ಬೇಸಿಗೆಯ ಬಿಸಿಗೆ ಬೇಸತ್ತ ದೇಹಕ್ಕೆ ಕೂಲ್ ಆಗಿ ಏನಾದರು ತಿನ್ನಬೇಕು/ಕುಡಿಬೇಕು ಅನಿಸೋದು ಕಾಮನ್. ಆದ್ರೆ ಕೂಲ್ ಕೂಲ್ ಎಂದು ಆರೋಗ್ಯಕ್ಕೆ ಶತ್ರು ಆಗುವ ಪದಾರ್ಥವನ್ನು ತಿನ್ನುವುದನ್ನು ಬಿಟ್ಟು, ದೇಹದ ಆರೋಗ್ಯ ವೃದ್ಧಿಸಲು ನೆರವಾಗುವ ಕಲ್ಲಂಗಡಿ ತಿಂದು ಹಾಯಾಗಿರಿ.
Advertisement
ಹೌದು, ಕಲ್ಲಂಗಡಿಯಲ್ಲಿ ವಿಟಮಿನ್ ಅಂಶ ಹೆಚ್ಚಿನ ಪ್ರಮಾಣದಲ್ಲಿದೆ. ವಿಟಮಿನ್ ಎ, ಬಿ6 ಮತ್ತು ಸಿ ಯನ್ನು ಒಳಗೊಂಡಿರುವ ಕಲ್ಲಂಗಡಿಯನ್ನು ಆರೋಗ್ಯಕ್ಕೆ ಆಪ್ತಮಿತ್ರ ಎಂದೇ ಹೇಳಬಹುದು. ಕಲ್ಲಂಗಡಿಯಲ್ಲಿರುವ ವಿಟಮಿನ್ ಸಿ ಅಂಶ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ ದೇಹಕ್ಕೆ ಚೈತನ್ಯವನ್ನು ನೀಡುತ್ತದೆ. ಇತರೇ ಹಣ್ಣು ತರಕಾರಿಗಳಿಗಿಂತ ಲೈಕೊಪಿನ್ ಹೆಚ್ಚಾಗಿರುವ ಕಲ್ಲಂಗಡಿ ಕೊಬ್ಬು ಮುಕ್ತ ನೈಸರ್ಗಿಕ ವರದಾನವಾಗಿದೆ. ಕೊಲೆಸ್ಟ್ರಾಲ್ ಅಂಶವಿಲ್ಲದೆ ದೇಹಕ್ಕೆ ಶಕ್ತಿಯನ್ನು ಒದಗಿಸುವ ಕಲ್ಲಂಗಡಿ ಬೇಸಿಗೆಯ ಬೇಗೆಯನ್ನು ಕಳೆಯುವಲ್ಲಿ ಸಹಕಾರಿಯಾಗುತ್ತದೆ. ಕಲ್ಲಂಗಡಿ ಬಾಯಾರಿಕೆಯನ್ನು ಮಾತ್ರ ತೀರಿಸದೆ ರೋಗಗಳ ವಿರುದ್ಧವೂ ಹೋರಾಡುವ ಗುಣವನ್ನು ಹೊಂದಿರುವ ಸಮೃದ್ಧ ಹಣ್ಣಾಗಿದೆ.
Advertisement
Advertisement
ಕಲ್ಲಂಗಡಿ ಹಣ್ಣಿನ ಲಾಭಗಳೇನು?
Advertisement
ತ್ವಚೆಯ ಆರೋಗ್ಯಕ್ಕೆ ಉತ್ತಮ:
ಕಲ್ಲಂಗಡಿ ಹಣ್ಣು ನೈಸರ್ಗಿಕವಾದ ಟೋನರ್ ರೀತಿ ಕೆಲಸ ಮಾಡುತ್ತದೆ. ಕಲ್ಲಂಗಡಿ ಹಣ್ಣನ್ನು ಕಟ್ ಮಾಡಿ ಮುಖಕ್ಕೆ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ, 20 ನಿಮಿಷದ ಬಳಿಕ ತೊಳೆದರೆ ತ್ವಚೆ ಬೆಳ್ಳಗಾಗುವುದು. ಇದರಲ್ಲಿ ವಿಟಮಿನ್ ಎ ಇರುವುದರಿಂದ ತ್ವಚೆಯಲ್ಲಿ ಅಧಿಕ ಎಣ್ಣೆಯಂಶ ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಅಲ್ಲದೆ ಇದನ್ನು ಮಿತವಾಗಿ ತಿನ್ನುವುದರಿಂದ ಮೊಡವೆಗಳು ಕಡಿಮೆ ಆಗುತ್ತದೆ. ನೀವು ಒಣ ತ್ವಚೆಯನ್ನು ಹೊಂದಿದ್ದರೆ ಈ ಸಮಸ್ಯೆಯನ್ನೂ ದೂರಮಾಡುತ್ತದೆ. ಇದರಲ್ಲಿರುವ ಅತ್ಯಧಿಕ ನೀರಿನ ಅಂಶ ಬಾಯಾರಿಕೆಯನ್ನು ದೂರಮಾಡಿ ನಮ್ಮನ್ನು ಹೈಡ್ರೇಟ್‍ನ್ನಾಗಿ ಮಾಡುತ್ತದೆ.
ತೂಕ ಕಮ್ಮಿ ಮಾಡುವ ಶಕ್ತಿಯಿದೆ:
ಇದರಲ್ಲಿ ನೀರಿನಂಶ ಅಧಿಕವಿರುವುದರಿಂದ ತೆಳ್ಳಗಾಗಲು ಡಯಟ್ ಮಾಡುವವರು ಒಂದು ಹೊತ್ತು ಕಲ್ಲಂಗಡಿ ಹಣ್ಣು ತಿನ್ನಿ. ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶ ದೊರೆಯುತ್ತದೆ, ತೂಕವನ್ನು ಕಡಿಮೆ ಮಾಡುವಲ್ಲಿ ಕಲ್ಲಂಗಡಿ ಹಣ್ಣು ಸಹಾಯ ಮಾಡುತ್ತದೆ.
ರಕ್ತ ಸಂಚಾರಕ್ಕೆ ಸಹಾಯ:
ಕಲ್ಲಂಗಡಿ ಹಣ್ಣು ತಿಂದರೆ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ಮಾಡಿ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗೆಯೇ ಬೇಸಿಗೆಯಲ್ಲಿ ತಿನ್ನಲೇಬೇಕಾದ ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು ಕೂಡ ಒಂದಾಗಿದ್ದು, ಇದು ದೇಹವನ್ನು ತಂಪಾಗಿ ಇಡುತ್ತದೆ. ಅಲ್ಲದೆ ಇದನ್ನು ಪ್ರತಿದಿನ ತಿಂದರೆ ಮಾನಸಿಕ ಒತ್ತಡ ಕಡಿಮೆಯಾಗಿ ಖಿನ್ನತೆ ಮಾಯವಾಗುವುದು.
ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಟ:
ಇತರೆ ಹಣ್ಣುಗಳಿಗಿಂತ ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೆನೆ ಅಧಿಕವಿದೆ. ಲೈಕೋಪೆನೆ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಸಾಮಥ್ರ್ಯವನ್ನು ಹೊಂದಿದೆ. ಆದ್ದರಿಂದ ಪ್ರತಿ ನಿತ್ಯ ಕಲ್ಲಂಗಡಿ ತಿನ್ನುವುದರಿಂದ ಕ್ಯಾನ್ಸರ್ ನಿಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ.
ಕಿಡ್ನಿಗೆ ಒಳ್ಳೆದು:
ಕಲ್ಲಂಗಡಿ ಹಣ್ಣನ್ನು ನಿತ್ಯವು ಸೇವಿಸುವುದರಿಂದ ದೇಹದ ಚೈತನ್ಯ ಹೆಚ್ಚಾಗುತ್ತೆ, ಹಾಗೆಯೇ ಸುಸ್ತು ಮಾಯವಾಗುತ್ತೆ. ಇದರಲ್ಲಿ ವಿಟಮಿನ್ ಬಿ6 ಇರುವುದರಿಂದ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೆ ಬೇಗನೆ ಉದ್ವೇಗಕ್ಕೆ ಒಳಗಾಗುವುದನ್ನು ತಡೆಯುತ್ತದೆ.
ಈ ಹಣ್ಣಿನಲ್ಲಿ ಸಿಟ್ರೊಲೈನ್(citrulline) ಇದ್ದು, ಇದು ದೇಹವನ್ನು ಸೇರಿದಾಗ ಅಮೈನೋ ಆ್ಯಸಿಡ್ ಆಗಿ ಪರಿವರ್ತನೆಯಾಗುತ್ತದೆ. ಅಮೈನೋ ಆ್ಯಸಿಡ್ ಕಿಡ್ನಿಯಲ್ಲಿ ಕಲ್ಲು ಉಂಟಾಗದಂತೆ ಕಾಪಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಅಂಶ ಅಧಿಕವಿದೆ. ಬೇಸಿಗೆಯಲ್ಲಿ ದಿನಾ ಒಂದು ತುಂಡು ಕಲ್ಲಂಗಡಿ ಹಣ್ಣು ತಿನ್ನುವವರಿಗೆ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ. ತ್ವಚೆ ರಕ್ಷಣೆಯನ್ನು ಮಾಡುತ್ತದೆ. ಮೈಮೇಲೆ ಗಾಯಗಳಾಗಿದ್ದರೆ ಅದು ಬೇಗನೆ ಒಣಗಲು ಕಲ್ಲಂಗಡಿ ಸಹಾಯ ಮಾಡುತ್ತದೆ.
ಹೃದಯಕ್ಕೆ ಉತ್ತಮ, ಅಸ್ತಮಾ ಕಡಿಮೆ ಮಾಡುತ್ತದೆ:
ಕೊಲೆಸ್ಟ್ರಾಲ್ ಹೆಚ್ಚಾದರೆ ಹೃದಯಾಘಾತ ಉಂಟಾಗುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿರುವ antioxidants ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಕಲ್ಲಂಗಡಿಯಲ್ಲಿ ಪ್ರತ್ಯಾಮ್ಲಗಳು ಅಧಿಕವಿರುತ್ತದೆ. ಇದು ದೇಹಕ್ಕೆ ಹಾನಿಯನ್ನುಂಟು ಮಾಡುವ ಬೇಡದ ರಾಸಾಯನಿಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹಾಗೆಯೇ ಕಲ್ಲಂಗಡಿ 6% ಸಕ್ಕರೆ ಮತ್ತು 92% ನೀರನ್ನು ಒಳಗೊಂಡಿರುವ ನ್ಯೂಟ್ರೀಷಿಯನ್ ಭರಿತ ಹಣ್ಣಾಗಿದೆ. ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್‍ಗಿಂತ ಮುಂಚೆ ಹೋಮಿಯೋಪತಿ ಚಿಕಿತ್ಸೆಯಂತೆ ಕಲ್ಲಂಗಡಿಯನ್ನು ನೀಡಲಾಗುತ್ತದೆ. ಇದರಲ್ಲಿರುವ antioxidants ಅಸ್ತಮಾ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ, ಫ್ಲೇವೋನೈಡ್ಸ್ ಅಂದರೆ ಲೈಕೋಪೆನ್, ಬೀಟಾ ಕ್ಯಾರೋಟಿನ್, ಲ್ಯೂಟಿನ್ ಮುಂತಾದ ಅಂಶಗಳಿವೆ.
ಒಟ್ಟಿನಲ್ಲಿ ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಕೆಮಿಕಲ್ ಮಿಶ್ರಿತ ಪಾನೀಯ ಅಥವಾ ಪದಾರ್ಥಗಳನ್ನು ಸೇವಿಸುವುದಕ್ಕಿಂತ ಆರೋಗ್ಯಕ್ಕೆ ಸ್ನೇಹಿಯಾಗಿರುವ ಕಲ್ಲಂಗಡಿ ತಿಂದು ಆರಾಮಾಗಿರಿ.