದ ಏನಾಗ್ತಿದೆ ಅಂತ ಜನಸಾಮಾನ್ಯರಿಗೆ ಗೊತ್ತಾಗುತ್ತಿದೆ. ಆದ್ರೆ ಕಾಂಗ್ರೆಸ್ (Congress) ನಾಯಕರಿಗೆ ಏಕೆ ಗೊತ್ತಾಗುತ್ತಿಲ್ಲ? ಯಾವುದೇ ಸರ್ಕಾರ ಇರಲಿ, ಜನರ ರಕ್ಷಣೆಗೆ ಅದ್ಯತೆ ನೀಡಬೇಕು. ಸಹಕಾರ ಕೊಡದಿದ್ರೂ ಪರವಾಗಿಲ್ಲ ಸುಮ್ಮನಾದರೂ ಇರಿ. ಆದರೆ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಭಾರತ್ ಬಯೋಟೆಕ್‌ನ ನಸೆಲ್ ಸ್ಪೈ (Incovacc) ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ನೆಜಲ್ ಸ್ಪೈ ವ್ಯಾಕ್ಸಿನೇಷನ್ ನಿಂದಾಗಿ ಮೂಗಿನ ಮೂಲಕ ಡ್ರಾಪ್ಸ್ ಹಾಕಿಕೊಳ್ಳಲು ಅವಕಾಶ ಆಗಲಿದೆ. ಇದು ಲಸಿಕೆ (Vaccine) ನೀಡುವ ವೇಗವನ್ನು ಹೆಚ್ಚಿಸುತ್ತದೆ. ಇದು ಕೂಡ ಬಹಳ ಪ್ರಭಾವಿತವಾಗಿ ಕೆಲಸ ಮಾಡಲಿದೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಸ್, ಸಿನಿಮಾ ಥಿಯೇಟರ್, ಪಬ್ ಬಾರ್‌ಗಳಲ್ಲೂ ಮಾಸ್ಕ್ ಅಗತ್ಯ – ರಾಜ್ಯ ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ನಲ್ಲಿ ಏನೇನಿದೆ?
ರಾಜ್ಯದಲ್ಲಿ ಕೋವಿಡ್ ಲಸಿಕೆಗಳಿಗೆ ಯಾವುದೇ ಕೊರತೆಯಿಲ್ಲ. ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ಸ್ಟಾಕ್ ಇದೆ. ಇನ್ನೂ ನಸೆಲ್ ಸ್ಪೈ ಕೋವ್ಯಾಕ್ಸಿನ್, ಕೋವಿಶೀಲ್ಡ್, ಕಾರ್ಬೆವ್ಯಾಕ್ಸ್‌ಗೆ ಕೇಂದ್ರಕ್ಕೆ ಮನವಿ ಮಾಡಲಿದ್ದೇನೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಪರೀಕ್ಷೆ ಹೆಚ್ಚಿಸಿ.. ಎಲ್ಲರೂ ಮಾಸ್ಕ್ ಧರಿಸಿ – ಮೋದಿ ಸಲಹೆ