– 17 ವರ್ಷಗಳಿಂದ ಸಕ್ರಿಯವಾಗಿದ್ದ ಜಾಲ
– ಆಂಧ್ರದ ಆಶಾ ಕಾರ್ಯಕರ್ತೆಯೇ ಇದರ ಕಿಂಗ್‌ಪಿನ್
ಬೆಂಗಳೂರು: ಹೆಣ್ಣನ್ನು ಅತಿ ಹೆಚ್ಚು ಗೌರವಿಸುವ ಪುಣ್ಯ ನಾಡು ನಮ್ಮದು ಅಂತಲೇ ಹೆಮ್ಮೆಯಿಂದ ಬೆನ್ನುತಟ್ಟಿಕೊಳ್ಳುತ್ತೇವೆ. ಶತಮಾನಗಳ ಇತಿಹಾಸ, ಪುರಾಣ ಕಥನ, ಮಿಥ್ಯೆಗಳಲ್ಲೂ ಸಹ ಇದನ್ನು ಗುರುತಿಸುತ್ತೇವೆ. ಹೆಣ್ಣು ಮಕ್ಕಳ ಶಿಕ್ಷಣ, ಪೌಷ್ಟಿಕತೆ, ಆರೋಗ್ಯ ಮತ್ತು ಜೀವನೋಪಾಯದ ಮಾರ್ಗಗಳನ್ನು ಹಸನುಗೊಳಿಸಲು ನೂರಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ʻಬೇಟಿ ಬಚಾವೋ ಬೇಟಿ ಪಢಾವೋʼ ಕೂಡ ಒಂದು. ಹೀಗಿದ್ದೂ ಹೆಣ್ಣುಮಕ್ಕಳ ಭ್ರೂಣ ಹತ್ಯೆ (Foeticide) ಮತ್ತೊಂದೆಡೆ ಅವ್ಯಾಹತವಾಗಿ ನಡೆಯುತ್ತಿದೆ. ಗಂಡು ಮಗುವಿನ ಮೇಲಿನ ಆದ್ಯತೆ, ಹೆಣ್ಣುಮಕ್ಕಳ ಕುರಿತಾದ ತಾರತಮ್ಯ, ಸಾಮಾಜಿಕ ಕಟ್ಟುಪಾಡು, ಶಿಕ್ಷಣದ ಕೊರತೆಯಂತಹ ಕಾರಣಗಳಿಂದ ತಾಯಿ ಗರ್ಭದಲ್ಲಿರುವ ಹೆಣ್ಣು ಭ್ರೂಣವನ್ನ ಅಕ್ರಮವಾಗಿ ಲಿಂಗ ಪರೀಕ್ಷೆ ನಡೆಸಿ ಕೊಲ್ಲಲಾಗುತ್ತಿದೆ.
ಕೆಲ ದಿನಗಳ ಹಿಂದಷ್ಟೇ ಮಂಡ್ಯದಲ್ಲಿ ಅಕ್ರಮವಾಗಿ ಭ್ರೂಣಹತ್ಯೆ ಮಾಡುತ್ತಿದ್ದ ಜಾಲವೊಂದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಹೊಸ ಅವತಾರದಲ್ಲಿ ಭ್ರೂಣ ಹತ್ಯೆ ವ್ಯವಸ್ಥಿತವಾಗಿ ನಡೆಯುತ್ತಿದ್ದದ್ದು ಕಂಡುಬಂದಿದೆ. ಕರ್ನಾಟಕದ ಕೆಲವು ಮಹಿಳೆಯರು (Karnataka Womens) ನೆರೆಯ ರಾಜ್ಯದಲ್ಲಿ ಭ್ರೂಣ ಹತ್ಯೆ ಮಾಡಿಸಿಕೊಳ್ಳುತ್ತಿದ್ದದ್ದು ಆರೋಗ್ಯ ಇಲಾಖೆ (Health Department) ಅಧಿಕಾರಿಗಳ ಕುಟುಕು ಕಾರ್ಯಾಚರಣೆ ವೇಳೆ ಬಟಾ ಬಯಲಾಗಿದೆ.
ಹೌದು. ಕರ್ನಾಟಕದ ಕೆಲ ತಾಯಂದಿರು ನೆರೆಯ ಆಂಧ್ರ ಪ್ರದೇಶದಲ್ಲಿ ಭ್ರೂಣ ಹತ್ಯೆ ಮಾಡಿಸಿಕೊಳ್ಳುತ್ತಿದ್ದ ಘೋರ ಕೃತ್ಯ ಆರೋಗ್ಯ ಇಲಾಖೆ ಕಾರ್ಯಚರಣೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಿಚ್ಛೇದಿತೆಗೆ ಮದುವೆ ಆಗೋದಾಗಿ ನಂಬಿಸಿ ವಂಚನೆ ಆರೋಪ – ಬೆಂಗಳೂರಿನ ಕ್ರಿಕೆಟ್ ಕೋಚ್ ವಿರುದ್ಧ ಎಫ್‌ಐಆರ್
ಏನಿದು ಘಟನೆ?
30 ವರ್ಷದ ಮಹಿಳೆಯೊಬ್ಬರು ಮಳವಳ್ಳಿಯಲ್ಲಿ ಬಂಡೂರು ಬಸವಗುಡಿ ದೇವಸ್ಥಾನವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಳೆ ಎಂಬುದು ಆಶಾ ಕಾರ್ಯಕರ್ತೆಯರ ಗಮನಕ್ಕೆ ಬಂದಿತ್ತು. ತಕ್ಷಣ ವೈದ್ಯಕೀಯ ಸಿಬ್ಬಂದಿ ಮೂಲಕ ಆಕೆಯ ವಿಚಾರಣೆ ನಡೆಸಲಾಯಿತು. ಬಳಿಕ ಏಜೆಂಟ್ ಮೂಲಕ ಆಕೆಯ ಭ್ರೂಣ ಲಿಂಗ ಪತ್ತೆ ಮಾಡಿದಾಗ ಹೆಣ್ಣು ಅಂತಾ ಗೊತ್ತಾಯಿತು. ಈಗಾಗಲೇ ಮೂರು ಹೆಣ್ಣು ಮಕ್ಕಳು ಹೊಂದಿದ್ದ ಕಾರಣ ಹೆಣ್ಣು ಮಗುವಿಗೆ ದಂಪತಿ ಕೂಡ ನಿರಾಕರಿಸಿದ್ದರಂತೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ಅಲರ್ಟ್ ಆಗಿದ್ದಾರೆ. ಆಂಧ್ರ ಪ್ರದೇಶದ ಆಯುಕ್ತರಿಗೆ ಮಾಹಿತಿಯನ್ನೂ ನೀಡಿದ್ದಾರೆ. ನಂತ್ರ ಸೆ.21ರಂದು ಜಂಟಿಯಾಗಿ ಕರ್ನೂಲ್‌ನಲ್ಲಿರುವ ಭಾಷಾ ನರ್ಸಿಂಗ್ ಹೋಂಗೆ ವಿಸಿಟ್ ಮಾಡಿ ಸ್ಟಿಂಗ್ ಆಪರೇಷನ್ ನಡೆಸಿ ಜಾಲವನ್ನು ಪತ್ತೆಹಚ್ಚಿದ್ದಾರೆ. ಈ ಆಸ್ಪತ್ರೆ ಬಳ್ಳಾರಿ, ರಾಯಚೂರು, ವಿಜಯನಗರ, ಗಡಿ ಭಾಗಕ್ಕೂ ಹತ್ತಿರವಿದೆ. ಕಾರ್ಯಾಚರಣೆ ಬಳಿಕ ಎಲ್ಲಾ ಪುರಾವೆಗಳನ್ನು ಆಂಧ್ರದ ನೋಡಲ್ ಅಧಿಕಾರಿಗೆ ರವಾನಿಸಿದ್ದಾರೆ. ಇದನ್ನೂ ಓದಿ: ಪ್ರೀತಿಗೆ ಮನೆಯವರ ವಿರೋಧ – ಪ್ರೇಮಿಗಳಿಬ್ಬರು ಆತ್ಮಹತ್ಯೆ ಯತ್ನ; ಯುವತಿ ಸಾವು, ಯುವಕ ಪಾರು
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಮಳವಳ್ಳಿಯ ಈ ದಂಪತಿಗೆ ಭ್ರೂಣ ಕೊಲ್ಲಲು 20 ಸಾವಿರ ರೂ.ಗೆ ಬೇಡಿಕೆ ಇಡಲಾಗಿತ್ತು. ಆದ್ರೆ ಇದಕ್ಕೆ ಒಪ್ಪದ ದಂಪತಿ ವಾಪಸ್ ಆಗಿದ್ರು. ಬಳಿಕ ವೈದ್ಯಕೀಯ ಸಿಬ್ಬಂದಿ ಜೊತೆ ಮಾತುಕತೆ ನಡೆಸುವಾಗ ಈ ಬಗ್ಗೆ ಬಾಯ್ಬಿಟ್ಟಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಆರೋಗ್ಯ ಇಲಾಖೆ ಈ ದಂಪತಿಗಳನ್ನೇ ಮುಂದಿಟ್ಟುಕೊಂಡು ಸ್ಟಿಂಗ್ ಆಪರೇಷನ್ ನಡೆಸಿತು. ಸದ್ಯ ಜಾಲವನ್ನು ಪತ್ತೆಹಚ್ಚಿದ ಆರೋಗ್ಯ ಇಲಾಖೆ ಆಂಧ್ರ ಪ್ರದೇಶದ ಭಾಷ ನರ್ಸಿಂಗ್ ಹೋಂಗೆ ಬೀಗ ಜಡಿದಿದೆ. ಇದನ್ನೂ ಓದಿ: ಮೋದಿ ರಾಷ್ಟ್ರಧ್ವಜ ಹಾರಿಸೋದನ್ನ ತಡೆಯಲು ಬಹುಮಾನ ಘೋಷಿಸಿದ್ದ ಪನ್ನುನ್ ವಿರುದ್ಧ ಕೇಸ್
ಕಾರ್ಯಾಚರಣೆ ಬಗ್ಗೆ ಡಾ. ವಿವೇಕ್ ಹೇಳಿದ್ದೇನು?
ಸ್ಟಿಂಗ್ ಆಪರೇಷನ್ ಬಳಿಕ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ವೈದ್ಯಕೀಯ ಕಾಯ್ದೆ ಉಪನಿರ್ದೇಶಕರಾದ ಡಾ. ವಿವೇಕ್ ದೊರೈ, ಆಂಧ್ರದ ಆಶಾ ಕಾರ್ಯಕರ್ತೆಯೇ ಇದ್ರ ಕಿಂಗ್‌ಪಿನ್. 17 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಭಾಷಾ ನರ್ಸಿಂಗ್ ಹೋಮ್ 50 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ನಾವು ರೇಡ್‌ಗೆ ಹೋದ ತಕ್ಷಣ ಡಾಕ್ಟರ್ ಸ್ಪಾಟ್‌ನಿಂದ ಓಡಿ ಹೋಗಿದ್ದಾನೆ ಎಂದು ತಿಳಿಸಿದ್ದಾರೆ.
ಅಲ್ಲದೇ ಅಲ್ಲಿನ ಅಲ್ಲಿನ ನೋಡಲ್ ಅಧಿಕಾರಿಗೆ, ಏಜೆಂಟ್‌ಗಳಿಗೆ ಹಣ ನೀಡಿದ್ದು, ಎಲ್ಲ ಸಾಕ್ಷ್ಯವನ್ನು ನಮ್ಮ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಹ್ಯಾಂಡೋವರ್ ಮಾಡ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 17 ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ – ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ FIR