ಹೊಸ ಯುಗದ ಗಡಿಬಿಡಿ, ಅನಿಯಮಿತ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಹೆಚ್ಚಿನ ಜನರು ಸ್ಥೂಲಕಾಯತೆಗೆ (ಅತೀ ಹೆಚ್ಚು ಕೊಬ್ಬಿನಾಂಶ) ಬಲಿಯಾಗುತ್ತಿದ್ದಾರೆ. ಅದನ್ನು ಕಡಿಮೆ ಮಾಡಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ನಿಮ್ಮ ಆಹಾರ ಕ್ರಮ ಸರಿಯಿಲ್ಲದಿದ್ದರೆ ನೀವು ಎಷ್ಟೇ ಪ್ರಯತ್ನಿಸಿದರೂ ಬೊಜ್ಜು ಕಡಿಮೆಯಾಗುವುದಿಲ್ಲ. ಹೀಗಾಗಿ ಮಖಾನಾವನ್ನು (Makhana) ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಬೊಜ್ಜು ಹೋಗಲಾಡಿಸಬಹುದು.
Advertisement
ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ ಫೈಬರ್, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಅನೇಕ ಪೋಷಕಾಂಶಗಳು ಮಖಾನಾದಲ್ಲಿ ಕಂಡುಬರುತ್ತವೆ. ಇದು ಜೀರ್ಣಕ್ರಿಯೆ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಆಯುರ್ವೇದದ ಪ್ರಕಾರ, ಇದು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದ್ದು ಅದು ನಿಮ್ಮ ತ್ವಚೆಯನ್ನು ಉತ್ತಮವಾಗಿ ನೋಡಿಕೊಳ್ಳುತ್ತದೆ. ನೀವು ಇದನ್ನು ಬೆಳಗ್ಗೆ ಸೇವಿಸಿದರೆ ಪ್ರಯೋಜನಗಳು ಹಲವಾರು ಪಟ್ಟು ಹೆಚ್ಚಾಗುತ್ತದೆ. ಇದನ್ನೂ ಓದಿ: 50ರ ಹರೆಯದಲ್ಲೂ ಹೀರೋಯಿನ್‌ನಂತೆ ಫಿಟ್ ಆಗಿರಲು ಈ 5 ಆಹಾರವನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ
Advertisement
Advertisement
ಹೇರಳವಾಗಿದೆ ಪೋಷಕಾಂಶ: ಒಂದು ಕಪ್ ಮಖಾನಾದಲ್ಲಿ 5 ಗ್ರಾಂ ಪ್ರೋಟೀನ್, 20 ಗ್ರಾಂ ಕಾರ್ಬೋಹೈಡ್ರೇಟ್, 33 ಮೈಕ್ರೋಗ್ರಾಂ ಫೋಲಿಕ್ ಆಮ್ಲ, 1.2 ಮಿಗ್ರಾಂ ಕಬ್ಬಿಣಾಂಶ, ಕ್ಯಾಲ್ಸಿಯಂ 52 ಮಿಗ್ರಾಂ, ಪೊಟ್ಯಾಸಿಯಮ್ 430 ಮಿಗ್ರಾಂ, ರಂಜಕ 198 ಮಿಗ್ರಾಂ, ಒಮೆಗಾ-3 ಕೊಬ್ಬಿನಾಮ್ಲಗಳು 32 ಮಿಗ್ರಾಂ ಮತ್ತು 340 ಮಿಗ್ರಾಂ ಒಮೆಗಾ ಇರುತ್ತದೆ. ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ಕಡಿಮೆ ಕ್ಯಾಲೋರಿಗಳೊಂದಿಗೆ ಸಾಕಷ್ಟು ಫೈಬರ್ ಅನ್ನು ಪಡೆಯುತ್ತೀರಿ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಪ್ರತಿದಿನ ಬೆಳಗ್ಗೆ ಒಂದು ಹಿಡಿ ಮಖಾನವನ್ನು ತಿನ್ನಿರಿ.
Advertisement
ಪ್ರಯೋಜನಗಳೇನು?
* ಮಖಾನ ಒಣ ಹಣ್ಣಾಗಿದ್ದು ದೈಹಿಕ ದೌರ್ಬಲ್ಯವನ್ನು ಹೋಗಲಾಡಿಸಲು ಅತ್ಯುತ್ತಮ ಪರಿಹಾರವಾಗಿದೆ. ಇದು ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೇ ಗರ್ಭಧಾರಣೆಯ ಸಮಸ್ಯೆ ಇರುವವರಿಗೆ ಸಹಾಯ ಮಾಡುತ್ತದೆ.
* ಪೌಷ್ಟಿಕಾಂಶ ಸಮೃದ್ಧವಾಗಿರುವ ಇದು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ. ಇದರ ನಿರಂತರ ಸೇವನೆಯು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
* ಮಖಾನದಲ್ಲಿ ಆ್ಯಂಟಿ ಆಕ್ಸಿಡೆಂಟ್ ಹೇರಳವಾಗಿರುವುದರಿಂದ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕೈದು ಮಖಾನ ತಿಂದರೆ ಮುಖದ ಮೇಲಿನ ವಯಸ್ಸಿನ ಗುರುತುಗಳು ಕಡಿಮೆಯಾಗಿ ತ್ವಚೆಯು ಯೌವನ ಪಡೆಯುತ್ತದೆ.
* ಮಖಾನ ಮೂತ್ರಪಿಂಡಕ್ಕೆ ತುಂಬಾ ಒಳ್ಳೆಯದು. ಇದು ಕನಿಷ್ಠ ಕ್ಯಾಲೋರಿಗಳನ್ನು ಹೊಂದಿದೆ. ಆದ್ದರಿಂದ ಮೂಳೆಗಳನ್ನು ಬಲಪಡಿಸಲು ಇದನ್ನು ಉತ್ತಮ ಆಹಾರವೆಂದು ಪರಿಗಣಿಸಲಾಗುತ್ತದೆ.
ಹೇಗೆ ಸೇವಿಸಬೇಕು?: ಪೌಷ್ಟಿಕ ಅಂಶಗಳಿಂದ ತುಂಬಿರುವ ಒಣ ಹಣ್ಣು ಮಖಾನಾವನ್ನು ದೇಸಿ ತುಪ್ಪದಲ್ಲಿ ಹುರಿದು ಉಪ್ಪು, ಕರಿಮೆಣಸು ಸೇರಿಸಿ ತಿಂಡಿಯಾಗಿ ತಿನ್ನಬಹುದು. ಇಲ್ಲವೆಂದಲ್ಲಿ ಹಾಲು ಇಷ್ಟವಾದರೆ ಹಾಲಿನಲ್ಲಿ ಕುದಿಸಿ ಕುಡಿಯಬಹುದು.