ಕಲಬುರಗಿ: ನಗರದ ಹೊರವಲಯದ ಬಬಲಾದ ಗ್ರಾಮದ ಬಳಿ ವ್ಯಕ್ತಿಯೊಬ್ಬನ ತಲೆ ಕಡಿದು ಹತ್ಯೆಗೈದ ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ಕೊನೆಗೂ ನಾಪತ್ತೆಯಾಗಿದ್ದ ರುಂಡ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಬುರಗಿ (Kalaburagi) ತಾಲೂಕಿನ ಬಬಲಾದ (Babalad) ಹೊರವಲಯದ ತೊಗರಿ ಹೊಲದಲ್ಲಿ ಎರಡು ದಿನಗಳ ಹಿಂದೆ ವ್ಯಕ್ತಿಯೊಬ್ಬನ ಹತ್ಯೆಗೈದಿದ್ದ ದುಷ್ಕರ್ಮಿಗಳು, ಕೊಲೆಗೈದ ಸ್ಥಳದಿಂದ 1 ಕಿ.ಮೀ ದೂರದಲ್ಲಿ ರುಂಡ ಎಸೆದು ಪರಾರಿಯಾಗಿದ್ದರು. ಈ ಘಟನೆಯ ತನಿಖೆ ಆರಂಭಿಸಿರುವ ಪೊಲೀಸರು ರುಂಡ ಪತ್ತೆ ಹಚ್ಚಿದ್ದಾರೆ. ಇದನ್ನೂ ಓದಿ: US Election: ಗೆಲುವಿನ ಸನಿಹದಲ್ಲಿ ಟ್ರಂಪ್ – ಸ್ವಿಂಗ್ ರಾಜ್ಯಗಳಲ್ಲಿ ಕಮಲಾ ಹ್ಯಾರಿಸ್‌ಗೆ ಹಿನ್ನಡೆ
Advertisement
ನ.4ರಂದು ಬಬಲಾದ ಗ್ರಾಮದ ಬಳಿ ರುಂಡವಿಲ್ಲದ ದೇಹ ಪತ್ತೆಯಾಗಿತ್ತು. ಹಾಗಾಗಿ ಪೊಲೀಸರು ರುಂಡಕ್ಕಾಗಿ ತೀವ್ರ ಹುಡುಕಾಟ ನಡೆಸಿದ್ದರು. ಇದೀಗ ರುಂಡ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೊಂಚ ನಿಟ್ಟುಸಿರು ಬಿಟ್ಟಿರುವ ಪೊಲೀಸರು, ಗುರುತು ಸಿಗದ ಸ್ಥಿತಿಯಲಿರುವ ರುಂಡವನ್ನು ವಿಧಿವಿಜ್ಞಾನ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದು, ಹತ್ಯೆಯಾದ ವ್ಯಕ್ತಿಯ ಗುರುತು ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಸಿಎಂ ಆದವರು ಆರೋಪಿಯಾಗಿ ಹಾಜರು: ಬೊಮ್ಮಾಯಿ ಟೀಕೆ
Advertisement
Advertisement
ಕಲಬುರಗಿಯ ಸಬ್‌ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನೋಡ್ರಿ ನಾನು ಸಿಎಂ ಅಂತಾ ಅಂಜಿಕೆ ಇಡ್ಕೋಬೇಡಿ: ಸಾಮಾನ್ಯ ವ್ಯಕ್ತಿಯಂತೆ ವಿಚಾರಣೆ ಎದುರಿಸಿದ ಸಿದ್ದರಾಮಯ್ಯ
Advertisement