ಪುದೀನ ಎಂದ ತಕ್ಷಣ ನೆನಪಾಗೋದು ಅದರ ಸುವಾಸನೆ, ರುಚಿ. ವಿಶೇಷ ಬಗೆಯ ಅಡುಗೆ, ಜ್ಯೂಸ್ ಹಾಗೂ ಸಲಾಡ್‍ಗಳಲ್ಲಿ ಪುದೀನ ಬಳಸಿದರೆ ಅದ್ಭುತ ಸುವಾಸನೆ ಹಾಗೂ ರುಚಿ ಇರುತ್ತದೆ. ಬರಿ ರುಚಿಗೆಷ್ಟೇ ಪುದೀನ ಸೊಪ್ಪು ಸೀಮಿತವಾಗಿಲ್ಲ, ಇದು ಸಾಕಷ್ಟು ಪೋಷಕಾಂಶಗಳೊಂದಿಗೆ ಆರೋಗ್ಯಕರ ಗುಣವನ್ನು ಒಳಗೊಂಡಿದೆ. ಇದನ್ನು ಆಯುರ್ವೇದ ಔಷಧ ಪದ್ಧತಿಯಲ್ಲಿ ಹಾಗೂ ಮನೆ ಮದ್ದಿನ ರೂಪದಲ್ಲಿ ಬಳಸಲಾಗುತ್ತದೆ. ತನ್ನ ಅದ್ಭುತ ಶಕ್ತಿಯಿಂದಲೇ ಆಯುರ್ವೇದದಲ್ಲಿ ಪುದೀನ ಸೊಪ್ಪು ವಿಶೇಷ ಸ್ಥಾನವನ್ನು ಗಳಿಸಿದೆ.
ದಿವ್ಯ ಔಷಧಿ ಎನಿಸಿಕೊಂಡಿರುವ ಈ ಸೊಪ್ಪು ಮೆಲಿಸ್ಸಾ ಅಫಿಷಿನಾಲಿಸ್ ಕುಟುಂಬಕ್ಕೆ ಸೇರಿದ ದೀರ್ಘಕಾಲಿಕ ಸಸ್ಯವಾಗಿದೆ. ಇದನ್ನು ಸಾಮಾನ್ಯವಾಗಿ ಪುದೀನ, ಲೆಮನ್ ಬಾಮ್, ಬಾಮ್ ಮಿಂಟ್ ಮತ್ತು ಸ್ವೀಟ್ ಬಾಮ್ ಎಂದು ಕರೆಯಲಾಗುತ್ತದೆ. ಪುದೀನ ಸಸ್ಯದ ಎಲೆಗಳು ಮತ್ತು ಕಾಂಡಗಳು ಉತ್ಕರ್ಷಣ ನಿರೋಧಕ ಚಟುವಟಿಕೆಯಿಂದ ಕೂಡಿವೆ. ಇವು ಫೆನೊಲಿಕ್ ಗುಣ, ಸೈಟೋಟಾಕ್ಸಿಕ್ ಗುಣವನ್ನು ಒಳಗೊಂಡಿದೆ.
Advertisement
Advertisement
ಮಧ್ಯ ವಯಸ್ಸಿನಲ್ಲಿ ಕಾಡುವ ನಿದ್ರಾ ಹೀನತೆ, ಗಾಯಗಳನ್ನು ಗುಣಪಡಿಸುವ ಔಷಧಗಳಲ್ಲಿ, ನೋವಿನ ಎಣ್ಣೆ ತಯಾರಿಸಲು, ಮಾತ್ರೆಗಳ ತಯಾರಿಕೆ, ಚಹಾ ಸೇರಿದಂತೆ ಇನ್ನಿತರ ಔಷಧೀಯ ಉತ್ಪನ್ನಗಳಲ್ಲಿ ಪುದೀನ ಬಳಸಲಾಗುತ್ತದೆ. ನೋಡಲು ಚಿಕ್ಕ ಗಾತ್ರದಲ್ಲಿರುವ ಈ ಪುದೀನ ಸೊಪ್ಪಿನಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ? ಪುದೀನ ಸೊಪ್ಪಿನ ಲಾಭಗಳೇನು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
Advertisement
ಪುದೀನ ಎಲೆಗಳ ಲಾಭವೇನು?
Advertisement
ಶೀತ ಕಡಿಮೆ ಮಾಡುತ್ತೆ:
ಶೀತದಿಂದ ಉಂಟಾಗುವ ಅನಾರೋಗ್ಯಗಳನ್ನು ಕಡಿಮೆ ಮಾಡುತ್ತದೆ. ಪುದೀನ ಎಲೆಗಳಲ್ಲಿ ಆಂಟಿವೈರಲ್ ಗುಣಲಕ್ಷಣಗಳು ಹರ್ಪಸ್ ವೈರಸ್ ಟೈಪ್1 ಅನ್ನು ದೇಹದ ಆರೋಗ್ಯಕರ ಕೋಶಗಳನ್ನಾಗಿ ಪರಿವರ್ತನೆ ಮಾಡುತ್ತವೆ. ಜೊತೆಗೆ ದೇಹದ ಆರೋಗ್ಯ ಸ್ಥಿತಿಯನ್ನು ಉತ್ತಮ ರೀತಿಯಲ್ಲಿ ಇರುವಂತೆ ಪೋಷಿಸುತ್ತದೆ. ಪುದೀನ ಎಲೆಗಳನ್ನು ಅರೆದು ಅದರ ರಸವನ್ನು ತೈಲಗಳ ರೂಪದಲ್ಲಿ ಬಳಸುವುದರಿಂದ ಶೀತದಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಪರಿಣಾಮಕಾರಿ ಗುಣಪಡಿಸುವುದು.
ಉರಿಯೂತ, ನೋವನ್ನು ನಿವಾರಿಸುತ್ತೆ:
ಪುದೀನ ಎಲೆಗಳು ಉರಿಯೂತದ ಲಕ್ಷಣಗಳನ್ನು ಹಾಗೂ ನೋವಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತದೆ. ಪುದೀನ ಎಲೆಯಲ್ಲಿ ರೋಸ್ಮರಿಕ್ ಆಸಿಡ್ ಮತ್ತು ಆಂಟಿಸ್ಪಸ್ಮೋಡಿಕ್ ಸಾರ ಇರುತ್ತದೆ. ಈ ಅಂಶ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುವಲ್ಲಿ ಸಹಕಾರಿ. ನೋವಿಗೆ ತಣ್ಣಗಾಗಿಸಿ ಆರಾಮ ಒದಗಿಸುತ್ತದೆ. ಹಾಗಾಗಿ ಇಂತಹ ಸಮಸ್ಯೆಗಳು ಬಂದಾಗ ಪುದೀನ ಎಲೆಯ ಮೊರೆ ಹೋದರೆ ನೋವನ್ನು ಬಹುಬೇಗ ನಿವಾರಿಸಿಕೊಳ್ಳಬಹುದು.
ಜೀರ್ಣಕ್ರಿಯೆಗೆ ಒಳ್ಳೆದು:
ಜೀರ್ಣಕ್ರಿಯೆಗೆ ಪುದೀನ ಸೇವನೆ ಒಳ್ಳೆದು. ಅಲ್ಲದೆ ಇದು ರೋಗಗಳನ್ನು ನಿಯಂತ್ರಿಸುತ್ತದೆ. ಪುದೀನ ಎಲೆ ಹೊಟ್ಟೆಯೊಳಗೆ ಅನಿಲ ಮತ್ತು ಉಬ್ಬುವಿಕೆಯನ್ನು ನಿವಾರಿಸುತ್ತದೆ. ಪುದೀನ ಎಲೆ ಹೊಂದಿರುವ ಪಾನಕವನ್ನು ಕುಡಿದವರಿಗೆ ರೋಗಗಳ ಸಮಸ್ಯೆ ತೀವ್ರವಾಗಿ ಕಡಿಮೆಯಾಗಿವೆ ಎಂದು ಸಂಶೊದನೆಯಿಂದ ತಿಳಿದು ಬಂದಿದೆ.
ತ್ವಚೆಯ ಆರೋಗ್ಯ ಕಾಪಾಡುತ್ತೆ:
ವಿಟಮಿನ್ ಇ ಮತ್ತು ವಿಟಮಿನ್ ಡಿ ಅಂಶವನ್ನು ಪುದೀನ ಎಲೆಗಳು ಹೊಂದಿದ್ದು, ಇದು ತ್ವಚೆಯಿಂದ ಡೆಡ್ ಸ್ಕಿನ್ ಸೆಲ್ಸ್ ದೂರಮಾಡಲು ಸಹಕಾರಿಯಾಗಿದೆ. ಪುದೀನದಲ್ಲಿ ಸ್ಯಾಲಿಸಿಲಿಕ್ ಆಸಿಡ್ ಅಂಶವಿದ್ದು, ಇದನ್ನು ಸೇವಿಸುವುದರಿಂದ ಇದು ಚರ್ಮದ ಮೇಲೆ ಫಂಗಲ್ ಇನ್ಫೆಕ್ಷನ್ ಆಗುವುದನ್ನು ತಡೆಯುತ್ತದೆ. ಅಷ್ಟೇ ಅಲ್ಲದೆ ಮೊಡವೆಗಳ ನಿವಾರಣೆಗೂ ಪುದೀನ ಒಂದೊಳ್ಳೆ ಔಷಧಿಯಾಗಿದೆ.
ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತೆ:
ಪುದೀನದಲ್ಲಿ ವಿಟಮಿನ್ ಎ ಗುಣ ಅಡಕವಾಗಿದೆ. ಇದು ಕಣ್ಣುಗಳ ಆರೋಗ್ಯಕ್ಕೆ ಒಳ್ಳೆದು. ಕಣ್ಣುಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಇದು ಸಹಕಾರಿ. ದೇಹದಲ್ಲಿ ವಿಟಮಿನ್ ಎ ಕೊರತೆ ಇದ್ದರೆ ಇರುಳು ಕುರುಡುತನ ಸೇರಿದಂತೆ ಇತರೆ ಕಣ್ಣಿನ ಸಮಸ್ಯೆಗಳು ಬರುತ್ತದೆ. ಆದ್ದರಿಂದ ಪ್ರತಿನಿತ್ಯ ಆಹಾರದಲ್ಲಿ ಮಿತವಾಗಿ ಪುದೀನ ಸೇವನೆ ಮಾಡುವುದರಿಂದ ವಿಟಮಿನ್ ಎ ಅಂಶ ದೇಹ ಸೇರಿ, ಆರೋಗ್ಯ ವೃದ್ಧಿಸುತ್ತದೆ.
ತೂಕ ಇಳಿಸುತ್ತದೆ:
ತೂಕ ಇಳಿಸಲು ಸಾಕಷ್ಟು ಮಂದಿ ಎನೇನೋ ಕಸರತ್ತು ಮಾಡುತ್ತಾರೆ. ಕೆಲವೊಮ್ಮೆ ಯಾವುದು ಪ್ರಯೋಜನಕ್ಕೆ ಬರುವುದಿಲ್ಲ. ಆದರೆ ಸಿಂಪಲ್ ಆಗಿ ಪುದೀನ ಸೇವನೆ ಮಾಡುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು. ಪುದೀನದಲ್ಲಿರುವ ಔಷಧೀಯ ಗುಣ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಜೊತೆಗೆ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕರಗಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶ ದೇಹದ ಇಮ್ಯೂನಿಟಿ ಹೆಚ್ಚಿಸಿ, ತೂಕ ಇಳಿಸಲು ಸಹಾಯ ಮಾಡುತ್ತದೆ.
ನೋಡಲು ಪುಟ್ಟ ಎಲೆಯಾದರೂ ಎಷ್ಟೆಲ್ಲಾ ಆರೋಗ್ಯಕರ ಗುಣಗಳನ್ನು ಇದು ಹೊಂದಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದ್ದು ಎನ್ನುವಂತೆ ನೋಡಲು ಗ್ರಾತ ಚಿಕ್ಕದಿದ್ದರೂ ದಿವ್ಯ ಔಷಧೀಯ ಗುಣಗಳನ್ನು ಪುದೀನ ಸೊಪ್ಪು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಹೀಗಾಗಿ ನಿಮ್ಮ ಆಹಾರದಲ್ಲೂ ಪುದೀನ ಸೇವಿಸಿ, ಉತ್ತಮ ಆರೋಗ್ಯ ಪಡೆಯಿರಿ.