DistrictsKalaburagiKarnatakaLatestMain Post

ಕರ್ತವ್ಯ ನಿರತ ಹೆಡ್ ಕಾನ್ಸ್‌ಟೇಬಲ್‌ ಹೃದಯಾಘಾತದಿಂದ ಸಾವು

ಕಲಬುರಗಿ: ಕರ್ತವ್ಯ ನಿರತ ಹೆಡ್ ಕಾನ್ಸ್‌ಟೇಬಲ್‌ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲ್ಯಾಣಿ ಗುಗ್ಗರಿ(45) ಹೃದಯಾಘಾತದಿಂದ ಮೃತಪಟ್ಟವರು. ಕಲ್ಯಾಣಿ ಗುಗ್ಗರಿ ಅವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರು ಬಿ ಗ್ರಾಮದ ನಿವಾಸಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಕಲ್ಯಾಣಿ ಗುಗ್ಗರಿ ಕಳೆದ ರಾತ್ರಿ ಗಣೇಶ ವಿಸರ್ಜನೆ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದನ್ನೂ ಓದಿ: ಸ್ಥಳೀಯ ಕಲಾವಿದರೊಂದಿಗೆ ನೃತ್ಯ ಮಾಡಿದ ಬಾಂಗ್ಲಾ ಪ್ರಧಾನಿ – ವೀಡಿಯೋ ವೈರಲ್

ಕಳೆದ ರಾತ್ರಿ ಸುಸ್ತಾಗುತ್ತಿದ್ದರಿಂದ ಮಾತ್ರೆ ತೆಗೆದುಕೊಳ್ಳಲು ಲಾಡ್ಜ್‌ನಲ್ಲಿದ್ದ ತಮ್ಮ ಕೋಣೆಗೆ ಹೋಗಿದ್ದರು. ಈ ವೇಳೆ ಕಲ್ಯಾಣಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಸ್ವಲ್ಪ ಹೊತ್ತು ಅಲ್ಲಿಯೇ ವಿಶ್ರಾಂತಿ ಪಡೆದಿದ್ದರು. ಆದರೆ ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಹೃದಯಾಘಾತ ಸಂಭವಿಸಿದೆ. ನಂತರ ಆಸ್ಪತ್ರೆಗೆ ಹೋಗಲು ಕಲ್ಯಾಣಿ ಅವರು ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವ ಮುನ್ನವೇ ದಾರಿ ಮಧ್ಯೆಯೇ ಕಲ್ಯಾಣಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಂಕಿತ ಇಬ್ಬರು ಉಗ್ರರ ಅರೆಸ್ಟ್‌ ಕೇಸ್‌ ಎನ್‌ಐಎಗೆ ವರ್ಗಾವಣೆ

Live Tv

Leave a Reply

Your email address will not be published.

Back to top button