ಕೆಲವರಿಗೆ ಟೀ ಎಷ್ಟು ರೂಢಿ ಆಗಿರುತ್ತೆ ಎಂದರೆ ಪ್ರತಿನಿತ್ಯ ಒಂದು ಕಪ್ ಟೀ ಕುಡಿದಿಲ್ಲ ಎಂದರೆ ಮೂಡ್ ಸರಿಯಿಲ್ಲದ ಅನುಭವ ಆಗುತ್ತದೆ, ಮತ್ತೇ ಕೆಲವರಿಗೆ ತಲೆ ನೋವಿನಂತಹ ಸಮಸ್ಯೆ ಎದುರಾಗುತ್ತದೆ. ಆದರೆ ಪ್ರತಿನಿತ್ಯ ಟೀ ಕುಡಿಯುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದರಿಂದಾಗಿ ಚೀನಾ, ಜಪಾನ್‍ನಂತಹ ದೇಶಗಳಲ್ಲಿ ಗ್ರೀನ್ ಟೀ ಹಾಗೂ ಬ್ಲ್ಯಾಕ್ ಟೀಗಳನ್ನು ಜನರು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುತ್ತಾರೆ. ಹೀಗಾಗಿ ಇಲ್ಲಿ ಪ್ರತಿನಿತ್ಯ ಚಹಾವನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ತಿಳಿಯೋಣ.
Advertisement
ತೂಕ ಇಳಿಕೆ: ಟೀಯನ್ನು ಪ್ರತಿನಿತ್ಯ ಕುಡಿಯುವುದರಿಂದ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಚಹಾದಲ್ಲಿರುವ ಫ್ಲೇವನಾಯ್ಡ್‌ಗಳು ಚಯಾಪಚಯವನ್ನು ಹೆಚ್ಚಿಸುವುದಿಲ್ಲ. ಜೊತೆಗೆ ಕೊಬ್ಬನ್ನು ಇಳಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಬೇಕೆಂದು ಯೋಚಿಸುವವರಿಗೆ ತಜ್ಞರು ಪ್ರತಿನಿತ್ಯ ಟೀ ಕುಡಿಯಲು ಸಲಹೆ ನೀಡುತ್ತಾರೆ.
Advertisement
ಕ್ಯಾನ್ಸರ್ ವಿರುದ್ಧ ಹೋರಾಟ: ಬ್ಲ್ಯಾಕ್ ಮತ್ತು ಗ್ರೀನ್ ಟೀಯಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿನಿತ್ಯ ಟೀ ಸೇವಿಸುವುದರಿಂದ ಕ್ಯಾನ್ಸರ್‌ನಂತಹ ಮಾರಕ ರೋಗಗಳ ಅಪಾಯವನ್ನು ತಡೆಗಟ್ಟುತ್ತದೆ.
Advertisement
Advertisement
ಮಾನಸಿಕ ಆರೋಗ್ಯ ಸುಧಾರಣೆ: ಆಧುನಿಕ ಜೀವನ ಶೈಲಿಯಿಂದಾಗಿ ಇಂದು ಪ್ರತಿಯೊಬ್ಬರು ಒಂದೆಲ್ಲ ಒಂದು ಒತ್ತಡವನ್ನು ಹೊಂದಿರುತ್ತಾರೆ. ಇಂತಹ ಸಂದರ್ಭದಲ್ಲಿ ಟೀ ಕುಡಿಯುವುದರಿಂದ ಮಾನಸಿಕವಾಗಿ ಸಂತೋಷವಾಗಿರಲು ಸಹಾಯ ಮಾಡುತ್ತದೆ. ಜೊತೆಗೆ ಮಾನಸಿಕ ಒತ್ತಡ, ಆತಂಕ ಮತ್ತು ತಲೆನೋವನ್ನು ನಿವಾರಿಸುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ
ಜೀರ್ಣಕ್ರಿಯೆಯಲ್ಲಿ ಸುಧಾರಣೆ: ಅತಿಸಾರ, ಮಲಬದ್ಧತೆ, ಹುಣ್ಣು ಮತ್ತು ಹೊಟ್ಟೆಯ ತೊಂದರೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಗಿಡಮೂಲಿಕೆ ಚಹಾಗಳನ್ನು ಸೇವಿಸಬೇಕು. ಏಕೆಂದರೆ ಚಹಾದಲ್ಲಿರುವ ಔಷಧಿ ಗುಣಗಳು ಕರುಳಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವರು ಜೀರ್ಣಕ್ರಿಯೆಗಾಗಿ ಶುಂಠಿ ಮತ್ತು ಪುದೀನಾ ಚಹಾವನ್ನು ಸಹ ಸೇವಿಸುತ್ತಾರೆ. ಇದನ್ನೂ ಓದಿ: ಔಷಧಿ ಗುಣಗಳಿರುವ ಏಲಕ್ಕಿ ಸೇವನೆಯಿಂದ ಸಿಗುತ್ತೆ ಈ ಪ್ರಯೋಜನ!
ಹೃದಯದ ಆರೋಗ್ಯ: ಚಹಾವನ್ನು ಸೇವಿಸುವುದರಿಂದ ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪಾರ್ಶ್ವ ವಾಯು ಸೇರಿದಂತೆ ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ಮಾವಿನ ಹಣ್ಣು ಎಂದರೆ ಇಷ್ಟಾನಾ- ಅದರ ಪ್ರಯೋಜನಗಳ ಬಗ್ಗೆ ತಿಳಿದಿದ್ಯಾ?