ಇಂದು ನಾವು ಸೇವಿಸುವ ಆಹಾರ, ಆರೋಗ್ಯಕ್ಕೆ ಒಳ್ಳೆಯದಾ ಎನ್ನುವುದನ್ನು ನಾವು ಹೆಚ್ಚಿನವರು ಗಮನಿಸುವಿದಿಲ್ಲ. ನಾಲಿಗೆಗೆ ರುಚಿ ನೀಡುತ್ತಿದ್ದರೆ ನಮಗೆ ಅಷ್ಟೆ ಸಾಕು ಎನ್ನವ ಮನೋಭಾವನೆ ಹೆಚ್ಚಿನವರಿಗೆ ಇರುತ್ತದೆ. ನಮ್ಮ ಆಹಾರ ಪದ್ಧತಿಯಲ್ಲಿ ಕೇವಲ ಸೊಪ್ಪು-ತರಕಾರಿಗಳು, ಹಣ್ಣು-ಹಂಪಲು ಇಷ್ಟಿದ್ದರೆ ಸಾಲದು. ಆಗಾಗ ಡ್ರೈ ಫ್ರೂಟ್ಸ್‌ಗಳನ್ನು ಕೂಡ ಮಿತವಾಗಿ ಸೇವನೆ ಮಾಡಬೇಕು. ಆರೋಗ್ಯಕರವಾದ ಅಂಶವನ್ನು ಒಳಗೊಂಡಿರುವ ಒಣ ಖರ್ಜೂರಗಳನ್ನು ದಿನಕ್ಕೆ ಒಂದೆರೆಡು ಬಾರಿಯಾದರೂ ಸೇವಿಸಲು ಮರೆಯದಿರಿ.
Advertisement
* ಖರ್ಜೂರಗಳಲ್ಲಿ ನಾರಿನ ಅಂಶದ ಪ್ರಮಾಣ ಯಥೇಚ್ಛವಾಗಿ ಕಂಡುಬರುತ್ತದೆ. ಜೀರ್ಣಕ್ರೀಯೆಗೆ ಸಹಾಯಕಾರಿಯಾಗಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗೆ ಇಲ್ಲಿದೆ ಸರಳ ಉಪಾಯ
Advertisement
* ವಿಟಮಿನ್ ಅಂಶಗಳು, ಖನಿಜಾಂಶಗಳು, ಕಬ್ಬಿಣದ ಅಂಶ, ಪೊಟ್ಯಾಶಿಯಂ ಅಂಶ, ಮೆಗ್ನೀಷಿಯಂ ಅಂಶ ಮತ್ತು ಕ್ಯಾಲ್ಸಿಯಂ ಅಂಶದ ಪ್ರಮಾಣ ಕೂಡ ಇದರಲ್ಲಿ ತುಂಬಾ ಹೇರಳವಾಗಿ ಕಂಡು ಬರುತ್ತದೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ
Advertisement
Advertisement
* ಮೂಳೆಗಳು, ಹಲ್ಲುಗಳ ಆರೋಗ್ಯ ಹೆಚ್ಚು ಸದೃಢತೆಯಾಗಿರಲು ಬೇಕಾಗಿರುವ ಕ್ಯಾಲ್ಸಿಯಂ ಅಂಶವನ್ನು ಖರ್ಜೂರ ಒಳಗೊಂಡಿದೆ.
* ಮಕ್ಕಳ ಬೆಳವಣಿಗೆಯ ಹಂತದಲ್ಲಿ ದೇಹದ ಮೂಳೆಗಳ ಅಭಿವೃದ್ಧಿಯಲ್ಲಿ ಇದರ ಪಾತ್ರ ಬಹಳ ದೊಡ್ಡದಾಗಿರುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು
* ಒಣ ಖರ್ಜೂರಗಳಲ್ಲಿ ಕೊಬ್ಬಿನ ಅಂಶ ತುಂಬಾನೇ ಕಡಿಮೆ ಇರುವುದರಿಂದ, ದೇಹದ ರಕ್ತದಲ್ಲಿ ಕಂಡುಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾದಂತೆ ನೋಡಿಕೊಂಡು, ಹೃದಯ ಆರೋಗ್ಯ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
* ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಷಿಯಂ ಅಂಶ ಇರುವ ಕಾರಣದಿಂದ, ದೇಹದ ರಕ್ತಸಂಚಾರದಲ್ಲಿ ಏರು ಪೇರಾಗದಂತೆ ನೋಡಿಕೊಂಡು, ರಕ್ತದೊತ್ತಡ ನಿಯಂತ್ರಣದಲ್ಲಿ ಇರಿಸುತ್ತದೆ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು