ಬಾಗಲಕೋಟೆ: ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ಇದೆ ಎಂದು ಸುದ್ದಿಗಳನ್ನು ಪ್ರಕಟಿಸಿದ್ದಕ್ಕೆ ಮಾಧ್ಯಮಗಳ ವಿರುದ್ಧವೇ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹರಿಹಾಯ್ದಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನ ಇದೆ ಎನ್ನುವುದು ಮಾಧ್ಯಮಗಳ ಸೃಷ್ಟಿಯಾಗಿದೆ. ಸದನದಲ್ಲಿ ನಾವೆಲ್ಲರೂ ಒಟ್ಟಾಗಿಯೇ ಕುಳಿತುಕೊಳ್ಳುತ್ತೇವೆ. ಆ ರೀತಿಯ ಯಾವುದೇ ಅಸಮಾಧಾನ ನಮ್ಮಲ್ಲಿಲ್ಲ. ಯಾರೋ ಹೇಳಿದ ಹೇಳಿಕೆಯನ್ನು ದೊಡ್ಡ ವಿಷಯ ಮಾಡುತ್ತೀರಿ. ಒಬ್ಬರು ಹೇಳಿದ ಹೇಳಿಕೆಯನ್ನು 20 ಮಂದಿಗೆ ಹೋಲಿಸುತ್ತೀರಿ. ಮಾಧ್ಯಮದವರು ಮೊದಲು ಈ ರೀತಿ ಮಾಡುವುದನ್ನು ನಿಲ್ಲಿಸಬೇಕೆಂದರು.
Advertisement
ಇನ್ನು ರಂಭಾಪುರಿ ಶ್ರೀಗಳು ಯಡಿಯೂರಪ್ಪನವರ ಬಗ್ಗೆ ನುಡಿದಿದ್ದ ಭವಿಷ್ಯ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಸಿಎಂ ಅಗಬೇಕಿದ್ದರೆ ಎಂದೋ ಆಗುತ್ತಿದ್ದರು. ನಾನು ಜ್ಯೋತಿಷ್ಯವನ್ನು ನಂಬುವುದಿಲ್ಲ, ಈ ಬಗ್ಗೆ ನಾನು ಕಾಮೆಂಟ್ ಸಹ ಮಾಡುವುದಿಲ್ಲ. ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆ ಅಗುವುದಿಲ್ಲ ಎನ್ನುವುದಕ್ಕಾಗಿಯೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ ಎಂದರು.
Advertisement
ಜುಲೈ 5 ರಂದು ರಂಭಾಪುರಿ ಶ್ರೀಗಳು ತುಮಕೂರಿನ ನೊಣವಿನಕೆರೆಯಲ್ಲಿ ಮಾತನಾಡಿ, ಯಡಿಯೂರಪ್ಪ ಜಾತಕದಲ್ಲಿ ಅಕ್ಟೋಬರ್ 2ನೇ ವಾರದಲ್ಲಿ ಮಹಾಯೋಗ ಇದೆ. ಇದರ ಪ್ರಕಾರ ಯಡಿಯೂರಪ್ಪ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.