ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ (Head Bush) ಸಿನಿಮಾದ ವಿವಾದ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಅದರಲ್ಲೂ ಪ್ರಾಂತ್ಯ, ಭಾಷೆಯ ವಿಚಾರವನ್ನು ಇಲ್ಲಿಗೆ ಎಳೆತರಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ (Sunil Kumar) ವೀರಗಾಸೆ ಕುರಿತಾಗಿ ಟ್ವಿಟ್ ಮಾಡುತ್ತಿದ್ದಂತೆಯೇ ಅನೇಕರು ಅವರ ಮೇಲೆ ಮುಗಿ ಬಿದ್ದಿದ್ದಾರೆ. ಕೇವಲ ಒಂದು ಸಮುದಾಯಕ್ಕೆ ಮಾತ್ರ ಮಾಸಾಶನ ಕೊಟ್ಟಿದ್ದೀರಿ. ವೀರಗಾಸೆ, ಕಂಸಾಳೆ ಹೀಗೆ ಎಲ್ಲ ಜಾನಪದ ಪ್ರಕಾರದ ಕಲಾವಿದರಿಗೂ ಕೊಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದಾರೆ.
Advertisement
ವೀರಗಾಸೆಗೆ (Veeragase) ಅವಮಾನ ಆಗಿದ್ದರೆ, ಅದನ್ನು ಚಿತ್ರತಂಡ ಸರಿಪಡಿಸಿ ಎಂದು ಸಚಿವರು ಟ್ವಿಟ್ ಮಾಡಿ, ತಮ್ಮ ಕಾಳಜಿ ತೋರುತ್ತಿದ್ದಂತೆಯೇ ಬರೀ ನಿಮ್ಮ ಭಾಗದ ಕಲಾವಿದರಿಗೆ ಮಾತ್ರ ಮಾಸಾಶನ ನೀಡಿ ತಾರತಮ್ಯ ತೋರುತ್ತಿದ್ದೀರಿ. ನಿಮಗೆ ವೀರಗಾಸೆಯ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಕೂಡಲೇ ಅವರಿಗೂ ಮಾಸಾಶನ ನೀಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಇದರಿಂದಾಗಿ ಸಚಿವರು ಇರಸುಮುರಸು ಎದುರಿಸುವಂತಾಗಿದೆ. ಇದನ್ನೂ ಓದಿ: ʻಹೆಡ್ ಬುಷ್ʼ ವಿವಾದ – ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಯ್ತು #WeStandWithDhananjaya ಹ್ಯಾಷ್ ಟ್ಯಾಗ್
Advertisement
Advertisement
ಸಾವಿರಾರು ಜನರು ಸಚಿವರಿಗೆ ಟ್ವಿಟ್ ಮಾಡಿ, ಟ್ಯಾಗ್ ಮಾಡಿದ್ದಾರೆ. ಆದರೆ, ಈ ಕುರಿತು ಸುನೀಲ್ ಕುಮಾರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ, ಭರವಸೆಯನ್ನೂ ಕೊಟ್ಟಿಲ್ಲ. ಸಚಿವರ ಈ ನಡೆ ಭಾರೀ ವಿರೋಧಕ್ಕೂ ಕಾರಣವಾಗಿದೆ. ಡಾಲಿ ಧನಂಜಯ್ (Dhananjay) ಕೂಡ ಪತ್ರಿಕಾಗೋಷ್ಠಿಯಲ್ಲಿ ಮಾಸಾಶನದ ಬಗ್ಗೆ ಮಾತನಾಡಿದ್ದಾರೆ. ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಹೀಗಾಗಿ ಸರಕಾರ ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡತ್ತೋ ಕಾದು ನೋಡಬೇಕು.
Advertisement
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಿಷಬ್ ಶೆಟ್ಟಿ (Rishabh Shetty) ದೈವ ಕಟ್ಟುವವರಿಗೆ ಮಾಸಾಶನ ನೀಡಿದಂತೆ ರಾಜ್ಯದ ಇತರ ಕಲಾವಿದರಿಗೂ ಅದನ್ನು ವಿಸ್ತರಿಸಬೇಕು. ಎಲ್ಲ ಕಲಾವಿದರೂ ನನಗೆ ಒಂದೇ. ಈ ಮೂಲಕನ ನಾನೂ ಕೂಡ ಸರಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.