ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಾನೂನು ಸುವ್ಯವಸ್ಥೆ ನಿಜಕ್ಕೂ ಹದಗೆಟ್ಟಿದೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ನಗರದಲ್ಲಿ ಆರೋಪಿಯೊಬ್ಬನನ್ನು ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿಗೇ ಚಾಕು ಇರಿದ ಘಟನೆಯಿಂದ ಈ ಪ್ರಶ್ನೆ ಈಗ ಎದ್ದಿದೆ.
ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದವನನ್ನು ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿಗೆ ಚಾಕು ಇರಿತವಾಗಿರುವ ಘಟನೆ ಶಿವಾಜಿನಗರದಲ್ಲಿ (Shivajinagar) ನಡೆದಿದೆ. ಸದಾಶಿವನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸೈಯದ್ ಸಮೀವುಲ್ಲಾಗೆ ಚಾಕು ಇರಿತವಾಗಿದ್ದು, ಆರೋಪಿಯ ಕೃತ್ಯದಿಂದ ಅವರ ಕೈಗೆ ಬರೋಬ್ಬರಿ 26 ಹೊಲಿಗೆ ಬಿದ್ದಿದೆ.
Advertisement
Advertisement
ಹಸನ್ ಖಾನ್ ಎಂಬ ಆರೋಪಿಯಿಂದ ಚಾಕು ಇರಿತವಾಗಿದೆ. ಸಿಸಿಬಿ ಒಸಿಡಬ್ಲ್ಯು ಅಧಿಕಾರಿಗಳು ಹಸನ್ ಖಾನ್‌ನನ್ನು ಬಂಧಿಸುವ ಪ್ರಯತ್ನದಲ್ಲಿದ್ದರು. ಹಸನ್ ಖಾನ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈ ಹಿನ್ನೆಲೆ ಸಿಸಿಬಿ ಪೊಲೀಸರು ಶಿವಾಜಿ ನಗರದ ಆರೋಪಿಯ ಮನೆಗೆ ಬಂದಿದ್ದರು. ಅದೇ ಏರಿಯಾದಲ್ಲಿ ವಾಸವಾಗಿದ್ದ ಸದಾಶಿವನಗರ ಹೆಡ್ ಕಾನ್ಸ್‌ಟೇಬಲ್ ಸೈಯದ್ ಸಮೀವುಲ್ಲಾ ಖಾನ್ ಕೂಡಾ ಸಿಸಿಬಿ ಅಧಿಕಾರಿಗಳಿಗೆ ಸಹಾಯ ಮಾಡಲು ಹಾಗೂ ಆರೋಪಿಯನ್ನು ಹಿಡಿಯಲು ಹೋಗಿದ್ದರು. ಇದನ್ನೂ ಓದಿ: ಕೌಟುಂಬಿಕ ಕಲಹ – ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ
Advertisement
ಹೆಚ್‌ಕೆಪಿ ದರ್ಗಾದ ಸರ್ಕಲ್‌ನ ಗೂಡ್ಸ್ ಆಟೋಸ್ಟ್ಯಾಂಡ್ ಬಳಿ ನಿಂತಿದ್ದ ಹಸನ್ ಖಾನ್‌ನನ್ನು ಹಿಡಿಯಲು ಹೋದಾಗ ಸೈಯದ್ ಸಮೀವುಲ್ಲಾಗೆ ಚಾಕುವಿನಿಂದ ಇರಿದಿದ್ದಾನೆ. ಸಾರ್ವಜನಿಕರ ಎದುರೇ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಕೊಲೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಸಮೀವುಲ್ಲಾ ಸ್ಥಳೀಯರ ನೆರವಿನಿಂದ ಬಚಾವ್ ಆಗಿದ್ದಾರೆ.
Advertisement
ಇಂತಹ ಘಟನೆಗಳಿಂದ ನಗರದಲ್ಲಿ ಪೊಲೀಸರು ಎನ್ನುವ ಭಯವೇ ಇಲ್ಲ ಎಂಬಂತಾಗಿದೆ. ಪೊಲೀಸರಿಗೇ ಹೀಗಾದರೆ, ಜನಸಾಮಾನ್ಯರ ಪರಿಸ್ಥಿತಿ ಇನ್ನು ಹೇಗೆ ಎನ್ನುತ್ತಿದ್ದಾರೆ ಜನ. ಸದ್ಯ ಶಿವಾಜಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದನ್ನೂ ಓದಿ: ಡಿವೈಡರ್‌ನಲ್ಲಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ – ನಾಲ್ವರು ಸ್ಥಳದಲ್ಲೇ ಸಾವು
Web Stories