ಬೆಂಗಳೂರು: ಕೋವಿಡ್ ಉಪತಳಿ JN.1 (covid sub Variant JN1 ಭೀತಿ ಮತ್ತೆ ಹೆಚ್ಚಾಗುತ್ತಿದೆ. ಈ ನಡುವೆ ಹೊಸ ವರ್ಷ ಮತ್ತು ಕ್ರಿಸ್‌ಮಸ್ ಸಂಭ್ರಮಕ್ಕೆ ಸಿದ್ಧತೆ ಜೋರಾಗಿದ್ದು, ಈ ಬಾರಿಗೂ ಅದ್ಧೂರಿ ಸಂಭ್ರಮಕ್ಕೆ ಬ್ರೇಕ್ ಬೀಳುತ್ತಾ ಅನ್ನೋ ತಲೆನೋವು ಶುರುವಾಗಿದೆ.
ಹೊಸ ವರ್ಷ ಮತ್ತು ಕ್ರಿಸ್‌ಮಸ್ ಹಬ್ಬ ನೋಡಿಕೊಂಡು ಕೊರೊನಾ ಜಾಗೃತಿಗಾಗಿ ಹೊಸ ರೂಲ್ಸ್ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಮಂಗಳವಾರ (ಡಿ.19) ತಾಂತ್ರಿಕ ಸಲಹಾ ಸಮಿತಿ ಸಭೆ ಕೂಡ ಇದ್ದು. ಹೊಸ ಮಾರ್ಗಸೂಚಿಯ ವರದಿ ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಲಿದೆ. ಇದನ್ನೂ ಓದಿ: ಯೋಧರ ಮೇಲೆ ಹಲ್ಲೆಗೆ ಯತ್ನ – ಬಾಂಗ್ಲಾ ಮೂಲದ ಇಬ್ಬರು ಸ್ಮಗ್ಲರ್‌ಗಳು ಗುಂಡೇಟಿಗೆ ಬಲಿ
ಕೇರಳದಲ್ಲಿ ಕೊವಿಡ್-19 ಉಪತಳಿ ಜೆಎನ್.1 ಕಾಣಿಸಿಕೊಂಡಿದ್ದು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಹೈಅಲರ್ಟ್ ಆಗಿದ್ದು ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಯಾರಿ ಶುರು ಮಾಡಿದೆ. ಮಂಗಳವಾರ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಲಿದ್ದು, ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ದೇಶದಲ್ಲಿ ಆಕ್ಟೀವ್ ಕೇಸ್‌ಗಳ ಸಂಖ್ಯೆ 1,300 ಗಡಿ ದಾಟಿದೆ. ಒಂದು ಕಡೆ ಕೇರಳದಲ್ಲೂ ಪ್ರತಿನಿತ್ಯ 300ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗುತ್ತಿದೆ. ಹೀಗಾಗಿ ಪ್ರಾಥಮಿಕ ಹಂತದಲ್ಲಿಯೇ ಕೊರೊನಾ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಕೋಲಾರದಲ್ಲಿ ವಸತಿ ಶಾಲೆ ಕರ್ಮಕಾಂಡ – ನಾಲ್ವರ ವಿರುದ್ಧ FIR, ಪ್ರಾಂಶುಪಾಲೆ ಸೇರಿ ಇಬ್ಬರು ಅರೆಸ್ಟ್
ಟಫ್ ರೂಲ್ಸ್ ಏನೇನು ಮಾಡಬಹುದು?
* ಕ್ರಿಸ್‌ಮಸ್, ನ್ಯೂ ಇಯರ್ ವೇಳೆ ಗುಂಪುಗೂಡದಂತೆ ಎಚ್ಚರ
* ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸ್ ಬಳಕೆ
* ಆಸ್ಪತ್ರೆ ಒಳಗೆ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
* ಮಾಸ್ಕ್ ಧರಿಸಿಯೇ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಬೇಕು
* ಆಸ್ಪತ್ರೆಗಳಲ್ಲಿ, ಜನಸಂದಣಿ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು
* ಜ್ವರ, ಶೀತ, ಬೇರೆ ರೋಗದಿಂದ ಬಳಲುತ್ತಿರುವವರು ವೈದ್ಯರನ್ನ ಭೇಟಿಯಾಗಬೇಕು
* ಬೆಂಗಳೂರು ಸೇರಿದಂತೆ ಜಿಲ್ಲೆಗಳಲ್ಲಿ ಕೋವಿಡ್ ಟೆಸ್ಟ್ಗೆ ಟಾರ್ಗೆಟ್
* ಆಸ್ಪತ್ರೆಗಳಲ್ಲಿ ರೋಗ ಲಕ್ಷಣಗಳು ಇರೋ ರೋಗಿಗಳಿದ್ರೆ ಕೋವಿಡ್ ಟೆಸ್ಟ್ ಕಡ್ಡಾಯ
* ಸಾರ್ವಜನಿಕರಿಗೆ ಕಡ್ಡಾಯವಾಗಿ ಈಗಿನಿಂದಲೇ ಜಾಗೃತಿ ಮೂಡಿಸಬೇಕು
* ಐಎಲ್‌ಐ, ಸ್ಯಾರಿ ಕೇಸ್‌ಗಳಿದ್ರೆ ಕೂಡಲೇ ಕೋವಿಡ್ ಟೆಸ್ಟ್ ಮಾಡಬೇಕು
* ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಬೇಕು