ಮಾವಿನ ಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡಿ

Public TV
2 Min Read
mango images 2

ಮಾವಿನ ಹಣ್ಣು (Mango) ತಿನ್ನಲು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ (Health) ಉತ್ತಮವಾಗಿದೆ. ಬೇಸಿಗೆಯಲ್ಲಿ ಸಿಗುವ ಮಾವಿನ ಹಣ್ಣು ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ. ಇದು ವಿಟಮಿನ್ ಎ, ಸಿ, ಫೈಬರ್, ಕಬ್ಬಿಣ, ಸೋಡಿಯಂ, ಕ್ಯಾಲ್ಸಿಯಂ, ಪೊಟ್ಯಾಸಿಯಮ್‍ಗಳ ಉತ್ತಮ ಮೂಲವಾಗಿದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇಷ್ಟಲ್ಲ ಉಪಯೋಗವಿರುವ ಮಾವಿನ ಹಣ್ಣನ್ನು ತಿನ್ನುವುದಕ್ಕೂ ಮೊದಲು ಕೆಲ ಸಮಯಗಳವರೆಗೆ ನೀರಿನಲ್ಲಿ (Water) ನೆನೆಸಿಡುವುದು ಅವಶ್ಯಕವಾಗಿದೆ.

ರೋಗಗಳನ್ನು ತಡೆಯುತ್ತದೆ: ಮಾವಿನಹಣ್ಣನ್ನು ನೀರಿನಲ್ಲಿ ನೆನೆಸುವುದರಿಂದ ಕೀಟನಾಶಕಗಳು ಹಾಗೂ ರಾಸಾಯನಿಕಗಳು ದೂರವಾಗುತ್ತವೆ. ಜೊತೆಗೆ ಹಣ್ಣಿನ ಮೇಲಿನ ಧೂಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಇರಬಹುದು. ಮಾವಿನಹಣ್ಣು ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯ ಸುಧಾರಿಸುತ್ತದೆ. ಅಷ್ಟೇ ಅಲ್ಲದೇ ಕಣ್ಣು, ಕೂದಲು ಮತ್ತು ಚರ್ಮಕ್ಕೆ ಸಹ ಪ್ರಯೋಜನಕಾರಿಯಾಗಿದೆ.

mango

ರಾಸಾಯನಿಕ ಅಂಶಕ್ಕೆ ಕಡಿವಾಣ: ಮಾವಿನ ಹಣ್ಣುಗಳನ್ನು ರಕ್ಷಿಸಲು ಅನೇಕ ರೀತಿಯ ಕೀಟನಾಶಕಗಳನ್ನು ಬಳಸಲಾಗುತ್ತದೆ. ಆದರೆ ಅವೇ ನಮಗೆ ಮಾರಕವಾಗುತ್ತವೆ. ಮಾವಿನ ಹಣ್ಣನ್ನು ಹಾಗೇ ತಿನ್ನುವುದರಿಂದ ರಾಸಾಯನಿಕಗಳು ನಮ್ಮ ದೇಹಕ್ಕೆ ಸೇರಿಕೊಳ್ಳುತ್ತವೆ. ಇದರಿಂದಾಗಿ ಚರ್ಮ ರೋಗ, ತಲೆ ನೋವು, ವಾಕರಿಕೆ ಸೇರಿದಂತೆ ಅನೇಕ ರೊಗಗಳು ಬರುವ ಸಾಧ್ಯತೆಯಿರುತ್ತದೆ. ಆದರೆ 15 ನಿಮಿಷಗಳ ಮಾವಿನ ಹಣ್ಣನ್ನು ನೆನೆಸುವುದರಿಂದ ರಾಸಾಯನಿಕ ಅಂಶಗಳು ಕಡಿಮೆಗೊಳ್ಳುತ್ತವೆ. ಇದನ್ನೂ ಓದಿ: ಥೈರಾಯ್ಡ್ ರೋಗಿಗಳು ಮಲಗುವ ಮುನ್ನ ಈ ಆಹಾರ ಸೇವಿಸಿ

mango

ಚರ್ಮದ ಸಮಸ್ಯೆ ನಿವಾರಣೆ: ಮಾವಿನ ಹಣ್ಣನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡುವುದರಿಂದ ತ್ವಚೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸದೇ ಮೊಡವೆಗಳು ಹಾಗೂ ಚರ್ಮದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಷ್ಟೇ ಅಲ್ಲದೇ, ಮಲಬದ್ಧತೆ, ತಲೆನೋವು ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತವೆ. ಆದರೆ ಮಾವಿನ ಹಣ್ಣನ್ನು ನೀರಿನಲ್ಲಿ ಇರಿಸುವುದರಿಂದ ಇವೆಲ್ಲ ಸಮಸ್ಯೆಯಿಂದ ಪಾರಾಗಬಹುದು.

ದೇಹದ ಉಷ್ಣತೆ ನಿರ್ವಹಣೆ: ಸಾಮಾನ್ಯವಾಗಿ ಮಾವಿನಹಣ್ಣು ತಿಂದ ನಂತರ ದೇಹದ ಉಷ್ಣತೆ ತುಂಬಾ ಹೆಚ್ಚಾಗುತ್ತದೆ. ಅದೇ ರೀತಿ ಮಾವಿನ ಹಣ್ಣನ್ನು ನೀರಿನಲ್ಲಿ ನೆನಸುವುದರಿಂದ ದೇಹದಲ್ಲಿರುವ ಉಷ್ಣತೆಯನ್ನು ನಿರ್ವಹಣೆ ಮಾಡಬಹುದಾಗಿದೆ. ಇದನ್ನೂ ಓದಿ: ಬೇಸಿಗೆಯಲ್ಲಿ ಕಬ್ಬಿನ ಹಾಲನ್ನು ಕುಡಿಯೋದ್ರಿಂದ ಅದ್ಭುತ ಪ್ರಯೋಜನ

Share This Article