ಮೊದಲೆಲ್ಲಾ ಹೆಡ್‌ಫೋನ್ (Headphone) ಬಳಕೆ ಟ್ರೆಂಡ್ ಆಗಿತ್ತು. ಈಗಲೂ ಆ ಟ್ರೆಂಡ್ ಇದೆ. ಟ್ರೆಂಡ್ ವಿಚಾರ ಹಾಗಿರಲಿ.. ಈ ಕೋವಿಡ್ ಬಂದ್ಮೇಲೆ ಹೆಡ್‌ಫೋನ್ ಬಳಕೆ ಮತ್ತಷ್ಟು ಹೆಚ್ಚಾಗಿದೆ. ಕೋವಿಡ್ (Covid-19) ಸಾಂಕ್ರಾಮಿಕದ ಕಾರಣ, ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಪದ್ಧತಿ ರೂಢಿಗತವಾಯ್ತು. ಇದ್ರಿಂದ ಆನ್‌ಲೈನ್ ಮೀಟಿಂಗ್, ವೀಡಿಯೋ ಕಾಲ್‌ಗಾಗಿ ಹೆಡ್‌ಫೋನ್ ಬಳಕೆಯೂ ಜಾಸ್ತಿಯಾಯ್ತು.
ಅಷ್ಟೇ ಅಲ್ಲ, ಸ್ನೇಹಿತರು, ಮನೆಯವರೊಂದಿಗೆ ಮಾತನಾಡುವುದಕ್ಕೂ ಹೆಡ್‌ಫೋನ್ ಬಳಸುವವರೇ ಹೆಚ್ಚು. ನಮ್ಮಲ್ಲಿ ಅನೇಕರು ಗಂಟೆಗಳ ಕಾಲ ಹೆಡ್‌ಫೋನ್‌ಗೆ ಅಂಟಿಕೊಂಡೇ ಇರುತ್ತಾರೆ. ಒಂದರ್ಥದಲ್ಲಿ ಇದು ಉತ್ತಮ ಎನಿಸಬಹುದು. ಫೋನ್‌ನಲ್ಲಿ ನೀವು ಕೇಳುವ ಆಡಿಯೋ ಹೊರಗಿನವರಿಗೆ ಗೊತ್ತಾಗಲ್ಲ. ಮತ್ತೆ ನಿಮ್ಮಿಂದ ಹೊರಗಿನವರಿಗೆ ಡಿಸ್ಟರ್ಬ್ ಕೂಡ ಆಗಲ್ಲ. ಆದರೆ ಹೆಡ್‌ಫೋನ್‌ಗೆ ಅತಿಯಾಗಿ ಅಂಟಿಕೊಳ್ಳೋದ್ರಿಂದ ನಮಗೆ ಹಾನಿಯೇ ಹೆಚ್ಚು. ಇದನ್ನೂ ಓದಿ: ಎದೆನೋವು ಬಂದ್ರೆ ಗ್ಯಾಸ್ಟ್ರಿಕ್ ಅಂತಾ ನಿರ್ಲಕ್ಷಿಸಬೇಡಿ – ಹೃದಯಾಘಾತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವೈದ್ಯರು ಹೇಳೋದೇನು?
Advertisement
Advertisement
ಹೆಡ್‌ಫೋನ್ ಹೆಚ್ಚಾಗಿ ಬಳಸುವವರಿಗೆ ಆತಂಕಕಾರಿ ಸುದ್ದಿಯೊಂದನ್ನು BMJ ಗ್ಲೋಬಲ್ ಹೆಲ್ತ್ ಜರ್ನಲ್ ಪ್ರಕಟಿಸಿದೆ. 100 ಕೋಟಿ ಯುವಜನರು ಹೆಡ್‌ಫೋನ್ ಬಳಕೆಯಿಂದ ಶ್ರವಣ ದೋಷ (Hearing Loss) ಸಮಸ್ಯೆಯನ್ನು ಹೆದರಿಸುತ್ತಿದ್ದಾರೆ ಎಂಬ ವಿಚಾರವನ್ನು ಜರ್ನಲ್ ತನ್ನ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.
Advertisement
ವೈದ್ಯರು ಹೇಳೋದೇನು?
ಇತ್ತೀಚಿನ ದಿನಗಳಲ್ಲಿ ಶ್ರವಣ ಸಮಸ್ಯೆಯಿದೆ ಅಂತಾ ಬರುವ ರೋಗಿಗಳ ಸಂಖ್ಯೆಯೇ ಹೆಚ್ಚಿದೆ. ಹೆಡ್‌ಫೋನ್‌ಗಳ ಅತಿಯಾದ ಬಳಕೆಯಿಂದಾಗಿ ಇವರಿಗೆ ಶ್ರವಣ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದು ತಪಾಸಣೆಯಿಂದ ಗೊತ್ತಾಗಿದೆ. ಹೆಡ್‌ಫೋನ್ ಅತಿಯಾದ ಬಳಕೆ ಅವರ ನರಗಳಿಗೆ ತೀವ್ರತರ ಹಾನಿಯನ್ನುಂಟು ಮಾಡುತ್ತೆ ಎಂದು ಡಾ. ಕೆ.ಕೆ.ಹಂಡಾ ಹೇಳುತ್ತಾರೆ. ಇದನ್ನೂ ಓದಿ: ಹಾಲಿಡೇ ಹಾರ್ಟ್ ಸಿಂಡ್ರೋಮ್ ಅಂದ್ರೇನು ಗೊತ್ತಾ?
Advertisement
ಎಷ್ಟು ನಿಮಿಷ ಹೆಡ್‌ಫೋನ್ ಬಳಸಿದ್ರೆ ಉತ್ತಮ?
ದೀರ್ಘಕಾಲದವರೆಗೆ ಹೆಡ್‌ಫೋನ್‌ಗಳನ್ನು ಬಳಸಬಾರದು. ಹೆಡ್‌ಫೋನ್ ಬಳಕೆಯಿಂದ ದೂರ ಇರುವುದೇ ಉತ್ತಮ. ಬಳಸುವ ಅನಿವಾರ್ಯತೆ ಇದ್ದರೆ, ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಎಂಬುದು ವೈದ್ಯರ ಸಲಹೆ.
ಏನದು ಮುನ್ನೆಚ್ಚರಿಕೆ ಕ್ರಮ?
ಬಳಕೆ ಸಮಯ ಮಿತಿಗೊಳಿಸಿ: ಹೆಡ್‌ಫೋನ್‌ಗಳ ಬಳಕೆ ಸಮಯವನ್ನು ಮಿತಿಗೊಳಿಸಬೇಕು. ನೀವು ಪ್ರತಿ 45 ನಿಮಿಷ ಹೆಡ್‌ಫೋನ್ ಬಳಸಿದ ನಂತರ 1 ಗಂಟೆ ಅಥವಾ 10-15 ನಿಮಿಷಗಳ ಕಾಲ ವಿರಾಮವನ್ನು ತೆಗೆದುಕೊಳ್ಳುವುದು ಉತ್ತಮ. ಇದನ್ನೂ ಓದಿ: ಈ ಕ್ರಮ ಅನುಸರಿಸಿದ್ರೆ ʼಆಲ್‌ಝೈಮರ್ʼ ರೋಗ ತಡೆಗಟ್ಟಬಹುದು
ವಾಲ್ಯೂಮ್ ಕಡಿಮೆ ಮಾಡಿ: ಕೆಲವರಿಗೆ ಹೆಚ್ಚಿನ ಸಮಯ ಹೆಡ್‌ಫೋನ್ ಬಳಸುವುದು ಅನಿವಾರ್ಯವಾಗಿರುತ್ತೆ. 4-5 ಗಂಟೆಗಳ ಕಾಲ ಹೆಡ್‌ಫೋನ್ ಬಳಸಲೇಬೇಕು ಎನ್ನುವವರು, ವಾಲ್ಯೂಮ್ ಕಡಿಮೆ ಮಾಡಿಕೊಳ್ಳುವುದು ಸೂಕ್ತ. ಇದರಿಂದ ಶ್ರವಣಕ್ಕೆ ಆಗಬಹುದಾದ ಹೆಚ್ಚಿನ ಅಪಾಯವನ್ನು ತಡೆಗಟ್ಟಬಹುದು.